Pathaan : ಪಠಾಣ್‌ ಅಬ್ಬರ..! ವಿವಾದದ ನಡುವೆಯೂ 429 ಕೋಟಿ ಬಾಚಿದ ಕಿಂಗ್‌ ಖಾನ್‌

ಬಾಲಿವುಡ್‌ ನಟ, ಶಾರುಖ್ ಖಾನ್ ಅಭಿನಯದ ಪಠಾಣ್‌ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಕಿಂಗ್‌ಖಾನ್‌ ಚಿತ್ರವು ಭಾರತದಲ್ಲಿ 200 ಕೋಟಿ ರೂ. ದಾಟಿದ್ದು, ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ಸದ್ಯ ಪಠಾಣ್‌ ಒಟ್ಟು ಸಂಗ್ರಹ 400 (429) ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.

Written by - Krishna N K | Last Updated : Jan 29, 2023, 06:40 PM IST
  • ಬಾಲಿವುಡ್‌ ನಟ, ಶಾರುಖ್ ಖಾನ್ ಅಭಿನಯದ ಪಠಾಣ್‌ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಅಬ್ಬರಿಸುತ್ತಿದೆ.
  • ಕಿಂಗ್‌ಖಾನ್‌ ಚಿತ್ರವು ಭಾರತದಲ್ಲಿ 200 ಕೋಟಿ ರೂ. ದಾಟಿದೆ. ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ.
  • ಸದ್ಯ ಪಠಾಣ್‌ ಒಟ್ಟು ಸಂಗ್ರಹ 400 (429) ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.
Pathaan : ಪಠಾಣ್‌ ಅಬ್ಬರ..! ವಿವಾದದ ನಡುವೆಯೂ 429 ಕೋಟಿ ಬಾಚಿದ ಕಿಂಗ್‌ ಖಾನ್‌ title=

Pathaan boxoffice : ಬಾಲಿವುಡ್‌ ನಟ, ಶಾರುಖ್ ಖಾನ್ ಅಭಿನಯದ ಪಠಾಣ್‌ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಕಿಂಗ್‌ಖಾನ್‌ ಚಿತ್ರವು ಭಾರತದಲ್ಲಿ 200 ಕೋಟಿ ರೂ. ದಾಟಿದ್ದು, ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ಸದ್ಯ ಪಠಾಣ್‌ ಒಟ್ಟು ಸಂಗ್ರಹ 400 (429) ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.

ಶನಿವಾರ, ಪಠಾಣ್ ಭಾರತದಲ್ಲಿ 53.50 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಇದರಲ್ಲಿ ಹಿಂದಿ ಆವೃತ್ತಿಯಿಂದ 51.50 ಕೋಟಿ ರೂ. ಈಗ ಭಾರತದ ಎಲ್ಲಾ ಭಾಷೆಗಳಲ್ಲಿ ರೂ 265 ಕೋಟಿ ಒಟ್ಟು ಸಂಗ್ರಹಿಸಿದೆ. ಶನಿವಾರ ಮೂರನೇ ದಿನವೂ ಸಹ ಪಠಾಣ್ 50 ಕೋಟಿ ರೂ. ಗಳಿಸಿತ್ತು. ಬೇರೆ ಯಾವ ಹಿಂದಿ ಚಿತ್ರವೂ ಬಿಡುಗಡೆಯಾದ ಮೂರನೇ ದಿನಕ್ಕೆ ಇಷ್ಟು ಕಲೆಕ್ಷನ್‌ ಮಾಡಿರಲಿಲ್ಲ. ಅಲ್ಲದೆ, ಪ್ರಪಂಚದಾದ್ಯಂತ ಇಲ್ಲಿಯವರೆಗೆ ರೂ 164 ಕೋಟಿ ($ 20 ಮಿಲಿಯನ್) ಗಳಿಕೆ ಮಾಡಿದೆ. ಪಠಾಣ್‌ ಬಾಕ್ಸ್‌ ಆಫೀಸ್‌ ಮೊತ್ತ ಮೊತ್ತ 429 ಕೋಟಿ ರೂ. ಆಗಿದೆ.

ಇದನ್ನೂ ಓದಿ: Rajinikanth : ಹೆಸರು ಬಳಸಿಕೊಂಡು ಇಮೇಜ್‌ ಡ್ಯಾಮೇಜ್‌ ಮಾಡುವವರಿಗೆ ತಲೈವಾ ವಾರ್ನಿಂಗ್‌..!

ಈ ಚಿತ್ರವು ಕಳೆದ ವರ್ಷದ ಹಿಟ್ ಬ್ರಹ್ಮಾಸ್ತ್ರ ಪಾರ್ಟ್ ಒನ್ 431 ಕೋಟಿ ಗಳಿಸಿತ್ತು. ಕೋವಿಡ್‌ ನಂತರ ಬ್ರಹ್ಮಾಸ್ತ್ರ ಹಿಂದಿ ಚಿತ್ರರಂಗದ ದೊಡ್ಡ ಹಿಟ್ ಸಿನಿಮಾ ಆಗಿತ್ತು. ಚೆನ್ನೈ ಎಕ್ಸ್‌ಪ್ರೆಸ್ (ರೂ. 397 ಕೋಟಿ) ಮತ್ತು ಹ್ಯಾಪಿ ನ್ಯೂ ಇಯರ್ (ರೂ. 424 ಕೋಟಿ) ಮೀರಿಸಿರುವ ಪಠಾಣ್‌ ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ ದಾಖಲೆ ನಿರ್ಮಿಸಿದೆ.

ಬುಧವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಪಠಾಣ್‌, ನಾಲ್ಕು ವರ್ಷಗಳ ನಂತರ ಶಾರುಖ್ ಮುಖ್ಯ ಪಾತ್ರದಲ್ಲಿ ನಟಿಸಿದ ಮೊದಲ ಚಿತ್ರವಾಗಿದೆ. ಈ ಚಿತ್ರವು ದಾಖಲೆಯ ಓಪನಿಂಗ್‌ನೊಂದಿಗೆ ಪ್ರಾರಂಭವಾಯಿತು, ಹಿಂದಿನ ಬಾಲಿವುಡ್ ಚಲನಚಿತ್ರಗಳ ಎಲ್ಲಾ ದಾಖಲೆಗಳನ್ನು ಮುರಿಯಿತು. ಎರಡೇ ದಿನಗಳಲ್ಲಿ 300 ಕೋಟಿ ರೂ.ಗಳಿಸುವ ಮೂಲಕ ಆಶ್ಚರ್ಯ ಸೃಷ್ಟಿಸಿತ್ತು. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ಸಲ್ಮಾನ್ ಖಾನ್‌ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News