ಬಿಡುಗಡೆಗೂ ಮುನ್ನವೇ 'ಸಲಾರ್' ಅಬ್ಬರಕ್ಕೆ ಹೆದರಿದ ʼಶಾರುಖ್ʼ : ʼಡಂಕಿʼ ರಿಲೀಸ್‌ ಡೇಟ್‌ ಮುಂದಕ್ಕೆ

Dunki postponed : ಡಿಸೆಂಬರ್ 22 ರಂದು ಶಾರುಖ್ ಖಾನ್ ( Shah Rukh Khan ) ಮತ್ತು ಪ್ರಭಾಸ್ (Prabhas) ನಟನೆಯ ಸಿನಿಮಾಗಳು ಮುಖಾಮುಖಿಯಾಗಬೇಕಿತ್ತು. ಆದ್ರೆ ಇದೀಗ ಸ್ಪರ್ಧೆಯಿಂದ ಡಂಕಿ ಸಿನಿಮಾ ಹಿಂದೆ ಸರಿದಿದ್ದು, ರಿಲೀಸ್‌ ಡೇಟ್‌ ಬದಲಾವಣೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ..

Written by - Krishna N K | Last Updated : Oct 13, 2023, 02:55 PM IST
  • ʼಡಂಕಿʼ ರಿಲೀಸ್‌ ಡೇಟ್‌ ಮುಂದಕ್ಕೆ
  • 'ಸಾಲಾರ್' ಅಬ್ಬರಕ್ಕೆ ಹೆದರಿದ ʼಶಾರುಖ್ʼ
  • ಸ್ಪರ್ಧೆಯಿಂದ ಡಂಕಿ ಸಿನಿಮಾ ಹಿಂದೆ ಸರಿದಿದೆ
ಬಿಡುಗಡೆಗೂ ಮುನ್ನವೇ 'ಸಲಾರ್' ಅಬ್ಬರಕ್ಕೆ ಹೆದರಿದ ʼಶಾರುಖ್ʼ : ʼಡಂಕಿʼ ರಿಲೀಸ್‌ ಡೇಟ್‌ ಮುಂದಕ್ಕೆ title=
Salaar

Shah Rukh Khan vs Prabhas : ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ಇದೇ ವರ್ಷ ಡಿಸೆಂಬರ್‌ನಲ್ಲಿ ಪ್ರಭಾಸ್ ಗೆ ಪೈಪೋಟಿ ನೀಡುತ್ತಿರುವ ವಿಚಾರ ಗೊತ್ತೇ ಇದೆ. ಡಿಸೆಂಬರ್ 22 ರಂದು ಶಾರುಖ್ ಅಭಿನಯದ 'ಡಂಕಿ' (Dunki) ಮತ್ತು ಪ್ರಭಾಸ್ ಅಭಿನಯದ 'ಸಲಾರ್' (Salaar) ಚಿತ್ರಗಳು ರಿಲೀಸ್‌ ಆಗಲಿವೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಈ ಎರಡು ಸಿನಿಮಾಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. 

ಅಲ್ಲದೆ, ಶಾರುಖ್ ಮತ್ತು ಪ್ರಭಾಸ್ ಅಭಿಮಾನಿಗಳ ನಡುವೆ ವಾರ್ ನಡೆದಿದೆ. ಸಲಾರ್ ಗೆ ಪೈಪೋಟಿ ನೀಡಿದರೆ ಶಾರುಖ್ ಖಾನ್ ಚಿತ್ರಕ್ಕೆ ಹಿನ್ನಡೆಯಾಗಲಿದೆ ಎಂಬುದು ಹಲವು ಚಿತ್ರ ವಿಶ್ಲೇಷಕರ ಅಭಿಪ್ರಾಯ. ಭಾರತೀಯ ಚಿತ್ರರಂಗದ ಅತ್ಯಂತ ಕ್ರೇಜ್ ಹೊಂದಿರುವ ಚಿತ್ರಗಳಲ್ಲಿ 'ಸಾಲಾರ್' ಕೂಡ ಒಂದು.

ಇದನ್ನೂ ಓದಿ: ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ ದುರಂತ..! 2 ರಾಷ್ಟ್ರ ಪ್ರಶಸ್ತಿ ವಿಜೇತ ಸೆಲೆಬ್ರಿಟಿ ನಿಧನ

‘ಸಾಲಾರ್’ ಮತ್ತು ‘ಡಂಕಿ’ ಚಿತ್ರಗಳು ಒಂದೆ ದಿನ ಬಿಡುಗಡೆಯಾದರೆ ಎರಡೂ ಚಿತ್ರಗಳಿಗೆ ನಷ್ಟವಾಗುವ ಸಾಧ್ಯತೆ ಇದೆ ಟ್ರೇಡ್ ವಲಯಗಳು ಹೇಳುತ್ತಿವೆ. ಸೌತ್‌ನಲ್ಲಿ 'ಸಲಾರ್' ಸಿನಿಮಾದ ಅಬ್ಬರಕ್ಕೆ 'ಡಂಕಿ' ಸೋಲು ಕಾಣಬಹುದು ಎಂಬ ವರದಿಗಳಿವೆ. ಆದ್ರೆ ಬಾಲಿವುಡ್‌ನಲ್ಲಿ 'ಡಂಕಿ' ಸಿನಿಮಾ ಹೆಚ್ಚು ಥಿಯೇಟರ್ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇರುವುದರಿಂದ 'ಸಲಾರ್' ಚಿತ್ರಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ.

ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಡಿಸೆಂಬರ್ 22 ರ ರೇಸ್ ನಿಂದ ಶಾರುಖ್ 'ಡಂಕಿ' ಹೊರಬಿದ್ದಿದೆ ಎನ್ನಲಾಗಿದೆ. ಅದರೊಂದಿಗೆ ಪ್ರಭಾಸ್ 'ಸಲಾರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋಲೋ ಆಗಿ ನಿಲ್ಲುವ ಸಾಧ್ಯತೆ ಹೆಚ್ಚಿದೆ. 'ಸಾಲಾರ್' ಚಿತ್ರಕ್ಕೆ ಪೈಪೋಟಿ ನೀಡಿ ಬಿಡುಗಡೆಯಾಗಲಿರುವ ಶಾರುಖ್ ಖಾನ್ ಅಭಿನಯದ 'ಡಂಕಿ' ರಿಲೀಸ್‌ ಡೇಟ್‌ ಪೋಸ್ಟ್ ಫೋನ್ ಆಗಲಿದೆ ಎಂಬ ಮಾತು ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ: ಸಮಂತಾ ರುತ್​ ಪ್ರಭು ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ!

ಅಲ್ಲದೆ, ಸದ್ಯದಲ್ಲೇ 'ಡಂಕಿ' ಪೋಸ್ಟ್ ಫೋನ್‌ ಸುದ್ದಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ, 'ಡಂಕಿ' ಮುಂದೂಡಿಕೆಗೆ ಕೆಲವು ಕಾರಣಗಳಿವೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಹಾಗೂ ವಿಎಫ್ ಎಕ್ಸ್ ಕೆಲಸಗಳು ಡಿಸೆಂಬರ್ 22ಕ್ಕೆ ಮುಗಿಯುವುದು ಅನುಮಾನ ಎನ್ನಲಾಗಿದ್ದು, ಹೀಗಾಗಿ ಚಿತ್ರವನ್ನು ಮುಂದೂಡಲು ಚಿತ್ರತಂಡ ಚಿಂತನೆ ನಡೆಸಿದೆ. 

ಈ ಮಟ್ಟಿಗೆ ಡಿಸೆಂಬರ್ 22ಕ್ಕೆ ಬದಲಾಗಿ ಶಾರುಖ್ ಅಭಿನಯದ ‘ಡಂಕಿ’ ಸಿನಿಮಾವನ್ನು ಮುಂದಿನ ವರ್ಷಾರಂಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 22 ರಂದು 'ಸಾಲಾರ್' ಬಾಕ್ಸ್ ಆಫೀಸ್ ಒಂಟಿ ಸಲಗದಂತೆ ಘರ್ಜನೆ ಮಾಡುವ ಸಾಧ್ಯತೆ ಇದೆ.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್‌ ಸಿನಿಮಾದಲ್ಲಿ ಪ್ರಭಾಸ್ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ರೂ.250 ಕೋಟಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಶ್ರುತಿ ಹಾಸನ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರಂ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News