ಹಿರಿಯ ನಟ ನಿರ್ದೇಶಕ ಸತೀಶ್ ಕೌಶಿಕ್ ವಿಧಿ ವಶ !

 Satish Kaushik Death: ಖ್ಯಾತ ನಟ ಸತೀಶ್ ಕೌಶಿಕ್ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ.   ಫಾರ್ಮ್‌ಹೌಸ್‌ನಿಂದ ಹಿಂತಿರುಗುತ್ತಿದ್ದಾಗ, ಸತೀಶ್ ಕೌಶಿಕ್ ಕಾರಿನಲ್ಲಿ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಗುರ್ಗಾಂವ್‌ನ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ. 

Written by - Ranjitha R K | Last Updated : Mar 9, 2023, 10:23 AM IST
  • ಖ್ಯಾತ ನಟ ಸತೀಶ್ ಕೌಶಿಕ್ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ.
  • ತಡರಾತ್ರಿ ಕಾಣಿಸಿಕೊಂಡ ಹೃದಯಾಘಾತ
  • ಮರಣೋತ್ತರ ಪರೀಕ್ಷೆಯ ನಂತರ ಮುಂಬೈಗೆ ಮೃತದೇಹ
ಹಿರಿಯ ನಟ ನಿರ್ದೇಶಕ ಸತೀಶ್ ಕೌಶಿಕ್ ವಿಧಿ ವಶ !  title=

ನವದೆಹಲಿ : ಖ್ಯಾತ ನಟ ಸತೀಶ್ ಕೌಶಿಕ್ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ.  ಸ್ನೇಹಿತರ ಸಲಹೆಯಂತೆ ಹೋಳಿ ಆಚರಿಸಲು  ದೆಹಲಿಗೆ ಬಂದಿದ್ದ ಸತೀಶ್ ಕೌಶಿಕ್ ಆರೋಗ್ಯದಲ್ಲಿ ತಡರಾತ್ರಿ ವ್ಯತ್ಯಾಸ ಕಂಡು ಬಂದಿದೆ. ನಂತರ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ. ನಂತರ ಸತೀಶ್ ಕೌಶಿಕ್ ಮೃತದೇಹವನ್ನು  ದೀನದಯಾಳ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. 

ಸತೀಶ್ ಕೌಶಿಕ್ ಗುರ್ಗಾಂವ್‌ನ ಫಾರ್ಮ್‌ಹೌಸ್‌ಗೆ ಸ್ನೇಹಿತರನ್ನು  ಭೇಟಿಯಾಗಲು ಹೋಗಿದ್ದರು ಎಂದು ಕೌಶಿಕ್‌ನ ಸ್ನೇಹಿತ ಅನುಪಮ್ ಖೇರ್ ಹೇಳಿದ್ದಾರೆ. ಫಾರ್ಮ್‌ಹೌಸ್‌ನಿಂದ ಹಿಂತಿರುಗುತ್ತಿದ್ದಾಗ, ಸತೀಶ್ ಕೌಶಿಕ್ ಕಾರಿನಲ್ಲಿ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಗುರ್ಗಾಂವ್‌ನ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ. 

ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿ ಬಾಸ್‌..!

ಮರಣೋತ್ತರ ಪರೀಕ್ಷೆಯ ನಂತರ  ಮುಂಬೈಗೆ  ಮೃತದೇಹ : 
ಸದ್ಯ ಕೌಶಿಕ್ ಮೃತದೇಹ ದೆಹಲಿಯ ದೀನ್ ದಯಾಳ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಹನ್ನೊಂದು ಗಂಟೆ ಸುಮಾರಿಗೆ  ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಇದಾದ ನಂತರ   ಅವರ ಮೃತದೇಹವನ್ನು ಮುಂಬೈಗೆ ಕಳುಹಿಸಲಾಗುವುದು. ಮಾಹಿತಿ ಪ್ರಕಾರ, ಸತೀಶ್ ಕೌಶಿಕ್ ಅವರ ಮೃತದೇಹ ಮಧ್ಯಾಹ್ನ 2:00 ಗಂಟೆ ವೇಳೆಗೆ ಮುಂಬೈ ತಲುಪಲಿದೆ. 

ಗೃಹ ಸಚಿವ ಅಮಿತ್ ಶಾ ಸಂತಾಪ  : 
ನಟ ಸತೀಶ್ ಕೌಶಿಕ್ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು ಎಂದು ಶಾ ಹೇಳಿದ್ದಾರೆ.

 

ಇದನ್ನೂ ಓದಿ : Womens Day 2023 : ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಗೆದ್ದ ಸಾಹಸಿ ನಟಿ ; ಹಂಸ ನಂದಿನಿ

ಸತೀಶ್ ಕೌಶಿಕ್ ಯಾರು? :
ಸತೀಶ್ ಕೌಶಿಕ್ ಅವರು 13 ಏಪ್ರಿಲ್ 1956 ರಂದು ಹರಿಯಾಣದ ಮಹೇಂದ್ರಗಢದಲ್ಲಿ ಜನಿಸಿದರು. ದೆಹಲಿಯ ಬಾಗ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಫಿಲ್ಮ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆಯ ತಂತ್ರಗಳನ್ನು ಕಲಿತರು. ನಂತರ  1972 ರಲ್ಲಿ ದೆಹಲಿಯ ಕಿರೋರಿ ಮಾಲ್ ಕಾಲೇಜಿನಲ್ಲಿ ಪದವಿ ಪಡೆದರು. 1985 ರಲ್ಲಿ ಶಶಿ ಕೌಶಿಕ್ ಅವರನ್ನು ವಿವಾಹವಾದ ಸತೀಶ್ ಗೆ ಇಬ್ಬರು ಮಕ್ಕಳು. ಅವರ ಮಗ ಶಾನು ಕೌಶಿಕ್ 1996 ರಲ್ಲಿ ಕೇವಲ ಎರಡನೆ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದ್ದರು. ಇದಾದ ನಂತರ 2012ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವರ ಜೀವನಕ್ಕೆ ಮಗಳು ವಂಶಿಕಾ  ಪ್ರವೇಶವಾಗಿತ್ತು. 

ಸತೀಶ್ ಕೌಶಿಕ್ 1983 ರಲ್ಲಿ ಜಾನೇ ಭಿ ದೋ ಯಾರೋನ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 'ಮಿಸ್ಟರ್ ಇಂಡಿಯಾ', ಸಾಜನ್ ಚಲೇ ಸಸುರಲ್ ಮತ್ತು ಆಂಟಿ ನಂಬರ್ ಒನ್‌ನಂತಹ ಅನೇಕ ಹಿಟ್ ಚಿತ್ರಗಳಲ್ಲಿ ಕೌಶಿಕ್ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News