ರಾಂಗ್‌ ಟೈಮ್‌ನಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ರಿಲೀಸ್: ‌ಥಿಯೇಟರ್‌ಗಳಿಗೆ ಪ್ರೇಕ್ಷಕರ ಬರ!

Sapta Sagaradaache Ello Side B: ರಕ್ಷಿತ್‌ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದ್ದಿರು, ಜನ ಥಿಯೇಟರ್‌ಗೆ ಬರ್ತಿಲ್ಲ ಎಂದು ಬೇಸರ ವ್ಯಕ್ತವಾಗಿದೆ.  

Written by - Zee Kannada News Desk | Last Updated : Nov 21, 2023, 11:46 AM IST
  • ಸಪ್ತಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದ್ದಿದ್ದು, ಚಿತ್ರ ನೋಡಿದ ಬಹುತೇಕರು ತಂಡದ ಶ್ರಮವನ್ನು ಮೆಚ್ಚಿಕೊಂಡಾಡುತ್ತಿದ್ದಾರೆ.
  • ಫಸ್ಟ್ ವೀಕೆಂಡ್ ಮುಗಿಯುತ್ತಿದ್ದಂತೆ ಚಿತ್ರತಂಡ ಟಿಕೆಟ್ ದರದಲ್ಲಿ ಕಡಿತ ಘೋಷಿಸಿದ್ದರು, ಥಿಯೇಟರ್‌ಗಳಿಗೆ ಪ್ರೇಕ್ಷಕರು ಬರುತ್ತಿಲ್ಲ.
  • ಚಿತ್ರದ ಹೈಪ್ ಕ್ರಿಯೇಟ್ ಆಗದ ಕಾರಣಕ್ಕೆ ಜನ ಥಿಯೇಟರ್‌ಗೆ ಬರ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಾಂಗ್‌ ಟೈಮ್‌ನಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ರಿಲೀಸ್: ‌ಥಿಯೇಟರ್‌ಗಳಿಗೆ ಪ್ರೇಕ್ಷಕರ ಬರ!  title=

Sapta Sagaradaache Ello Side B: ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದ್ದಿದ್ದು, ಚಿತ್ರ ನೋಡಿದ ಬಹುತೇಕರು ತಂಡದ ಶ್ರಮವನ್ನು ಮೆಚ್ಚಿಕೊಂಡಾಡುತ್ತಿದ್ದಾರೆ. ಪ್ರತಿ ದೃಶ್ಯದ ಬಗ್ಗೆ ಮಾತನಾಡುತ್ತಿದ್ದರು, ಆದರೂ ಸಿನಿಮಾ ಪ್ರೇಕ್ಷಕರ ಬರ ಎದುರಿಸುತ್ತಿದೆ. ಕಳೆದ ಶುಕ್ರವಾರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ತೆರೆಕಂಡಿದ್ದು, ತಮಿಳುನಾಡಿನಲ್ಲೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಒಂದು ಸೂಪರ್ ಹಿಟ್ ಸೀಕ್ವೆಲ್‌ಗೆ ಸಿಗಬೇಕಾದ ಕಲೆಕ್ಷನ್ ಸಿಗುತ್ತಿಲ್ಲ. ಫಸ್ಟ್ ವೀಕೆಂಡ್ ಮುಗಿಯುತ್ತಿದ್ದಂತೆ ಚಿತ್ರತಂಡ ಟಿಕೆಟ್ ದರದಲ್ಲಿ ಕಡಿತ ಘೋಷಿಸಿದ್ದರು, ಥಿಯೇಟರ್‌ಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

'ಸಪ್ತಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ಚೆನ್ನಾಗಿದ್ದರೂ ಸರಿಯಾದ ಸಮಯದಲ್ಲಿ ರಿಲೀಸ್ ಮಾಡಿಲ್ಲ, ಪ್ರಚಾರ ತಕ್ಕಮಟ್ಟಿಗೆ ಆಗಲಿಲ್ಲ ಎಂದು ಸಿನಿರಸಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಬಿಡುಗಡೆಯಾದ 3ನೇ ದಿನಕ್ಕೆ ಭಾರತ Vs ಆಸ್ಟ್ರೇಲಿಯಾ ವರ್ಲ್ಡ್ ಕಪ್‌ ಫೈನಲ್ ಮ್ಯಾಚ್ ಇದಿದ್ದರಿಂದ ಭಾನುವಾರ ಯಾರೂ ಕೂಡ ಸಿನಿಮಾ ನೋಡವ ಗುಂಗಲ್ಲಿ ಇರಲಿಲ್ಲ. ಫಸ್ಟ್ ವೀಕೆಂಡ್ ಕ್ರೂಷಿಯಲ್ ದಿನದಂದೇ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬರದಿರುವುದು, ಚಿತ್ರಕ್ಕೆ ಹಿನ್ನಡೆ ತಂದಿರುವುದು ಸುಳ್ಳಲ್ಲ. ಸೈಡ್- A ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿತ್ತು. ಆದರೆ ಸೈಡ್- B ಚಿತ್ರಕ್ಕೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡದಿರುವುದು, ಬಹುತೇಕರಿಗೆ ಚಿತ್ರ ರಿಲೀಸ್ ಆಗಿರುವುದು ಗೊತ್ತಿಲ್ಲ.

ಇದನ್ನು ಓದಿ: ಫಾರಂ‌ಹೌಸ್ ನಲ್ಲಿ ಸಂಜು ವೆಡ್ಸ್ ಗೀತಾ

ಚಿತ್ರದ ಹೈಪ್ ಕ್ರಿಯೇಟ್ ಆಗದ ಕಾರಣಕ್ಕೆ ಜನ ಥಿಯೇಟರ್‌ಗೆ ಬರ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್, ರುಕ್ಮಿಣಿ, ಚೈತ್ರಾ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿ ಮಾತನಾಡಿದರೂ ದೊಡ್ಡಮಟ್ಟದಲ್ಲಿ ರೀಚ್ ಆಗಿಲ್ಲ ಎನ್ನುವವರು ಇದ್ದಾರೆ. ಕೆಲವರು ಸೈಡ್- Bಗಿಂತ ಸೈಡ್- A ಚೆನ್ನಾಗಿತ್ತು. ಎರಡೂ ಸಿನಿಮಾ ಸೇರಿಸಿ ಒಂದೇ ಸಿನಿಮಾ ಮಾಡಬಹುದಿತ್ತು. ಒಂದೇ ಚಿತ್ರದಲ್ಲಿ ಅಷ್ಟು ಕತೆ ಹೇಳಿದ್ದರೆ ಇನ್ನು ಚೆನ್ನಾಗಿತ್ತು, ಇದೇ ಕೆಲವರು ಥಿಯೇಟರ್‌ಗೆ ಬರಲು ಹಿಂದೇಟು ಹಾಕಲು ಕಾರಣ ಎನ್ನುವ ವಾದವನ್ನು ಮುಂದಿಡುತ್ತಾರೆ. ಕೆಲವರು ಓಟಿಟಿ ರಿಲೀಸ್‌ಗಾಗಿ ಕಾದು ಕೂತಿದ್ದಾರೆ. 

ಹಾಗಾಗಿ ಸಹಜವಾಗಿಯೇ ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಬರ ಎದ್ದು ಕಾಣುತ್ತಿದ್ದು, ಈ ವರ್ಷ ಕನ್ನಡ ಚಿತ್ರರಂಗ ಭಾರೀ ಹಿನ್ನಡೆ ಅನುಭವಿಸಿದೆ. ದೊಡ್ಡ ದೊಡ್ಡ ಸಿನಿಮಾಗಳ ಬರ ಎದುರಿಸಿತ್ತು, ಒಂದೆರಡು ಒಳ್ಳೆ ಸಿನಿಮಾ ಗೆಲುವಿನ ನಗೆಬೀರಿತ್ತು. ಉಳಿದಂತೆ ಈ ವರ್ಷ ಕನ್ನಡ ಸಿನಿಮಾಗಳ ಸಾಧನೆ ಕಳಪೆ ಎಂದೇ ಅನಿಸಿಕೊಂಡರೆ, ಆದರೆ 'ಸಪ್ತಸಾಗರದಾಚೆ ಎಲ್ಲೋ' ಒಳ್ಳೆ ಸಿನಿಮಾ ಎನಿಸಿಕೊಂಡಿದೆ. ಆದರೂ ಈಗ ಸೀಕ್ವೆಲ್‌ ನೋಡೋಕೆ ಪ್ರೇಕ್ಷಕರು ಹಿಂದೇಟು ಹಾಕುತ್ತಿರುವುದು ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಪ್ರದರ್ಶನ ಕಾಣುತ್ತದೆ ಎಂದು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News