ಮುದ್ದಾದ ಗಂಡು ಮಗುವಿನ ತಾಯಿಯಾದ ನಟಿ ಹರಿಪ್ರಿಯಾ.. ಎಷ್ಟು ಕ್ಯೂಟ್‌ ವಸಿಷ್ಠ ಸಿಂಹನ ಸುಪುತ್ರ!

Actress Haripriya baby : ಕನ್ನಡದ ಖ್ಯಾತ ತಾರಾ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮುದ್ದಾದ ಗಂಡು ಮಗುವನ್ನು ಸ್ವಾಗತಿಸಿದ್ದಾರೆ.   

Written by - Chetana Devarmani | Last Updated : Jan 27, 2025, 08:10 AM IST
  • ಕನ್ನಡದ ಖ್ಯಾತ ತಾರಾ ಜೋಡಿ
  • ಗಂಡು ಮಗುವಿಗೆ ತಾಯಿಯಾದ ನಟಿ ಹರಿಪ್ರಿಯಾ
  • ವಸಿಷ್ಠ ಸಿಂಹ - ಹರಿಪ್ರಿಯಾ ಮನೆಗೆ ಹೊಸ ಸದಸ್ಯನ ಆಗಮನ
ಮುದ್ದಾದ ಗಂಡು ಮಗುವಿನ  ತಾಯಿಯಾದ ನಟಿ ಹರಿಪ್ರಿಯಾ.. ಎಷ್ಟು ಕ್ಯೂಟ್‌ ವಸಿಷ್ಠ ಸಿಂಹನ ಸುಪುತ್ರ! title=
ವಸಿಷ್ಠ ಸಿಂಹ - ಹರಿಪ್ರಿಯಾ

Actress Haripriya baby : ಕನ್ನಡದ ಖ್ಯಾತ ತಾರಾ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮುದ್ದಾದ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ನಿನ್ನೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತಮ್ಮ ಮದುವೆಯ ವಾರ್ಷಿಕೋತ್ಸವದ ದಿನವೇ ಸಿಹಿ ಸುದ್ದಿ ನೀಡಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ನಟಿ ಹರಿಪ್ರಿಯಾ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮನೆಗೆ ಹೊಸ ಸದಸ್ಯನ ಆಗಮನದ ಸುದ್ದಿ ಕೇಳಲು ಬೆಳಗ್ಗೆಯಿಂದಲೇ ಅಭಿಮಾನಿಗಳು ಕಾತುರರಾಗಿದ್ದರು. 

ಸಂಜೆ ವೇಳೆಗೆ ಹರಿಪ್ರಿಯಾ ಅವರು ತಾಯಿಯಾದ ಸುದ್ದಿ ಸಿಕ್ಕಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿನ ಆಗಮನದಿಂದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರ ಕುಟುಂಬದಲ್ಲಿ ಸಂತಸ ಮೂಡಿದೆ.  ನಟಿ ಹರಿಪ್ರಿಯಾ ತಾಯಿಯಾದ ವಿಚಾರವನ್ನು ವಸಿಷ್ಠ ಸಿಂಹ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ರಿವೀಲ್‌ ಮಾಡಿದ್ದಾರೆ. ತಮ್ಮ ಆನಿವರ್ಸರಿ ದಿನವೇ ಮಗ ಬಂದಿದ್ದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ. ನೆಟ್ಟಿಗರು, ಅಭಿಮಾನಿಗಳು, ಸಿನಿರಂಗದವರು ಅಭಿನಂದನೆ ತಿಳಿಸುತ್ತಿದ್ದಾರೆ. 

ಇದನ್ನೂ ಓದಿ: ಅಪ್ಸರೆಗಿಂತಲೂ ಸೌಂದರ್ಯವತಿ.. ಖ್ಯಾತ ನಟನ ಪ್ರೇಮಪಾಶಕ್ಕೆ ಬಿದ್ದು ಸ್ಟೀರಾಯ್ಡ್ ಸೇವಿಸಿ ಕೆರಿಯರ್ ಹಾಳು ಮಾಡಿಕೊಂಡ ಹಿರಿಯ ನಟಿ!

ಬೆಂಗಳೂರಿನ ಅಕ್ಷಯ್ ಆಸ್ಪತ್ರೆಯಲ್ಲಿ ನಟಿ ಹರಿಪ್ರಿಯಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.  ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ 2023ರ ಜನವರಿ 26ರಂದು ಅಂದರೆ 2 ವರ್ಷದ ಹಿಂದೆ ಮದುವೆ ಆಗಿದ್ದರು. 2025ರ ಜನವರಿ 26ರಂದು ಪುತ್ರ ಜನಿಸಿದ್ದಾನೆ.  

 

 
 
 
 

 
 
 
 
 
 
 
 
 
 
 

A post shared by Vasishta N Simha (@imsimhaa)

 

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಪ್ರೀತಿಸಿ ಮದುವೆ ಆದ ಜೋಡಿಗಳಲ್ಲಿ ಒಂದು. ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಬಹುದಿನಗಳ ಕಾಲ ತಮ್ಮ ಪ್ರೇಮ ಸಂಗತಿಯನ್ನು ಗುಟ್ಟಾಗಿಯೇ ಇಟ್ಟಿದ್ದರು. ಮದುವೆ ಆಗುವುದಕ್ಕೂ ಕೆಲ ದಿನಗಳ ಮುಂಚೆ ಈ ವಿಚಾರವನ್ನು ರಿವೀಲ್‌ ಮಾಡಿದರು. ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಕೂಡ ನಟಿ ಹರಿಪ್ರಿಯಾ ನಟಿಸಿದ್ದು, ಸಖತ್‌ ಫೇಮಸ್ ಆಗಿದ್ದಾರೆ. ವಸಿಷ್ಠ ಸಿಂಹ ಕೂಡ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದು ತಮ್ಮ ಗಾನ ಸಿರಿಯ ಮೂಲಕವೂ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.  

ಇದನ್ನೂ ಓದಿ: ಹೆತ್ತ ತಂದೆ ಜೊತೆಯೇ ಸ್ಟಾರ್‌ ನಟಿ ಸಂಬಂಧ! ಅಪ್ಪ ಮಗಳ ಲಿಪ್‌ ಲಾಕ್‌ ಫೋಟೋ ವೈರಲ್‌... ಸಿನಿರಂಗವೇ ಶಾಕ್‌?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News