2022 ರಲ್ಲಿ 4 ಕೋಟಿ... 2024ರಲ್ಲಿ ಎಷ್ಟು ಸಂಭಾವನೆ ಪಡಿಯುತ್ತಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ?

Rishab Shetty: ನಟ, ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಿಷಬ್‌ ಶೆಟ್ಟಿ ಕಾಂತಾರ ಚಿತ್ರದಿಂದ ದೊಡ್ಡ ಯಶಸ್ಸು ಗಳಿಸಿದರು.. ಇದೀಗ ಈ ಭರವಸೆಯ ನಾಯಕನ ಸಂಭಾವನೆ ಕುರಿತಾದ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..  

Written by - Savita M B | Last Updated : Mar 17, 2024, 05:25 PM IST
  • ಕಾಂತಾರಾ ಚಿತ್ರದ ಮೂಲಕ ರಿಷಬ್ ಶೆಟ್ಟಿ ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ
  • ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು.
  • ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ, ರಿಷಬ್ ಶೆಟ್ಟಿ 2016 ರಲ್ಲಿ ರಿಕ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.
2022 ರಲ್ಲಿ 4 ಕೋಟಿ... 2024ರಲ್ಲಿ ಎಷ್ಟು ಸಂಭಾವನೆ ಪಡಿಯುತ್ತಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ?  title=

Actor and Director Rishab Shetty: ಕಾಂತಾರಾ ಚಿತ್ರದ ಮೂಲಕ ರಿಷಬ್ ಶೆಟ್ಟಿ ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ... ಇವರು 2006 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಸೈನೈಡ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ, ರಿಷಬ್ ಶೆಟ್ಟಿ 2016 ರಲ್ಲಿ ರಿಕ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.

ನಂತರ ಅದೇ ವರ್ಷದಲ್ಲಿ ಅವರು ಕಿರಿಕ್ ಪಾರ್ಟಿ ಎಂಬ ಚಿತ್ರವನ್ನು ಸಹ ನಿರ್ದೇಶಿಸಿದರು. ಈ ಎರಡೂ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆದವು. ಈ ಎರಡೂ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ಸಹೋದರ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಇಷ್ಟೇ ಅಲ್ಲ.. ಈಗ ಜನಪ್ರಿಯ ಪ್ಯಾನ್-ಇಂಡಿಯನ್ ನಟಿಯಾಗಿರುವ ರಶ್ಮಿಕಾ ಮಂದಣ್ಣ ಅವರನ್ನು ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯಿಸಿದವರು ರಿಷಬ್ ಶೆಟ್ಟಿ.

ಇದನ್ನೂ ಓದಿ-ಸ್ಟಾರ್‌ ಪಟ್ಟ ಬಂದ್ಮೇಲೆ ನಟ ನಾನಿ ನಡುವಳಿಗೆ ಬೇರೆ ಆಗಿದೆ..! ನಿರ್ದೇಶಕನ ಹೇಳಿಕೆ ವೈರಲ್‌

 2018 ರಲ್ಲಿ, ರಿಷಬ್ ಶೆಟ್ಟಿ ನಿರ್ದೇಶನದ 'ಸಹಿ ಪ್ರಾ ಶಾಲೆ ಕಾಸರಕೋಡುʼ ಎಂಬ ಚಿತ್ರವು ಅತ್ಯುತ್ತಮ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿ ನಿರ್ಮಾಪಕನ ಪಾತ್ರವನ್ನೂ ನಿಭಾಯಿಸಿದ್ದಾರೆ. 

ಆ ನಂತರ ಸುಮಾರು 4 ವರ್ಷಗಳ ಪರಿಶ್ರಮದ ನಂತರ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಕಾಂತಾರ ಕಳೆದ ಸೆಪ್ಟೆಂಬರ್ 2022 ರಲ್ಲಿ ತೆರೆಗೆ ಅಪ್ಪಳಿಸಿತು. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಅಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ ಎಂದು ತಿಳಿದ ಇತರೆ ಭಾಷೆಯ ನಿರ್ಮಾಪಕರು ಡಬ್ಬಿಂಗ್ ರೈಟ್ಸ್ ಖರೀದಿಸಿ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದರು. ಈ ಸಿನಿಮಾ ತೆರೆಕಂಡಲ್ಲೆಲ್ಲ ಒಮ್ಮತದ ಸ್ವಾಗತ ದೊರೆಯಿತು. ಇದರಿಂದಾಗಿ ಕೇವಲ 15 ಕೋಟಿ ಬಜೆಟ್ ನಲ್ಲಿ ತಯಾರಾದ ಚಿತ್ರ ವಿಶ್ವಾದ್ಯಂತ ರು.400 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಇದನ್ನೂ ಓದಿ-’ಭುವನಂ ಗಗನಂ’ ಸಿನಿಮಾಗೆ ಧ್ರುವ ಸರ್ಜಾ ಸಾಥ್..ಮಾನ್ಸೂನ್ ಗೆ ಪೃಥ್ವಿ-ಪ್ರಮೋದ್ ಸಿನಿಮಾ ತೆರೆಗೆ!

ಕಾಂತಾರ ಚಿತ್ರದ ಯಶಸ್ಸಿನ ನಂತರ, ನಿರ್ದೇಶಕ ರಿಷಬ್ ಶೆಟ್ಟಿ ಮುಂದಿನ ಭಾಗವನ್ನು ನಿರ್ದೇಶಿಸಲು ನಿರ್ಧರಿಸಿದ್ದಾರೆ. ಈಗ ಒಂದೇ ಚಿತ್ರದ ಮೂಲಕ ಖ್ಯಾತಿ ಗಳಿಸಿದ ರಿಷಬ್ ಶೆಟ್ಟಿ ಆಸ್ತಿ ಮೌಲ್ಯದ ಬಗ್ಗೆ ನೋಡೋಣ. ನಟ ಕಾಂತಾರ ಚಿತ್ರಕ್ಕಾಗಿ ಅವರು 4 ಕೋಟಿ ಸಂಭಾವನೆ ಪಡೆದಿದ್ದರು. ಆದರೆ ಚಿತ್ರದ ಅದ್ಭುತ ಯಶಸ್ಸಿನ ನಂತರ ರಿಷಬ್ ಶೆಟ್ಟಿಗೆ ಕೇವಲ 50 ಕೋಟಿ ರೂಪಾಯಿಗಳ ಸಂಭಾವನೆಯನ್ನು ಮಾತ್ರವಲ್ಲದೆ ಕಾಂತಾರ ಎರಡನೇ ಭಾಗದ ಲಾಭದಿಂದ ಒಂದು ನಿರ್ದಿಷ್ಟ ಮೊತ್ತವನ್ನು ನೀಡಲು ಮುಂದಾಗಿದ್ದಾರೆ.

ಇದರಿಂದಾಗಿ ಕಾಂತಾರ 2ನೇ ಭಾಗಕ್ಕೆ ಅವರ ಸಂಭಾವನೆ 100 ಕೋಟಿ ಆಗಲಿದೆ ಎನ್ನಲಾಗಿದೆ. ಇದು ಮೊದಲ ಭಾಗಕ್ಕೆ ಸಿಕ್ಕಿದ್ದಕ್ಕಿಂತ ಶೇ.25ರಷ್ಟು ಹೆಚ್ಚು. ಈ ಒಂದು ಚಿತ್ರದ ಮೂಲಕ ರಿಷಬ್ ಶೆಟ್ಟಿ ಜೀವನ ಸಂಪೂರ್ಣ ಬದಲಾಗಿದೆ ಎಂಬುದು ಗಮನಾರ್ಹ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News