Samantha Ruth Prabhu Myositis : ನಟಿ ಸಮಂತಾ ಅವರು ವಯೋಸಿಟಿಸ್ ಖಾಯಿಲೆ ಬಳಲುತ್ತಿದ್ದಾರೆ. ಮನೆಯಲ್ಲೇ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಮಯೋಸಿಟಿಸ್ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಕ್ಕೆ ಹೋಗಿದ್ದಾರೆ.. ಬೇರೆ ಕಡೆ ಹೋಗಿದ್ದಾರೆ ಎಂಬ ಮಾತುಗಳು ನೆಟ್ಟಿಗರ ಬಾಯಿಂದ ಕೇಳಿಬರುತ್ತಿವೆ. ಆದರೆ ಸಮಂತಾ ಹೈದರಾಬಾದ್ನಲ್ಲಿರುವ ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗ ಸಮಂತಾ ಮನೆಯಿಂದ ಹೊರ ಬಂದು ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿಯೇ ಅವರು ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ. ಅದಾದ ನಂತರ ಒಂದಷ್ಟು ದಿನ ಸಿನಿಮಾಗಳಿಂದ ಸಂಪೂರ್ಣ ದೂರ ಉಳಿಯಲು ಸಮಂತಾ ಬಯಸಿದ್ದಾರೆ. ಜನವರಿಯಲ್ಲಿ ಅವರು ಸೆಟ್ಗೆ ಬರುತ್ತಾರೆ ಅಂತ ಎಲ್ಲರೂ ಭಾವಿಸಿದ್ದಾರೆ. ಆದ್ರೆ ಅದು ಕೂಡಾ ಇನ್ನು ಖಚಿತವಾಗಿಲ್ಲ.
ಇದನ್ನೂ ಓದಿ: ʼಪ್ರೀತಿ ಎಲ್ಲಕ್ಕಿಂತ ಹೆಚ್ಚುʼ... ಸೀರಿಯಲ್ ನಟಿ ತುನೀಶಾ ಸಾವಿಗೆ ಟ್ಯಾಟೂ ಲಿಂಕ್..!
Thankyou @23_rahulr 🫶🏻
To those of you fighting hard battles, this one’s for you as well. Keep fighting… we’ll be stronger than ever… and stronger forever soon💪🏼 pic.twitter.com/NWdrLAMIQ3— Samantha (@Samanthaprabhu2) December 25, 2022
ಸಮಂತಾ ಈಗ ತಮ್ಮ ಆರೋಗ್ಯ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ. ಮಯೋಸಿಟಿಸ್ ತೊಡೆದುಹಾಕಲು ಹೋರಾಡುತ್ತಿದ್ದಾರೆ. ನಟ, ನಟಿಯರು ಸಹ ಅವರಿಗೆ ಧೈರ್ಯ ತುಂಬುವ ಕೆಲಸಮಾಡುತ್ತಿದ್ದಾರೆ. ಇದೀಗ ಸಮಂತಾ ಹೋರಾಟದ ಬಗ್ಗೆ ರಾಹುಲ್ ರವೀಂದ್ರನ್ ಪೋಸ್ಟ್ ಮಾಡುವ ಮೂಲಕ ಆತ್ಮವಿಶ್ವಾಸ ತುಂಬಿದ್ದಾರೆ. ʼಎಷ್ಟೇ ಕಷ್ಟಗಳು, ಸಮಸ್ಯೆಗಳು ಬಂದರೂ ಹೋರಾಟ ಮಾಡುತ್ತಲೇ ಇರುತ್ತೀರಿ.. ಹೋರಾಡುತ್ತಲೇ ಇರುತ್ತೀರಿ.. ಯಾಕೆಂದರೆ ನೀವು ಉಕ್ಕಿನ ಮಹಿಳೆ.. ನಿಮ್ಮನ್ನು ಸೋಲಿಸಲೂ ಯಾವುದರಿಂದಲೂ ಸಾಧ್ಯವಿಲ್ಲ..ʼ ಎಂದು ರಾಹುಲ್ ರವೀಂದ್ರನ್ ಹೇಳಿದ್ದಾರೆ.
ಇದೀಗ ಸಮಂತಾ ರಾಹುಲ್ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ʼಧನ್ಯವಾದ ರಾಹುಲ್. ನಾನು ಇದನ್ನೇ ಹೇಳಲು ಬಯಸಿದ್ದೆ, ಇದು ಜೀವನದೊಂದಿಗೆ ಹೋರಾಡುತ್ತಿರುವ ಎಲ್ಲರಿಗಾಗಿ.. ಹೋರಾಡುತ್ತಲೇ ಇರಿ.. ಆಗ ನೀವು ಬಲಶಾಲಿಯಾಗುತ್ತೀರಿ.. ನೀವು ಬಲಶಾಲಿಗಳಾದಷ್ಟು ಕಷ್ಟಗಳನ್ನು ಎದುರಿಸುತ್ತೀರಿʼ ಎಂದು ನಟಿ ಸಮಂತಾ ಕಷ್ಟದ ಜೀವನವನ್ನು ದೂಡುತ್ತಿರುವ ಪ್ರತಿಯೊಬ್ಬರಿಗೂ ಧೈರ್ಯದ ಮಾತುಗಳನ್ನಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.