ಸಲ್ಮಾನ್ ಖಾನ್ ಚಿತ್ರದಿಂದ ತೆಲುಗಿನ DSP ಔಟ್, ರವಿ ಬಸ್ರೂರ್ ಇನ್..!

ಡಿಎಸ್‌ಪಿಯಿಂದ ಬೇರ್ಪಟ್ಟ ನಂತರ ಸಲ್ಮಾನ್ ಖಾನ್ ಅವರು ‘ಕೆಜಿಎಫ್’ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದಾರಂತೆ.

Written by - Puttaraj K Alur | Last Updated : Jun 28, 2022, 07:41 PM IST
  • ತೆಲುಗಿನ ಮೋಸ್ಟ್ ಪಾಪುಲರ್ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‍ಗೆ ಗೇಟ್‍ಪಾಸ್ ನೀಡಿದ ಸಲ್ಮಾನ್ ಖಾನ್
  • ಭಿನ್ನಾಭಿಪ್ರಾಯ ಹಿನ್ನೆಲೆ ‘Kabhi Eid Kabhi Diwali’ ಸಿನಿಮಾದಿಂದ DSP ಔಟ್
  • ಸಲ್ಮಾನ್ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಲಿರುವ ಕನ್ನಡಿಗ ರವಿ ಬಸ್ರೂರ್
ಸಲ್ಮಾನ್ ಖಾನ್ ಚಿತ್ರದಿಂದ ತೆಲುಗಿನ DSP ಔಟ್, ರವಿ ಬಸ್ರೂರ್ ಇನ್..! title=
ಸಲ್ಮಾನ್ ಸಿನಿಮಾದಿಂದ ತೆಲುಗಿನ DSP ಔಟ್!

ಬೆಂಗಳೂರು: ತೆಲುಗು ಚಿತ್ರರಂಗದ ಮೋಸ್ಟ್ ಪಾಪುಲರ್ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಈ ಹಿಂದೆ ಹಲವು ಜನಪ್ರಿಯ ಹಿಂದಿ ಚಿತ್ರಗಳಿಗೆ ಹಿಟ್ ಮ್ಯೂಸಿಕ್ ನೀಡಿದ್ದಾರೆ. ಮುಖ್ಯವಾಗಿ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಜೊತೆಗೆ DSP ಕೆಲಸ ಮಾಡಿದ್ದಾರೆ.   

ಸಲ್ಲು ಬಾಯ್ ನಟಿಸಿದ Ready ಸಿನಿಮಾದ Dhinka Chika ಮತ್ತು Radhe: Your Most Wanted Bhai ಸಿನಿಮಾದ Seeti Maar ಹಾಡುಗಳು ಹಿಂದಿಯಲ್ಲಿಯೂ ಸದ್ದು ಮಾಡಿದ್ದರು. ಈ ಸಿನಿಮಾಗಳಲ್ಲಿ DSP ತಮ್ಮ ತೆಲುಗು ಮೂಲದ ಹಿಟ್ ಹಾಡುಗಳನ್ನೇ ಹಿಂದಿಯಲ್ಲಿ ರೀಮೇಕ್ ಮಾಡಿದ್ದರು.

ಇದನ್ನೂ ಓದಿ: ಕಿಚ್ಚ ಸುದೀಪ್‌ ಅವರನ್ನು ನೋಡಬೇಕಂತೆ ಆ್ಯಸಿಡ್ ಸಂತ್ರಸ್ತೆ!

 ಆದರೆ, ‘ಪುಷ್ಪ’ ಸಿನಿಮಾದ ದೊಡ್ಡ ಯಶಸ್ಸಿನ ನಂತರ ದೇವಿ ಶ್ರೀ ಪ್ರಸಾದ್ ಖ್ಯಾತಿ ಮತ್ತಷ್ಟು ಏರಿಕೆ ಕಂಡಿದೆ. ಈ ಸಕ್ಸಸ್ ಬೆನ್ನಲ್ಲಿಯೇ ಅವರಿಗೆ ಬಾಲಿವುಡ್‍ನ ಚಿತ್ರವೊಂದಕ್ಕೆ ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ಹುಡುಕಿಕೊಂಡು ಬಂದಿತು. ಆ ಸಿನಿಮಾ ಬೇರಾವುದೂ ಅಲ್ಲ, ಸಲ್ಮಾನ್ ನಟನೆಯ ಮುಂಬರುವ ಸಿನಿಮಾ ‘Kabhi Eid Kabhi Diwali’.

ಆದರೆ, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಲ್ಮಾನ್ ನಟನೆಯ ಈ ಸಿನಿಮಾಗೆ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಡೈರೆಕ್ಟರ್ ಆಗಿ ಕೆಲಸ ಮಾಡಬೇಕಿತ್ತು. ಭಿನ್ನಾಭಿಪ್ರಾಯದ ಕಾರಣ ಈ ಚಿತ್ರದ ಹಾಡುಗಳನ್ನು ಒಪ್ಪಿಕೊಳ್ಳಲು ವಿಫಲವಾದ ನಂತರ ಸಲ್ಮಾನ್ ಮತ್ತು DSP ಬೇರೆಯಾಗಿದ್ದಾರೆಂತೆ. ವರದಿಗಳ ಪ್ರಕಾರ, ಸಲ್ಮಾನ್ ಮತ್ತು ಅವರ ತಂಡಕ್ಕೆ DSP ಸಂಯೋಜಿಸಿದ್ದ ಹಾಡುಗಳು ಇಷ್ಟವಾಗಿಲ್ಲವಂತೆ. ತಮ್ಮ ಚಿತ್ರಕ್ಕೆ ನಿರೀಕ್ಷಿಸಿದ್ದ ಸಂಗೀತ ನೀಡಲು ದೇವಿ ಶ್ರೀ ಪ್ರಸಾದ್ ವಿಫಲರಾಗಿದ್ದಾರೆಂದು ಸಲ್ಮಾನ್ ಭಾವಿಸಿದ್ದಾರಂತೆ. ಹೀಗಾಗಿಯೇ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕನಿಗೆ ಗೇಟ್‍ಪಾಸ್ ನೀಡಿರುವ ಸಲ್ಮಾನ್ ಕನ್ನಡಿಗನಿಗೆ ಅವಕಾಶ ನೀಡಿದ್ದಾರೆ.

ಇದನ್ನೂ ಓದಿ: "ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ": ಆಲಿಯಾ-ರಣಬೀರ್‌ಗೆ ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ

ಡಿಎಸ್‌ಪಿಯಿಂದ ಬೇರ್ಪಟ್ಟ ನಂತರ ಸಲ್ಮಾನ್ ಖಾನ್ ಅವರು ‘ಕೆಜಿಎಫ್’ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದಾರಂತೆ. ಒಂದು ವಿಶೇಷ ಹಾಡಿಗೆ ಈಗಾಗಲೇ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆಂದು ವರದಿಯಾಗಿದೆ. ಈಗಾಗಲೇ Antim: The Final Truth ಸಿನಿಮಾಗೆ ಬಸ್ರೂರ್ ನೀಡಿದ ಹಿನ್ನೆಲೆ ಸಂಗೀತಕ್ಕೆ ಸಲ್ಮಾನ್ ಬೌಲ್ಡ್ ಆಗಿದ್ದಾರೆ. ಕನ್ನಡಿಗನ ಸಂಗೀತ ಪ್ರತಿಭೆಗೆ ಬಾಯಿಜಾನ್ ಮಾರುಹೋಗಿದ್ದಾರೆ. ಹೀಗಾಗಿ ಅವರು ಬಸ್ರೂರ್ ಅವರಿಗೆ ಮಣೆ ಹಾಕಿದ್ದಾರೆ.

DSP ಬಳಿಕ ತಮ್ಮ ಸಿನಿಮಾಗೆ ಬೇರೆ ಯಾರನ್ನು ಆಯ್ಕೆ ಮಾಡಬೇಕೆಂಬ ಯೋಚನೆಯಲ್ಲಿದ್ದ ಸಲ್ಮಾನ್‍ಗೆ ತಕ್ಷಣ ನೆನಪಿಗೆ ಬಂದ ಹೆಸರೇ ರವಿ ಬಸ್ರೂರ್. ಕೂಡಲೇ ಅವರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಅತ್ತ ಬಸ್ರೂರ್ ಕೂಡ ಬಾಯಿಜಾನ್‍ಗೆ ಓಕೆ ಹೇಳಿದ್ದು, ಈಗಾಗಲೇ ಆಕ್ಷನ್ ಎಂಟರ್ಟೈನ್ ಸಿನಿಮಾಗಾಗಿ ಸ್ಕೋರ್ ರಚಿಸಲು ಪ್ರಾರಂಭಿಸಿದ್ದಾರಂತೆ.

ರವಿ ಬಸ್ರೂರ್ ಭಾಯಿಜಾನ್‌ಗಾಗಿ ವಿಶೇಷ ಟ್ರ್ಯಾಕ್‌ನಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಈಗಾಗಲೇ ಥೀಮ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಮುಂಬರುವ ದಿನಗಳಲ್ಲಿ ಚಿತ್ರಕ್ಕೆ ಅತ್ಯುತ್ತಮ ಮ್ಯೂಸಿಕ್ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News