Salman Khan Tiger 3 Fees : ಚಿತ್ರದ ಬಜೆಟ್‌ಗೆ ಸಮವಾದ ಸಲ್ಮಾನ್ ಖಾನ್ ಸಂಭಾವನೆ..!

Salman Khan Remuneration For Tiger 3 : ಟೈಗರ್ 3 ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿಮಾ ಅಭಿಮಾನಿಗಳು ಕಾತುರರಾಗಿದ್ದಾರೆ. ಚಿತ್ರದ ಬಗೆಗಿನ ಕ್ರೇಜ್‌ ನೋಡಿದ್ರೆ ಸಲ್ಮಾನ್ ಖಾನ್ ಸಿನಿಮಾ ಹಲವು ದಾಖಲೆಗಳನ್ನು ಉಡೀಸ್‌ ಮಾಡುವ ನಿರೀಕ್ಷೆಯಿದೆ. 

Written by - Chetana Devarmani | Last Updated : Nov 9, 2023, 11:58 AM IST
  • ಸಲ್ಮಾನ್ ಖಾನ್ ಟೈಗರ್ 3 ಸಂಭಾವನೆ
  • ಕತ್ರಿನಾ ಕೈಫ್ ಟೈಗರ್ 3 ಸಂಭಾವನೆ
  • ಇಮ್ರಾನ್ ಹಶ್ಮಿ ಟೈಗರ್ 3 ಸಂಭಾವನೆ
Salman Khan Tiger 3 Fees : ಚಿತ್ರದ ಬಜೆಟ್‌ಗೆ ಸಮವಾದ ಸಲ್ಮಾನ್ ಖಾನ್ ಸಂಭಾವನೆ..! title=
Tiger 3

Salman Khan and Katrina Kaif Tiger 3 Fees: ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರ ಟೈಗರ್ 3 ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಟೈಗರ್ 3 ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿಮಾ ಅಭಿಮಾನಿಗಳು ಕಾತುರರಾಗಿದ್ದಾರೆ. ಚಿತ್ರದ ಬಗೆಗಿನ ಕ್ರೇಜ್‌ ನೋಡಿದ್ರೆ ಸಲ್ಮಾನ್ ಖಾನ್ ಸಿನಿಮಾ ಹಲವು ದಾಖಲೆಗಳನ್ನು ಉಡೀಸ್‌ ಮಾಡುವ ನಿರೀಕ್ಷೆಯಿದೆ. ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಮೈಂಡ್‌ ಬ್ಲೋವಿಂಗ್‌ ಆಕ್ಷನ್‌ ಜನರ ಚಿತ್ತ ಸೆಳೆಯಲಿದೆ.  

ಟೈಗರ್‌ 3 ಸಿನಿಮಾ ರಿಲೀಸ್‌ ಡೇಟ್‌ ಹತ್ತಿರವಾಗುತ್ತಿರುವ ಹೊತ್ತಲ್ಲೇ ಸಲ್ಮಾನ್‌ ಖಾನ್‌ ಅವರ ಸಂಭಾವನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಶ್‌ ರಾಜ್‌ ಫಿಲ್ಮ್ಸ್‌ ನ ಸ್ಪೈ ಥ್ರಿಲ್ಲರ್ ಟೈಗರ್ 3 ಕ್ಕೆ ಸಲ್ಮಾನ್ ಖಾನ್ 100 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಲ್ಮಾನ್ ಖಾನ್ ಶುಲ್ಕದ ಬಗ್ಗೆ ಚಿತ್ರ ನಿರ್ಮಾಪಕರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಕತ್ರಿನಾ ಕೈಫ್ ಸಂಭಾವನೆ : ಟೈಗರ್ 3 ಗಾಗಿ ಕತ್ರಿನಾ ಕೈಫ್ 15-20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.  

ಇಮ್ರಾನ್ ಹಶ್ಮಿ ಸಂಭಾವನೆ : ಟೈಗರ್‌ 3 ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಖಳನಾಯಕನಾಗಿ ನಟಿಸಲು 7-8 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.  

ಇದನ್ನೂ ಓದಿ : ‌Samantha: ನಾಗ ಚೈತನ್ಯ ಜೊತೆ ವಿಚ್ಛೇದನದ ಬಗ್ಗೆ ಸ್ಯಾಮ್ ಅಪರೂಪದ ಕಾಮೆಂಟ್..! 

ನಟಿ ರೇವತಿ ಸಂಭಾವನೆ : ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಚಿತ್ರದಲ್ಲಿ ನಟಿ ರೇವತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಟೈಗರ್ 3ಗಾಗಿ ನಟಿ ರೇವತಿ 35 ಲಕ್ಷ ಶುಲ್ಕ ಪಡೆದಿದ್ದಾರಂತೆ. 

ರಿದ್ಧಿ ಡೋಗ್ರಾ ಸಂಭಾವನೆ : ಜವಾನ್ ನಂತರ ರಿದ್ಧಿ ಡೋಗ್ರಾ ಈಗ ಟೈಗರ್ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು 30 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಲಲಾಗಿದೆ.

ವಿಶಾಲ್ ಜೇತ್ವಾ ಮತ್ತು ರಣವೀರ್ ಶೋರೆ ಸಂಭಾವನೆ : ವಿಶಾಲ್ ಜೇತ್ವಾ 20 ಲಕ್ಷ ರೂಪಾಯಿ ಮತ್ತು ರಣವೀರ್ ಶೋರೆ 50 ಲಕ್ಷ ರೂಪಾಯಿ ಶುಲ್ಕವನ್ನು ಪಡೆದಿದ್ದಾರೆ ಎಂಬ ವರದಿಗಳು ವೈರಲ್ ಆಗುತ್ತಿವೆ. 

ಇದನ್ನೂ ಓದಿ : ಅಧಿಕೃತವಾಗಿ ಡಿವೋರ್ಸ್‌ ಪಡೆದ ಹನಿಸಿಂಗ್‌ ಹಾಗೂ ಪತ್ನಿ ಶಾಲಿನಿ ತಲ್ವಾರ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News