Kisi Ka Bhai Kisi Ki Jaan : ಸಲ್ಲು ಭಾಯ್‌ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೀಸರ್‌ ಲೀಕ್‌..! ನೋಡಿ

Kisi Ka Bhai Kisi Ki Jaan : ಇಷ್ಟು ದಿನ ಸತತ ಸೋಲು ಅನುಭವಿಸಿದ್ದ ಬಾಲಿವುಡ್‌ ಇದೀಗ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಮೂಲಕ ಮತ್ತೆ ಭಾರತೀಯ ಸಿನಿರಂಗದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಪಠಾಣ್‌ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಈ ನಡುವೆ ಸಲ್ಮಾನ್‌ ಖಾನ್‌ ನಟನೆಯ ಮುಂಬರುವ ಸಿನಿಮಾ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಚಿತ್ರ ಟೀಸರ್‌ ಬಿಡುಗಡೆಗೂ ಮುನ್ನವೆ ಲೀಕ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Written by - Krishna N K | Last Updated : Jan 25, 2023, 05:16 PM IST
  • ಶಾರುಖ್ ಖಾನ್ ನಟನೆಯ ಪಠಾಣ್‌ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ.
  • ಈ ನಡುವೆ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಚಿತ್ರದ ಟೀಸರ್‌ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿದೆ.
  • ಇಂಟರ್‌ನೆಟ್‌ನಲ್ಲಿ ಬಿಡುಗಡೆಗು ಮುನ್ನವೇ ಸಲ್ಮಾನ್‌ ಖಾನ್‌ ಸಿನಿಮಾದ ಟೀಸರ್‌ ಲೀಕ್‌ ಆಗಿದೆ.
Kisi Ka Bhai Kisi Ki Jaan : ಸಲ್ಲು ಭಾಯ್‌ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೀಸರ್‌ ಲೀಕ್‌..! ನೋಡಿ title=

Salma Khan : ಇಷ್ಟು ದಿನ ಸತತ ಸೋಲು ಅನುಭವಿಸಿದ್ದ ಬಾಲಿವುಡ್‌ ಇದೀಗ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಮೂಲಕ ಮತ್ತೆ ಭಾರತೀಯ ಸಿನಿರಂಗದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಪಠಾಣ್‌ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಈ ನಡುವೆ ಸಲ್ಮಾನ್‌ ಖಾನ್‌ ನಟನೆಯ ಮುಂಬರುವ ಸಿನಿಮಾ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಚಿತ್ರ ಟೀಸರ್‌ ಬಿಡುಗಡೆಗೂ ಮುನ್ನವೆ ಲೀಕ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಚಿತ್ರಮಂದಿರಗಳಲ್ಲಿ ʼಪಠಾಣ್' ವೀಕ್ಷಿಸುವ ಪ್ರೇಕ್ಷಕರಿಗೆ ಚಿತ್ರತಂಡ ಬೋನಸ್ ಗಿಷ್ಟ್‌ ನೀಡಿದೆ. ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದ ಟೀಸರ್‌ ಪಠಾಣ್‌ ಸಿನಿಮಾದ ಪ್ರದರ್ಶನದ ವೇಳೆ ಪ್ರಸಾರ ಮಾಡಲಾಗಿದೆ. ಇದನ್ನ ವಿಡಿಯೋ ಮಾಡಿರುವ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಮಾಡಿದ್ದಾರೆ. ಇದರ ಬೆನ್ನಲ್ಲೆ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Pathaan : ವಿರೋಧದ ನಡುವೆಯೂ ʼಪಠಾಣ್‌ʼ ಸಿನಿಮಾದಲ್ಲಿ ʼದೀಪಿಕಾ ಕೇಸರಿ ಬಿಕಿನಿʼ ಪ್ರತ್ಯಕ್ಷ..! 

ಸಲ್ಮಾನ್ ಖಾನ್ ಕೂಡ 'ಪಠಾಣ್' ಚಿತ್ರದಲ್ಲಿ ಅತಿಥಿ ಪಾತ್ರವನ್ನು ಕಾಣಿಸಿಕೊಂಡಿದ್ದಾರೆ. ಇಬ್ಬರು ಸೂಪರ್‌ಸ್ಟಾರ್‌ಗಳ ಒಟ್ಟಿಗೆ ತೆರೆ ಮೇಲೆ ಕಂಡ ಇಬ್ಬರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ಸ್ ಪ್ರೊಡಕ್ಷನ್, ಸಲ್ಮಾ ಖಾನ್ ನಿರ್ಮಾಣ ಮಾಡಿರುವ, ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಅನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. 

ಚಿತ್ರದಲ್ಲಿ ಸಲ್ಮಾನ್ ಖಾನ್, ವೆಂಕಟೇಶ್ ದಗ್ಗುಬಾಟಿ, ಪೂಜಾ ಹೆಗ್ಡೆ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಸಲ್ಮಾನ್ ಖಾನ್ ನಟಿಸಿದ್ದಾರೆ. ಆಕ್ಷನ್, ಹಾಸ್ಯ, ನಾಟಕ ಮತ್ತು ಪ್ರಣಯದ ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಚಿತ್ರವು ಈದ್ 2023 ರಂದು ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News