Bigg Boss 16ನಲ್ಲಿ ನಿರೂಪಣೆ ಮಾಡಲು ಸಲ್ಮಾನ್ ಖಾನ್ ಕೇಳಿರುವ ಸಂಭಾವನೆ ಎಷ್ಟು ಗೊತ್ತಾ?

'ಬಿಗ್ ಬಾಸ್' ಅತಿ ಹೆಚ್ಚು ವೀಕ್ಷಿಸಲ್ಪಟ್ಟ ರಿಯಾಲಿಟಿ ಶೋ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ವೀಕೆಂಡ್ ಕಾ ವಾರದಲ್ಲಿ, ಬಿಗ್ ಬಾಸ್ ಮನೆಯ ಸಮಸ್ಯೆಗಳ ಬಗ್ಗೆ ನಡೆಯುವ ಚರ್ಚೆ, ಸಮಸ್ಯೆಗಳಿಗೆ ಸಲ್ಮಾನ್ ನೀಡುವ ಪರಿಹಾರ, ಸ್ಪರ್ಧಿಗಳನ್ನು ಬೆಂಡೆಟ್ಟುವ ರೀತಿ  ಎಲ್ಲವನ್ನೂ ವೀಕ್ಷಕರು ಮೆಚ್ಚಿದ್ದಾರೆ. 

Written by - Ranjitha R K | Last Updated : Jul 14, 2022, 12:49 PM IST
  • ಬಿಗ್ ಬಾಸ್' 16ನೇ ಸೀಸನ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
  • ಸಂಭಾವನೆ ಹೆಚ್ಚಿಸುವಂತೆ ಒತ್ತಾಯಿಸಿದ ಸಲ್ಮಾನ್ ಖಾನ್
  • ಕಳೆದ ಸೀಸನ್ ನಲ್ಲಿ ಎಷ್ಟಿತ್ತು ಸಂಭಾವನೆ ?
Bigg Boss 16ನಲ್ಲಿ ನಿರೂಪಣೆ ಮಾಡಲು ಸಲ್ಮಾನ್ ಖಾನ್ ಕೇಳಿರುವ ಸಂಭಾವನೆ ಎಷ್ಟು ಗೊತ್ತಾ?   title=
Bigg boss 16 (file photo)

ನವದೆಹಲಿ : 'ಬಿಗ್ ಬಾಸ್' ಹಲವು ವರ್ಷಗಳಿಂದ ಜನರನ್ನು ರಂಜಿಸುತ್ತಿರುವ ಶೋ. ಬಿಗ್ ಬಾಸ್' 16ನೇ ಸೀಸನ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಶೋ ವನ್ನು ವೀಕ್ಷಕರು ಟಾಸ್ಕ್ ಮತ್ತು ಸ್ಪರ್ಧಿಗಳ ಕಾರಣದಿಂದ ಮಾತ್ರ ಇಷ್ಟಪಡುತ್ತಿಲ್ಲ. ಬದಲಾಗಿ ಸಲ್ಮಾನ್ ಖಾನ್ ನಿರೂಪಣೆಯಿಂದ ಕೂಡಾ ಇಷ್ಟಪಡುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿ ಸಲ್ಮಾನ್ ಖಾನ್ ಸಂಭಾವನೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ  ಕಾರ್ಯಕ್ರಮದ  ನಿರ್ಮಾಪಕರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

ಸಂಭಾವನೆ ಹೆಚ್ಚಿಸಲು ಸಲ್ಮಾನ್ ಖಾನ್ ಬೇಡಿಕೆ : 
'ಬಿಗ್ ಬಾಸ್' ಅತಿ ಹೆಚ್ಚು ವೀಕ್ಷಿಸಲ್ಪಟ್ಟ ರಿಯಾಲಿಟಿ ಶೋ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ವೀಕೆಂಡ್ ಕಾ ವಾರದಲ್ಲಿ, ಬಿಗ್ ಬಾಸ್ ಮನೆಯ ಸಮಸ್ಯೆಗಳ ಬಗ್ಗೆ ನಡೆಯುವ ಚರ್ಚೆ, ಸಮಸ್ಯೆಗಳಿಗೆ ಸಲ್ಮಾನ್ ನೀಡುವ ಪರಿಹಾರ, ಸ್ಪರ್ಧಿಗಳನ್ನು ಬೆಂಡೆತ್ತುವ ರೀತಿ  ಎಲ್ಲವನ್ನೂ ವೀಕ್ಷಕರು ಮೆಚ್ಚಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ,  'ಬಿಗ್ ಬಾಸ್ 15'ರ  ಸಮಯದಲ್ಲಿಯೂ ಸಂಭಾವನೆ ಹೆಚ್ಚಿಸುವಂತೆ ಸಲ್ಮಾನ್ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಈಗ 'ಬಿಗ್ ಬಾಸ್ 15' ಕಾರ್ಯಕ್ರಮಕ್ಕೆ  ನೀಡಲಾಗಿದ್ದ ಸಂಭಾವನೆಯ ಮೂರು ಪಟ್ಟು ಹಣ ಕೇಳಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಕಾರ್ಯಕ್ರ್ರಮದ ಮೇಕರ್ಸ್ ಸಲ್ಮಾನ್ ಖಾನ್ ಮಾತಿಗೆ ಒಪ್ಪದಿದ್ದರೆ, ಅವರು 'ಬಿಗ್ ಬಾಸ್ 16' ಕಾರ್ಯಕ್ರಮವನ್ನು ಹೋಸ್ಟ್ ಮಾಡುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. 

ಇದನ್ನೂ ಓದಿ : IMDb 2022: ಕೆಜಿಎಫ್ 2 ಗಿಂತಲೂ ಪಾಪುಲರ್ ಅಂತೆ ಈ ಸಿನಿಮಾ..!

ಕಳೆದ  ಸೀಸನ್ ನಲ್ಲಿ ಎಷ್ಟಿತ್ತು ಸಂಭಾವನೆ ? :  
'ಬಿಗ್ ಬಾಸ್' ಪ್ರತಿ ಸಂಚಿಕೆಗೆ ಸಲ್ಮಾನ್ ಖಾನ್ 15 ಕೋಟಿ  ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.  ಈ ಮಧ್ಯೆ, ಹೊಸ ಸೀಸನ್‌ನ ಸ್ಪರ್ಧಿಗಳ ಬಗ್ಗೆ ಹೇಳುವುದಾದರೆ ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿ ಅರ್ಜುನ್ ಬಿಜಲಾನಿ, ಮುನವ್ವರ್ ಫಾರೂಕಿ, ದಿವ್ಯಾಂಕ ತ್ರಿಪಾಠಿ, ಶಿವಾಂಗಿ ಜೋಶಿ, ಟೀನಾ ದತ್ತಾ, ಅಜಮ್ ಫಲಾ, ಶಿವಂ ಶರ್ಮಾ, ಜೈ ದುಧಾನೆ, ಮುನ್ಮುಮ್ ದತ್ತಾ, ಜನ್ನತ್ ಜುಬೇರ್ , ಫೈಝಲ್ ಶೇಖ್, ಅರುಷಿ ದತ್ತಾ, ಪೂನಂ ಪಾಂಡೆ ಮತ್ತು ಜೈದ್ ದರ್ಬಾರ್ ಅವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಲಾಗುತ್ತಿದೆ. 'ಬಿಗ್ ಬಾಸ್ 16' ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗಬಹುದು. 

ಇದನ್ನೂ ಓದಿ : ಡಾ.ಪುನೀತ್ ರಾಜಕುಮಾರ್ ಗೆ ಟ್ವಿಟ್ಟರ್ ನಿಂದ ಅವಮಾನ, ರೊಚ್ಚಿಗೆದ್ದ ಕನ್ನಡಿಗರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News