ವಿಕ್ಕಿ ಕತ್ರೀನಾ ಮದುವೆಯ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ನೀಡಿದ ಪ್ರತಿಕ್ರಿಯಿಂದ ಬೇಸರಗೊಂಡ ಅಭಿಮಾನಿಗಳು

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ಶಾಸ್ತ್ರಗಳು ಮುಗಿದು ಹಲವು ದಿನಗಳು ಕಳೆದಿವೆ. ಇಬ್ಬರ ಮದುವೆಯ ಫೋಟೋಗಳು ನಿಧಾನವಾಗಿ ಬೆಳೆಕಿಗೆ ಬರುತ್ತಿವೆ. ಇದೀಗ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಈ ಮದುವೆಗೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ.

Written by - Ranjitha R K | Last Updated : Dec 17, 2021, 09:40 AM IST
  • ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಇತ್ತೀಚೆಗೆ ನೆರವೇರಿತು.
  • ಇಬ್ಬರಿಗೂ ದುಬಾರಿ ಉಡುಗೊರೆಗಳನ್ನು ನೀಡಲಾಗುತ್ತಿದೆ
  • ಸಲ್ಮಾನ್ ತಂದೆಯ ಕೋಪಕ್ಕೆ ಕಾರಣ ಏನು ?
ವಿಕ್ಕಿ ಕತ್ರೀನಾ ಮದುವೆಯ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ನೀಡಿದ ಪ್ರತಿಕ್ರಿಯಿಂದ ಬೇಸರಗೊಂಡ ಅಭಿಮಾನಿಗಳು  title=
ಸಲ್ಮಾನ್ ತಂದೆಯ ಕೋಪಕ್ಕೆ ಕಾರಣ ಏನು ? (file photo)

ನವದೆಹಲಿ : ಬಾಲಿವುಡ್ ತಾರಾ ಜೋಡಿ ಕತ್ರಿನಾ ಕೈಫ್ (Katreena Kaif) ಮತ್ತು ವಿಕ್ಕಿ ಕೌಶಲ್ (Vicky Kaishal) ವಿವಾಹ ಇತ್ತೀಚೆಗೆ ನೆರವೇರಿತು.  ಇವರಿಬ್ಬರಿಗೂ ಇಡೀ ಇಂಡಸ್ಟ್ರಿಯ ಅನೇಕ ಸ್ಟಾರ್ ಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿವೆ. ಅಲ್ಲದೆ, ಇಬ್ಬರಿಗೂ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಆದರೆ ಇದೀಗ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಈ ಮದುವೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ VicKat ಅಭಿಮಾನಿಗಳಿಗೆ ಬೇಸರ ತರಿಸಿದೆ.

ಸಲ್ಮಾನ್ ತಂದೆಯ ಕೋಪಕ್ಕೆ ಕಾರಣ ಏನು ? :
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ (Vicky Katreena wedding) ಶಾಸ್ತ್ರಗಳು ಮುಗಿದು ಹಲವು ದಿನಗಳು ಕಳೆದಿವೆ. ಇಬ್ಬರ ಮದುವೆಯ ಫೋಟೋಗಳು ನಿಧಾನವಾಗಿ ಬೆಳೆಕಿಗೆ ಬರುತ್ತಿವೆ. ಇದೀಗ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಈ ಮದುವೆಗೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಇತ್ತೀಚೆಗಷ್ಟೇ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಲೀಂ ಖಾನ್,  ಎಲ್ಲರೂ ಅವರ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಮಾಧ್ಯಮಗಳಿಗೆ ವಿಕ್ಕಿ-ಕತ್ರೀನಾ ಮದುವೆ ಬಿಟ್ಟರೆ ಬೇರೆ ಯಾವ ವಿಚಾರವೂ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ : Pooja Hegde: ಮೊನೊಕಿನಿ ಧರಿಸಿ ಡ್ಯಾನ್ಸ್ ಮಾಡಿದ ಪೂಜಾ ಹೆಗ್ಡೆ.. ಹೆಚ್ಚಾದ ಅಭಿಮಾನಿಗಳ ಎದೆಬಡಿತ!

ಅಸಮಾಧಾನಕ್ಕೆ ಕಾರಣವೇನು? :
ಇದೀಗ ಸಲೀಂ ಖಾನ್ (Saleem Khan)  ಈ ಹೇಳಿಕೆ ಮುನ್ನೆಲೆಗೆ ಬಂದಿದ್ದು, ಚರ್ಚೆಗೆ ಕಾರಣವಾಗಿದೆ. ಮಗನ ಮಾಜಿ ಗೆಳತಿಯ ಮದುವೆಯ ಸುದ್ದಿ ಕೇಳಿ ಸಲೀಂ ಕೋಪಗೊಂಡಿದ್ದಾರೆ ಎಂದು ಕೆಲವರು ಹೇಳಿದರೆ, ಮಾಧ್ಯಮಗಳ ಅತಿಯಾದ ಪ್ರಚಾರದಿಂದಾಗಿ ಅವರು ಕೋಪಗೊಂಡಿದ್ದಾರೆ ಎನ್ನುವುದು ಇನ್ನು ಕೆಲವರ ಅಭಿಪ್ರಾಯ. ಸಲೀಂ ಖಾನ್ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ  (Social media) ಜನರು ನಾನಾ ರೀತಿಯ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇನ್ನು ಕೆಲವರು ಸಲೀಂ ಖಾನ್ ಅಸಮಾಧಾನವನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ.  

ಮದುವೆ ಸೂಪರ್ ಸೀಕ್ರೆಟ್ :
ಈ ಮದುವೆಯನ್ನು ಅತ್ಯಂತ ರಹಸ್ಯವಾಗಿ ಮಾಡಲಾಗಿತ್ತು. ಮದುವೆಗೆ ಬರುವ ಅತಿಥಿಗಳು ಧಾರ್ಮಿಕ ಕ್ರಿಯೆಗಳ ಸಮಯದಲ್ಲಿ ಫೋನ್ ಅಥವಾ ಕ್ಯಾಮೆರಾಗಳನ್ನು ಕೊಂಡೊಯ್ಯಲು ಅನುಮತಿ ಇರಲಿಲ್ಲ. ಈ ಮದುವೆಯ ಚಿತ್ರಗಳು ಮತ್ತು ವಿಡಿಯೋಗಳಿಗೆ ಸಂಬಂಧಿಸಿದಂತೆ ವಿಕ್ಕಿ ಕತ್ರಿನಾ 80 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು.  

ಇದನ್ನೂ ಓದಿ : WATCH:ಪಡ್ಡೆಹುಡುಗರ ನಿದ್ದೆಗೆ ಕಿಚ್ಚಿಟ್ಟ ಇಶಾ ಗುಪ್ತಾ ವಿಡಿಯೋ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News