ಬೆಂಗಳೂರು: ಬಾಕ್ಸ್ ಆಫೀಸ್‌ನಲ್ಲಿ ‘ಸಲಾರ್’ ತನ್ನ ಓಟವನ್ನು ಮುಂದುವರಿಸಿದೆ. ಬಿಡುಗಡೆಯಾದ ಮೂರೇ ದಿನಕ್ಕೆ 400 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ಹೌದು, ನಟ ಪ್ರಭಾಸ್ ಅಭಿನಯದ ‘ಸಲಾರ್: ಭಾಗ 1 - ಕದನ ವಿರಾಮ’ ಬಿಡುಗಡೆಯಾದ ಮೂರೇ ದಿನಕ್ಕೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್‍ನಲ್ಲಿ ಬರೋಬ್ಬರಿ 402 ಕೋಟಿ ರೂ. ಕಮಾಯಿ ಮಾಡಿದೆ. ‘ಕೆಜಿಎಫ್’ ಖ್ಯಾತಿಯ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಕಿರಂಗದೂರು ಅವರ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ.
ಇದನ್ನೂ ಓದಿ: ಬಿಗ್ ಬಾಸ್‌ನಲ್ಲಿ ಡಬಲ್ ಎಲಿಮಿನೇಷನ್.. ಮನೆಯಿಂದ ಸಿರಿ ಜೊತೆ ಈ ಸ್ಪರ್ಧಿಯೂ ಔಟ್!
𝑩𝑶𝑿 𝑶𝑭𝑭𝑰𝑪𝑬 𝑲𝑨 𝑺𝑨𝑳𝑨𝑨𝑹 🔥#BlockbusterSalaar hits 𝟒𝟎𝟐 𝐂𝐑𝐎𝐑𝐄𝐒 𝐆𝐁𝐎𝐂 (worldwide) 𝐢𝐧 𝟑 𝐃𝐚𝐲𝐬!#RecordBreakingSalaar #SalaarRulingBoxOffice#Salaar #SalaarCeaseFire #Prabhas #PrashanthNeel @PrithviOfficial @shrutihaasan @VKiragandur @hombalefilms… pic.twitter.com/C8rFGeSs86
— Salaar (@SalaarTheSaga) December 25, 2023
ಈ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಿದ್ದಾರೆ. 'ಸಲಾರ್' ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರತಂಡ ಇತ್ತೀಚಿನ ಬಾಕ್ಸ್ ಆಫೀಸ್ ಗಳಿಕೆಯ ಮಾಹಿತಿಯನ್ನು ಹಂಚಿಕೊಂಡಿದೆ. ‘𝑩𝑶𝑿 𝑶𝑭𝑭𝑰𝑪𝑬 𝑲𝑨 𝑺𝑨𝑳𝑨𝑨𝑹, #BlockbusterSalaar hits 𝟒𝟎𝟐 𝐂𝐑𝐎𝐑𝐄𝐒 𝐆𝐁𝐎𝐂 (worldwide) 𝐢𝐧 𝟑 𝐃𝐚𝐲𝐬!’ ಎಂದು ಮಾಹಿತಿ ನೀಡಿದೆ.
ಸಲಾರ್ ಸಿನಿಮಾ ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ನೀಡಿದ ಮಾಹಿತಿ ಪ್ರಕಾರ, ಎಪಿಕ್ ಆಕ್ಷನ್ ಸಲಾರ್ ಮೊದಲೇ ದಿನವೇ 178.7 ಕೋಟಿ ರೂ. ಸಂಗ್ರಹಿಸಿತ್ತು. ಈ ಮೂಲಕ ಯಾವುದೇ ಭಾರತೀಯ ಚಿತ್ರ ಮಾಡದ ವಿಶಿಷ್ಟ ದಾಖಲೆಯನ್ನು ಮಾಡಿತ್ತು. 2ನೇ ದಿನವೂ ಸಹ 117 ಕೋಟಿ ರೂ. ಗಳಿಸಿತ್ತು. 3ನೇ ದಿನವೂ 107 ಕೋಟಿ ರೂ. ಗಳಿಸುವ ಮೂಲಕ 400 ಕೋಟಿ ರೂ. ಕ್ಲಬ್ ಸೇರಿದೆ.
ಇದನ್ನೂ ಓದಿ: ಬಿಗ್ ಬಾಸ್’ನಲ್ಲಿ ಮಹಿಳಾ ಸ್ಪರ್ಧಿ ಮೇಲೆ ಹಲ್ಲೆಗೆ ಯತ್ನಿಸಿದ ಸಹ ಸ್ಪರ್ಧಿ: ಬೆಚ್ಚಿಬಿದ್ದ ದೊಡ್ಮನೆ…!
ಸಲಾರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಶುಕ್ರವಾರ (ಡಿ.22) ಬಿಡುಗಡೆಯಾಗಿತ್ತು. ಈ ವರ್ಷ ತೆರೆಕಂಡ ಬಾಲವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 2 ಬ್ಲಾಕ್ ಬಸ್ಟರ್ ಸಿನಿಮಾಗಳಾದ 'ಪಠಾಣ್' ಮತ್ತು 'ಜವಾನ್' ಗಳಿಕೆಯನ್ನು ಸಲಾರ್ ಚಿತ್ರ ಹಿಂದಿಕ್ಕಿದೆ. ಈ ಎರಡೂ ಚಿತ್ರಗಳು ಬಿಡುಗಡೆಯಾದ ಮೊದಲ ದಿನ ವಿಶ್ವದಾದ್ಯಂತ ಕ್ರಮವಾಗಿ 106 ಕೋಟಿ ರೂ. ಮತ್ತು 129.6 ಕೋಟಿ ರೂ. ಗಳಿಸಿತ್ತು. ರಣಬೀರ್ ಕಪೂರ್ ಅವರ ‘ಅನಿಮಲ್’ ಚಿತ್ರವು ಮೊದಲ ದಿನ 116 ಕೋಟಿ ರೂ. ಗಳಿಸಿತ್ತು. ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು ಮತ್ತು ಶ್ರೀಯಾ ರೆಡ್ಡಿ ಕೂಡ ನಟಿಸಿದ್ದಾರೆ. ಈ ಚಿತ್ರದ ಮುಂದುವರಿದ ಭಾಗಕ್ಕೆ 'ಸಲಾರ್: ಭಾಗ 2 - ಶೌರ್ಯಾಂಗ ಪರ್ವಂ' ಎಂದು ಹೆಸರಿಡಲಾಗಿದೆ.
ಸಲಾರ್ 3 ದಿನದ ಗಳಿಕೆ ಹೀಗಿದೆ
ಮೊದಲ ದಿನ 178 ಕೋಟಿ ರೂ.
ಎರಡನೇ ದಿನ 117 ಕೋಟಿ ರೂ.
ಮೂರನೇ ದಿನ 107 ಕೋಟಿ ರೂ.
ಒಟ್ಟು 402 ಕೋಟಿ ರೂ ಗಳಿಕೆ ಮಾಡಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.