'RRR' ಸಿನಿಮಾ ರಿಲೀಸ್ ಗೆ ಹೊಸ ಮುಹೂರ್ತ ಫಿಕ್ಸ್...

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ RRR ಬಿಡುಗಡೆಗೆ ಹೊಸ ದಿನಾಂಕ‌‌ ನಿಗದಿಯಾಗಿದೆ.ಎಲ್ಲವೂ ಅಂದುಕೊಂಡಂತೆ ಆಗಿದ್ದರೆ RRR ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ರಿಲೀಸ್ ಆಗಬೇಕಿತ್ತು.ಇನ್ನೇನು ಸಿನಿಮಾ ರಿಲೀಸ್ ಮಾಡಬೇಕು ಎನ್ನುವಷ್ಟರಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿತ್ತು. ಅಲ್ಲದೆ ರಾಜ್ಯದ ಹಲವೆಡೆಗಳಲ್ಲಿ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಇನ್ನೂ ಹಲವೆಡೆ ಶೇ 50ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮಾಡೋದನ್ನು ಮುಂದಕ್ಕೆ ಹಾಕಲಾಯ್ತು. ಈಗ ಸಿನಿಮಾ ತಂಡ ಹೊಸ ರಿಲೀಸ್‌ ಡೇಟ್ ನೀಡಿದೆ.

Last Updated : Jan 21, 2022, 09:58 PM IST
  • ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ RRR ಬಿಡುಗಡೆಗೆ ಹೊಸ ದಿನಾಂಕ‌‌ ನಿಗದಿಯಾಗಿದೆ.
  • ಎಲ್ಲವೂ ಅಂದುಕೊಂಡಂತೆ ಆಗಿದ್ದರೆ RRR ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ರಿಲೀಸ್ ಆಗಬೇಕಿತ್ತು.
  • ಇನ್ನೇನು ಸಿನಿಮಾ ರಿಲೀಸ್ ಮಾಡಬೇಕು ಎನ್ನುವಷ್ಟರಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿತ್ತು.
  • ಅಲ್ಲದೆ ರಾಜ್ಯದ ಹಲವೆಡೆಗಳಲ್ಲಿ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಇನ್ನೂ ಹಲವೆಡೆ ಶೇ 50ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ.
  • ಹೀಗಾಗಿ ಸಿನಿಮಾ ಬಿಡುಗಡೆ ಮಾಡೋದನ್ನು ಮುಂದಕ್ಕೆ ಹಾಕಲಾಯ್ತು. ಈಗ ಸಿನಿಮಾ ತಂಡ ಹೊಸ ರಿಲೀಸ್‌ ಡೇಟ್ ನೀಡಿದೆ.
 'RRR' ಸಿನಿಮಾ ರಿಲೀಸ್ ಗೆ ಹೊಸ ಮುಹೂರ್ತ ಫಿಕ್ಸ್... title=

ಮುಂಬೈ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ RRR ಬಿಡುಗಡೆಗೆ ಹೊಸ ದಿನಾಂಕ‌‌ ನಿಗದಿಯಾಗಿದೆ.ಎಲ್ಲವೂ ಅಂದುಕೊಂಡಂತೆ ಆಗಿದ್ದರೆ RRR ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ರಿಲೀಸ್ ಆಗಬೇಕಿತ್ತು.ಇನ್ನೇನು ಸಿನಿಮಾ ರಿಲೀಸ್ ಮಾಡಬೇಕು ಎನ್ನುವಷ್ಟರಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿತ್ತು. ಅಲ್ಲದೆ ರಾಜ್ಯದ ಹಲವೆಡೆಗಳಲ್ಲಿ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಇನ್ನೂ ಹಲವೆಡೆ ಶೇ 50ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮಾಡೋದನ್ನು ಮುಂದಕ್ಕೆ ಹಾಕಲಾಯ್ತು. ಈಗ ಸಿನಿಮಾ ತಂಡ ಹೊಸ ರಿಲೀಸ್‌ ಡೇಟ್ ನೀಡಿದೆ.

ಇದನ್ನೂ ಓದಿ: Oscars 2022 : 2022 ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ತಮಿಳು ಸಿನಿಮಾ 'ಜೈ ಭೀಮ್'!

ಯಾವಾಗ ಬರುತ್ತೇ ಆರ್ ಆರ್ ಆರ್?

ಇಡೀ ಚಿತ್ರಪ್ರೇಮಿಗಳು ತ್ರಿಬಲ್ ಸಿನಿಮಾಗಾಗಿ ಕಾದು ಕುಳಿತಿದ್ದಾರೆ.ಅಂತೂ ರಾಜಮೌಳಿ ಹೊಸ ದಿನಾಂಕ ಅನೌನ್ಸ್ ಮಾಡಿದ್ದಾರೆ.ಆದ್ರೆ ಅಲ್ಲೊಂದು ಟ್ವಿಸ್ಟ್ ಇದೆ. ಎರಡು ದಿನಾಂಕಗಳಿಗೆ ಆರ್ ಆರ್ ಅರ್ ಕರ್ಚಿಫ್ ಹಾಕಿದೆ.18 ಮಾರ್ಚ್ ಅಥವಾ ಏಪ್ರಿಲ್ 28ರಲ್ಲಿ ಒಂದು ಡೇಟ್‌ನಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದು ಆರ್ ಆರ್ ಆರ್ ಬಳಗ ತಿಳಿಸಿದೆ.ದೇಶದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗಿ, ಎಲ್ಲ ಥಿಯೇಟರ್‌ಗಳಲ್ಲಿ 100% ಆಸನ ವ್ಯವಸ್ಥೆ ಸಿಕ್ಕರೆ ಮಾರ್ಚ್ 18ಕ್ಕೆ ಬರುತ್ತೇವೆ. ಇಲ್ಲ ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದು ಎರಡು ರಿಲೀಸ್ ಡೇಟ್‌ನ್ನು RRR ತಂಡ ಬ್ಲ್ಯಾಕ್ ಮಾಡಿಕೊಂಡಿದೆ.

ಇದನ್ನೂ ಓದಿ: Watch: ಉಲ್ಟಾ ಬ್ಲೌಸ್ ಧರಿಸಿ ಸುದ್ದಿಯಾದ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್..!

ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟಿ ಆಲಿಯಾ ಭಟ್​ ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ.ಅಜಯ್​ ದೇವಗನ್​ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಿಂದಿ ಹಾಗೂ ಮಾಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿರುವ ತ್ರಿಬಲ್ ಆರ್ ಸಿನಿಮಾವನ್ನು ಕರ್ನಾಟಕದಲ್ಲಿ  ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News