BBK9 : ವಾಪಾಸ್‌ ಬನ್ನಿ ಗುರೂಜಿ.. ಅಂತ ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ..!

ಬಿಗ್ ಬಾಸ್ ಆಟ ಮುಗಿಯುವ ಸಮಯ ಬಂದಾಯ್ತು. ಮನೆಯಲ್ಲಿ ವೈರಿಗಳಂತಿದ್ದವರು ಇಂದು ಪ್ರಾಣ ಸ್ನೇಹಿತರಾಗಿದ್ದಾರೆ. ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಆದ್ರೆ ಬಿಗ್‌ಬಾಸ್‌ ಆಟದ ಮುಂದೆ ಎಲ್ಲವೂ ಶೂನ್ಯ ಅಲ್ಲವೆ.. ಇದು ಆಟದ ಮನೆ ಇಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ ಎನ್ನುವಂತೆ ಎಲಿಮಿನೇಟ್‌ ಆದವರು ಮೆನೆಯಿಂದ ಹೊರಗೆ ಹೋಗಲೇಬೇಕು. ಇದೀಗ ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಔಟ್ ಆಗಿದ್ದಾರೆ.

Written by - Krishna N K | Last Updated : Dec 28, 2022, 04:26 PM IST
  • ಬಿಗ್ ಬಾಸ್ ಆಟ ಮುಗಿಯುವ ಸಮಯ ಬಂದಾಯ್ತು.
  • ಮನೆಯಲ್ಲಿ ವೈರಿಗಳಂತಿದ್ದವರು ಇಂದು ಪ್ರಾಣ ಸ್ನೇಹಿತರಾಗಿದ್ದಾರೆ.
  • ಗೂರುಜಿ ಮನೆಯಿಂದ ಹೊರ ಹೋಗುವಾಗ ರೂಪೇಶ್ ಕಣ್ಣೀರಿಟ್ಟಿರು.
BBK9 : ವಾಪಾಸ್‌ ಬನ್ನಿ ಗುರೂಜಿ.. ಅಂತ ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ..! title=

BBK9 : ಬಿಗ್ ಬಾಸ್ ಆಟ ಮುಗಿಯುವ ಸಮಯ ಬಂದಾಯ್ತು. ಮನೆಯಲ್ಲಿ ವೈರಿಗಳಂತಿದ್ದವರು ಇಂದು ಪ್ರಾಣ ಸ್ನೇಹಿತರಾಗಿದ್ದಾರೆ. ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಆದ್ರೆ ಬಿಗ್‌ಬಾಸ್‌ ಆಟದ ಮುಂದೆ ಎಲ್ಲವೂ ಶೂನ್ಯ ಅಲ್ಲವೆ.. ಇದು ಆಟದ ಮನೆ ಇಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ ಎನ್ನುವಂತೆ ಎಲಿಮಿನೇಟ್‌ ಆದವರು ಮೆನೆಯಿಂದ ಹೊರಗೆ ಹೋಗಲೇಬೇಕು. ಇದೀಗ ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಔಟ್ ಆಗಿದ್ದಾರೆ.

ಹೌದು.. ರಾತ್ರಿ ದಿಢೀರ್‌ ಅಂತ ಗುರೂಜಿ ಬಿಗ್‌ಬಾಸ್‌ ಕನ್ನಡ ಸೀಸನ್‌ 9 ರಿಂದ ಹೊರ ಹೋಗಿದ್ದಾರೆ. ಬೆಳಿಗ್ಗೆ ಎದ್ದು ಟಿವಿ ನೋಡಿದ ಪ್ರೇಕ್ಷರಿಗೂ ಸಹ ಇದು ನಂಬಲಾರದಂತಾಗಿತ್ತು. ಗೂರುಜಿ ಮನೆಯಿಂದ ಹೊರ ಹೋಗುವಾಗ ಕಣ್ಣೀರಿಟ್ಟಿರು. ರೂಪೇಶ್ ಅಂತು ತುಂಬಾ ಬಾವುಕರಾಗಿ ಅಪ್ಪಾಜಿ.... ಅಪ್ಪಾಜಿ.. ಎಂದು ಚಿಕ್ಕ ಮಗುವಿನ ರೀತಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಏಕೆಂದ್ರೆ ರೂಪೇಶ್ ಶೆಟ್ಟಿ ಮತ್ತು ಆರ್ಯವರ್ಧನ್ ಗುರೂಜಿ ನಡುವೆ ಒಳ್ಳೆ ಬಾಂಧವ್ಯ ಬೆಳೆದಿತ್ತು.

ಇದನ್ನೂ ಓದಿ:  ʼದೀಪಿಕಾ ಬಿಕಿನಿ ವಿವಾದʼ : ವಿರೋಧಿಸಲು ಬಂದು ಟ್ರೋಲ್‌ ಆದ ಕಾಶ್ಮೀರ ಫೈಲ್ಸ್ ನಿರ್ದೇಶಕ

ಇಬ್ಬರೂ ಬಹಳ ಕ್ಲೋಸ್‌ ಆಗಿದ್ದರು. ಮೆನೆಯಲ್ಲಿ ಗುರೂಜಿಯನ್ನು ರೂಪೇಶ್ ಅಪ್ಪಾಜಿ, ಅಪ್ಪಾಜಿ ಕರೆಯುತ್ತಿದ್ದರು. ಆದ್ರೆ ಮಂಗಳವಾರದ ಸಂಚಿಕೆಯಲ್ಲಿ ಗುರೂಜಿ ಎಲಿಮಿನೆಟ್‌ ಆಗಿ ಮೆನೆಯಿಂದ ಹೊರ ಹೋಗಿದ್ದಾರೆ. ಆರ್ಯವರ್ಧನ್ ಅವರು ಅವರು ಔಟ್ ಆಗ್ತಿದ್ದಂತೆ, ಚಿಕ್ಕ ಮಕ್ಕಳ ರೀತಿ ರೂಪೇಶ್‌ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ವಾಪಸ್ ಬನ್ನಿ ಅಪ್ಪಾಜಿ ಅಂತ ಅತ್ತು ಕರೆದಿದ್ದರು. ಮನೆ ಮಂದಿ ಎಷ್ಟೇ ಪ್ರಯತ್ನಿಸಿದರೂ ಸಹ ರೂಪೇಶ್‌ ಅಳು ನಿಲ್ಲಲಿಲ್ಲ.

ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಕೇವಲ 5 ಜನ ಉಳಿದಿದ್ದಾರೆ. ದಿನಗಳು ಕಳೆದಂತೆ ಗೆಲ್ಲುವುದು ಯಾರು..? ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗುತ್ತಿದೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ದಿವ್ಯಾ ಉರುಡುಗ, ರಾಕೇಶ್ ಅಡಿಗ ಮನೆಯಲ್ಲಿದ್ದಾರೆ. ಇವರಲ್ಲಿ ಯಾರೂ ಗೆಲ್ತಾರೆ, ಯಾರು ಸೋಲ್ತಾರೆ ಎನ್ನುವ ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ದೇವರ ಆಟ ಬಲ್ಲೋರು ಯಾರು ಅಂತ ಅಂದತೆ.. ಬಿಗ್‌ ಬಾಸ್‌ ಆಟ ಅರ್ಥ ಮಾಡಿಕೊಂಡವರ ಯಾರು.. ಜಸ್ಟ್‌ ಮುಂದೆನಾಗುತ್ತೆ ಅಂತ ಕಾಯ್ದು ನೋಡೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News