Kantara trailer : ಕಾಂತಾರ ಸಿನಿಮಾದ ಟ್ರೈಲರ್ ರಿಲೀಸ್, ರಿಷಬ್ ಶೆಟ್ಟಿ ಫ್ಯಾನ್ಸ್‌ ದಿಲ್‌ ಖುಷ್‌

Kantara trailer : ಈಗಾಗಲೇ ಟೀಸರ್‌ನಿಂದಲೇ ಸಿನಿಪ್ರಿಯರ ಮನೆಸೆಳೆದಿರುವ ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ.   

Written by - Chetana Devarmani | Last Updated : Sep 5, 2022, 04:18 PM IST
  • ಟೀಸರ್‌ನಿಂದಲೇ ಸಿನಿಪ್ರಿಯರ ಮನೆಸೆಳೆದಿರುವ ಸಿನಿಮಾ
  • ಇಂದು ಬಿಡುಗಡೆಯಾದ ಕಾಂತಾರ ಸಿನಿಮಾದ ಟ್ರೈಲರ್
  • ಹಲವು ವಿಶೇಷಗಳಿಂದ ಮನೆಮಾತಾಗಿದೆ ಕಾಂತಾರ ಸಿನಿಮಾ
Kantara trailer : ಕಾಂತಾರ ಸಿನಿಮಾದ ಟ್ರೈಲರ್ ರಿಲೀಸ್, ರಿಷಬ್ ಶೆಟ್ಟಿ ಫ್ಯಾನ್ಸ್‌ ದಿಲ್‌ ಖುಷ್‌  title=
ಕಾಂತಾರ

Kantara trailer : ಈಗಾಗಲೇ ಟೀಸರ್‌ನಿಂದಲೇ ಸಿನಿಪ್ರಿಯರ ಮನೆಸೆಳೆದಿರುವ ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಚಿತ್ರದ ಮೊದಲ ಹಾಡು ಸಿಂಗಲ್ ಸಿಂಗಾರ ಸಿರಿಯೆ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಕಾಂತಾರ ಚಿತ್ರದ ಟ್ರೈಲರ್ ಇಂದು ರಿಲೀಸ್‌ ಆಗಿದ್ದು, ಮತ್ತೊಮ್ಮೆ ಕರಾವಳಿ ಸೊಗಡಿನ ಅನಾವರಣವಾಗಿದೆ. ರಿಷಬ್ ಶೆಟ್ಟಿ ನಟನೆಯ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ.  

ತುಳುನಾಡಿನಲ್ಲಿ ನಡೆಯುವ ಒಂದು ಫ್ಯಾಂಟಸಿ ಕತೆಯನ್ನು ಈ ಸಿನಿಮಾ ಆಧರಿಸಿದೆ. ಈ ಚಿತ್ರವು ಅತೀಂದ್ರಿಯ ಕಾಡಿನ ಸನ್ನಿವೇಶದಲ್ಲಿ ಮಾನವ ಮತ್ತು ಪ್ರಕೃತಿ ಸಂಘರ್ಷವನ್ನು ಪರಿಶೋಧಿಸುತ್ತದೆ. ಹಿಂದಿನ ಸಂದರ್ಶನವೊಂದರಲ್ಲಿ, ರಿಷಬ್ ಅವರು ಎರಡನೇ ಲಾಕ್‌ಡೌನ್ ಸಮಯದಲ್ಲಿ ಈ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾಗಿ ತಿಳಿಸಿದ್ದರು. 

ಇದನ್ನೂ ಓದಿ: Emmy Award : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಎಮಿ ಪ್ರಶಸ್ತಿ

ಈಗಾಗಲೇ ಹಲವು ವಿಶೇಷಗಳಿಂದ ಕಾಂತಾರ ಸಿನಿಮಾ ಮನೆಮಾತಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಕರುನಾಡ ಸಂಸ್ಕ್ರತಿಯನ್ನು ಬಿಂಬಿಸುವ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ ‘ಸಿಂಗಾರ ಸಿರಿಯೆ’ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.  

ಚಿತ್ರದಲ್ಲಿ ರಿಷಬ್ ನಾಯಕನಾಗಿದ್ದು, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೂರಿ ನಿರ್ದೇಶನದ ಪಾಪ್‌ಕಾರ್ನ್ ಮಂಕಿ ಟೈಗರ್ ನಂತರ ಕಾಂತಾರ ಸಪ್ತಮಿಯ ಎರಡನೇ ಚಿತ್ರವಾಗಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ, ಅವರು ಈ ಹಿಂದೆ ರಿಷಬ್ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಕಾಸರಗೋಡುಗೆ ಬಿಜಿಎಂ ಮಾಡಿದ್ದಾರೆ. 

 

 

ಇದನ್ನೂ ಓದಿ: ಕೇವಲ 75 ರೂ. ಗೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿ.. ವಿಶೇಷ ದಿನಕ್ಕೆ ಬಂಪರ್‌ ಆಫರ್‌

ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದಾರೆ. ಕಾಂತಾರ ಚಲನಚಿತ್ರವು ಸೆಪ್ಟೆಂಬರ್ 30, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕಾಂತಾರ ಹೊಂಬಾಳೆ ಫಿಲ್ಮ್ಸ್‌ನೊಂದಿಗೆ ರಿಷಬ್ ಅವರ ಮೊದಲ ಸಹಯೋಗವಾಗಿದೆ. ‌ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News