ಮೂರು ವರ್ಷಗಳ ನಂತರ ಮತ್ತೇ ತೆರೆ ಮೇಲೆ ಬರುವ ಇಚ್ಚೆಯಲ್ಲಿದ್ದಾರಂತೆ ಈ ನಟಿ..!

Rhea Chakraborty : ನಟಿ ರಿಯಾ ಚಕ್ರವರ್ತಿ ಅವರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ. ನಟಿ ಸಾಕಷ್ಟು ತೊಂದರೆಗಳನ್ನು ಎದುರಿಸಿ ತಮ್ಮ ಸಿನಿ ಪಯಣವನ್ನು ಮತ್ತೇ ಪ್ರಾರಂಭಿಸುವ ಮೂಲಕ ಇತರರಿಗೆ ಸ್ಪೂರ್ತಿದಾಯಕವಾಗುತ್ತಿದ್ದಾರೆ. ಇವರ ಪುನರಾಗಮನವನ್ನು ಬಾಲಿವುಡ್‌ ನಿರೀಕ್ಷಿಸುತ್ತಿತ್ತು, ಅದು ಈಗ ನಿಜವಾಗಿದೆ. 

Written by - Zee Kannada News Desk | Last Updated : Apr 14, 2023, 09:13 AM IST
  • ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಮೂರು ವರ್ಷಗಳ ನಂತರ ಕಿರುತೆರೆ ಮತ್ತು ಚಿತ್ರರಂಗಕ್ಕೆ ಮರಳಿದ್ದಾರೆ.
  • ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಅಭಿಮಾನಿಗಳು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ
  • ಸುಶಾಂತ್ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಿಯಾ ವಿರುದ್ಧ ಆರೋಪಗಳು ಕೇಳಿಬಂದಿದ್ದವು.
ಮೂರು ವರ್ಷಗಳ ನಂತರ ಮತ್ತೇ ತೆರೆ ಮೇಲೆ ಬರುವ ಇಚ್ಚೆಯಲ್ಲಿದ್ದಾರಂತೆ ಈ ನಟಿ..!  title=

MTV Roadies season 19 : ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಮೂರು ವರ್ಷಗಳ ನಂತರ ಕಿರುತೆರೆ ಮತ್ತು ಚಿತ್ರರಂಗಕ್ಕೆ ಮರಳಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ ಹಂಚಿಕೊಂಡಿದ್ದು, ಅದರಲ್ಲಿ "ನಾನು ಮೂರು ವರ್ಷಗಳಿಂದ ಚಿತ್ರೀಕರಣ ಮಾಡಿಲ್ಲ ಈಗ ನಾನು ಮತ್ತೇ ನಾನು ಸೆಟ್‌ಗೆ ಹಿಂತಿರುಗಿದ್ದೇನೆ ವ್ಯಾನಿಟಿ ವ್ಯಾನ್‌ ನನಗೆ ಹೊಸ ಅನುಭವವನ್ನು ನೀಡುತ್ತಿದೆ. ಸೆಟ್‌ಗೆ ಮರಳಿದ್ದು, ಕೆಲಸಕ್ಕೆ ಮರಳಿದ್ದು ನನಗೆ ವರ್ಣಿಸಲಾಗದ ಸಂತೋಷ, ಕೃತಜ್ಞತೆಯಿಂದ ತುಂಬಿದ ಹೃದಯ, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು, ಸಮಯಗಳು ಕಠಿಣವಾಗಿವೆ, ಆದರೆ ನಿಮ್ಮ ಪ್ರೀತಿ ನಿಜವಾಗಿದೆ" ಎಂದು ಬರೆದು ಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Rhea Chakraborty (@rhea_chakraborty)

 

ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಅಭಿಮಾನಿಗಳು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸುಶಾಂತ್ ಸಾವಿನ ನಂತರದಲ್ಲಿ ಒಂದು ಹೆಸರು ತುಂಬಾನೇ ಟಿವಿಯಲ್ಲಿ ನೋಡಿದ್ದು ಎಂದರೆ ಅದು ನಟಿ ರಿಯಾ ಚಕ್ರವರ್ತಿ ಅವರದ್ದು ಅಂತಾನೆ ಹೇಳಬಹುದು. ಅವರ ಸಾವಿನ ನಂತರದ ಕೆಲವು ವರ್ಷಗಳು ನಟಿ ರಿಯಾ ಚಕ್ರವರ್ತಿಗೆ ತುಂಬಾನೇ ಕಷ್ಟವಾಗಿದ್ದವು ಎಂದು ನಟಿ ಟ್ವೀಟ್ ನಲ್ಲಿ ಹಿಂದೊಮ್ಮೆ ಬಹಿರಂಗಪಡಿಸಿದ್ದರು.  

ಇದನ್ನೂ ಓದಿ-ಚಿತ್ರದ ಘೋಷಣೆಗೂ ಮುನ್ನವೇ ಶ್ರೀಲಂಕಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಶೂಟಿಂಗ್ ಪ್ಲಾನ್...! 

ಸುಶಾಂತ್ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಿಯಾ ವಿರುದ್ಧ ಆರೋಪಗಳು ಕೇಳಿಬರತೊಡಗಿದ ಬಳಿಕ ರಿಯಾ ಕೂಡ ಸಿಬಿಐ ತನಿಖೆ ನಡೆಸಲಿ ಎಂದು ಹೇಳಿದ್ದರು. ಆದರೆ ಸುಶಾಂತ್ ತಂದೆ ರಿಯಾ ವಿರುದ್ಧ ಬಿಹಾರದಲ್ಲಿ ದೂರು ನೀಡಿದ ಬಳಿಕ ಅನೇಕ ಸಂಗತಿಗಳು ಹೊರಬಿದ್ದಿದ್ದವು.  ರಿಯಾ ಈ ದೂರಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲನ್ನು ಏರಿದ್ದರು. 

ರಿಯಾ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ತಮ್ಮ ಸಂಬಂಧದ ಬಗ್ಗೆ ಒಮ್ಮೆಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ತಾನು ಮತ್ತು ಸುಶಾಂತ್ ಸ್ನೇಹಿತರಷ್ಟೇ ಎಂದು ರಿಯಾ ಹೇಳಿಕೊಂಡಿದ್ದರು. ಆದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಸಂದರ್ಭದಲ್ಲಿ ತಾನು ಅವರ ಪ್ರೇಯಸಿ ಎಂದು ಒಪ್ಪಿಕೊಂಡಿದ್ದರು. 

ಇದನ್ನೂ ಓದಿ-Viral Video: ಮಾವನ ಜೊತೆ ಸೊಸೆಯ ತರಲೆ-ತುಂಟಾಟ: ಅಮಿತಾಬ್-ಐಶ್ ಕ್ಯೂಟ್ ವಿಡಿಯೋ ನೋಡಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News