7 ವರ್ಷ ಡೇಟಿಂಗ್... ಮದುವೆಯಾದ ಬಳಿಕ ಕೈಕೊಟ್ಟ ಸ್ಟಾರ್ ನಟ: ಈಡೇರಲೇ ಇಲ್ಲ ಈ ನಟಿಯ ಕನಸು!

Reena Roy: ರೀನಾ ರಾಯ್ ಅವರ ಹೆಸರು ಮೊದಲು ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಕೂಡ 7 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಸುದ್ದಿ ಪ್ರಕಾರ, ಇಬ್ಬರೂ ಪರಸ್ಪರ ಮದುವೆಯಾಗಲು ಬಯಸಿದ್ದರು ಆದರೆ ಶತ್ರುಘ್ನ ಪೂನಂ ಅವರನ್ನು ವಿವಾಹವಾದರು. ಹಾಗಾಗಿ ಇಬ್ಬರೂ ಶಾಶ್ವತವಾಗಿ ಬೇರ್ಪಟ್ಟರು.

Written by - Bhavishya Shetty | Last Updated : Mar 1, 2023, 06:52 PM IST
    • 70 ರಿಂದ 80 ರ ದಶಕದವರೆಗೆ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ರೀನಾ.
    • ಸಿನಿಮಾ ಲೋಕದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡವರು ಇವರು.
    • ‘ಜಾನಿ ದುಷ್ಮನ್', 'ನಾಗಿನ್', 'ಗುಮ್ರಾ' ಮತ್ತು 'ಆಶಾ' ಮುಂತಾದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
7 ವರ್ಷ ಡೇಟಿಂಗ್... ಮದುವೆಯಾದ ಬಳಿಕ ಕೈಕೊಟ್ಟ ಸ್ಟಾರ್ ನಟ: ಈಡೇರಲೇ ಇಲ್ಲ ಈ ನಟಿಯ ಕನಸು! title=
Reena Roy

Reena Roy: ಸಿನಿಮಾ ಕ್ಷೇತ್ರದಲ್ಲಿ ಅನೇಕ ನಾಯಕಿಯರು ಹೆಸರು ಮಾಡಿದ್ದಾರೆ. ಅಂತಹ ನಟಿಯರಲ್ಲಿ ರೀನಾ ರಾಯ್ ಕೂಡ ಒಬ್ಬರು. 70 ರಿಂದ 80 ರ ದಶಕದವರೆಗೆ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ರೀನಾ. ಸಿನಿಮಾ ಲೋಕದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡವರು ಇವರು. ‘ಜಾನಿ ದುಷ್ಮನ್', 'ನಾಗಿನ್', 'ಗುಮ್ರಾ' ಮತ್ತು 'ಆಶಾ' ಮುಂತಾದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ ರೀನಾ ರಾಯ್ ಅವರು ಒಂದೊಮ್ಮೆ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್‌ ಜೊತೆ ಡೇಟಿಂಗ್ ಮಾಡಿದ್ದರು. ಆದರೆ ಇವರ ಲವ್ ಸ್ಟೋರಿ ತಿರುವು ಪಡೆದುಕೊಂಡಿತ್ತು.

ಇದನ್ನೂ ಓದಿ: ಈ ಒಂದು ಕಾರಣಕ್ಕಾಗಿಯೇ ಕಿಂಗ್‌ ಖಾನ್‌ಗೆ ʼಲೇಡಿ ಬಾಡಿಗಾರ್ಡ್‌ʼ ಇರೋದು..!

ರೀನಾ ರಾಯ್ ಅವರ ಹೆಸರು ಮೊದಲು ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಕೂಡ 7 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಸುದ್ದಿ ಪ್ರಕಾರ, ಇಬ್ಬರೂ ಪರಸ್ಪರ ಮದುವೆಯಾಗಲು ಬಯಸಿದ್ದರು ಆದರೆ ಶತ್ರುಘ್ನ ಪೂನಂ ಅವರನ್ನು ವಿವಾಹವಾದರು. ಹಾಗಾಗಿ ಇಬ್ಬರೂ ಶಾಶ್ವತವಾಗಿ ಬೇರ್ಪಟ್ಟರು.

ಶತ್ರುಘ್ನ ಸಿನ್ಹಾ ಅವರಿಂದ ಬೇರ್ಪಟ್ಟ ನಂತರ ರೀನಾ ರಾಯ್ ತುಂಬಾ ಖಿನ್ನತೆಗೆ ಒಳಗಾಗಿದ್ದರು. ಆಗ ಅವರು ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಪ್ರೀತಿಸಿದರು. ಇನ್ನು ಮೊಹ್ಸಿನ್ ಅವರನ್ನು ಮದುವೆಯಾದ ನಂತರ ರೀನಾ ಪಾಕಿಸ್ತಾನಕ್ಕೆ ಹೋಗಿ ಬಾಲಿವುಡ್‌ನಿಂದ ದೂರವಾದರು. ಆದರೆ ಮದುವೆಯಾದ 7 ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು.

ಇದನ್ನೂ ಓದಿ: ವಿಜಯ್ - ತ್ರಿಷಾ ಪ್ರೇಮ ಪ್ರಕರಣ..! 15 ವರ್ಷಗಳ ನಂತರ ಮತ್ತೇ ಒಂದಾದ ಜೋಡಿ

ಮೊಹ್ಸಿನ್‌ನಿಂದ ವಿಚ್ಛೇದನ ಪಡೆದ ನಂತರ ರೀನಾ ರಾಯ್ ಭಾರತಕ್ಕೆ ಮರಳಿದರು. ಮೊಹ್ಸಿನ್ ಮತ್ತು ರೀನಾ ಅವರಿಗೆ ಒಬ್ಬ ಮಗಳಿದ್ದು, ಆಕೆಯ ಮೊಹ್ಸಿನ್ ಬಳಿ ಇದ್ದಳು. ರೀನಾ ಮಗಳನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಬಯಸಿದ್ದಳು. ಈ ಬಳಿಕ ಶಭುಗನ್ ಸಿನ್ಹಾ ಅವರ ಸಹಾಯ ಪಡೆದ ರೀನಾ ಅನೇಕ ಹೋರಾಟದ ಬಳಿಕ ಮಗಳು ಜನ್ನತ್ ನನ್ನು ತನ್ನ ಜೊತೆ ಕರೆತಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News