ʼಕೇಡಿʼ ಧ್ರುವ ಸರ್ಜಾಗಾಗಿ 70ರ ದಶಕದ ಬೆಂಗಳೂರು ರೀ ಕ್ರಿಯೇಟ್..!

ಆರು ಜನ ಸೂಪರ್‌ಸ್ಟಾರ್ ಹಾಕಿಕೊಂಡು ಸಿನಿಮಾ ಮಾಡ್ತೀನಿ ಅಂತ ಪ್ರೇಮ್ ಹೇಳಿದ್ರು. ಪ್ರೇಮ್ ಈ ಮಾತು ಕೇಳಿ ಇವನದು ಇದೇ ಆಯ್ತು ಬರೀ ಬಿಲ್ಡಪ್ ಅಂತ ಗಾಂಧಿನಗರ ಮಂದಿ ನಕ್ಕು ಗೇಲಿ ಮಾಡಿದ್ರು. ಆದ್ರೆ ಅದಕ್ಕೆ ತಲೆ ಕೆಡಿಸಿಕೊಳ್ಳದ ಜೋಗಪ್ಪ ಪ್ರೇಮ್ ಅಂದು ಗೇಲಿ ಮಾಡಿದ್ದ ಮಂದಿಗೆ ಇಂದು ಗೋಲಿ ಹೊಡೆದು ನುಡಿದಂತೆ 6 ಸೂಪರ್‌ಗಳ ಜೊತೆ ಹೈ ಬಜೆಟ್ ಸಿನಿಮಾಗೆ ಜೋಗಿ ಪ್ರೇಮ್ ಸಜ್ಜಾಗಿದ್ದಾರೆ.

Written by - YASHODHA POOJARI | Edited by - Krishna N K | Last Updated : Jan 7, 2023, 05:53 PM IST
  • ಆರು ಜನ ಸೂಪರ್‌ಸ್ಟಾರ್ ಹಾಕಿಕೊಂಡು ಸಿನಿಮಾ ಮಾಡ್ತೀನಿ ಅಂತ ಪ್ರೇಮ್ ಹೇಳಿದ್ರು.
  • ನುಡಿದಂತೆ 6 ಸೂಪರ್‌ಗಳ ಜೊತೆ ಹೈ ಬಜೆಟ್ ಸಿನಿಮಾಗೆ ಜೋಗಿ ಪ್ರೇಮ್ ಸಜ್ಜಾಗಿದ್ದಾರೆ.
  • ʼಕೇಡಿʼ ಧ್ರುವ ಸರ್ಜಾ ಸಿನಿಮಾಗಾಗಿ 70 ದಶಕದ ಬೆಂಗಳೂರನ್ನ ರೀ ಕ್ರಿಯೇಟ್ ಮಾಡಲಿದ್ದಾರೆ.
ʼಕೇಡಿʼ ಧ್ರುವ ಸರ್ಜಾಗಾಗಿ 70ರ ದಶಕದ ಬೆಂಗಳೂರು ರೀ ಕ್ರಿಯೇಟ್..! title=

Dhruva Sarja KD movie : ಆರು ಜನ ಸೂಪರ್‌ಸ್ಟಾರ್ ಹಾಕಿಕೊಂಡು ಸಿನಿಮಾ ಮಾಡ್ತೀನಿ ಅಂತ ಪ್ರೇಮ್ ಹೇಳಿದ್ರು. ಪ್ರೇಮ್ ಈ ಮಾತು ಕೇಳಿ ಇವನದು ಇದೇ ಆಯ್ತು ಬರೀ ಬಿಲ್ಡಪ್ ಅಂತ ಗಾಂಧಿನಗರ ಮಂದಿ ನಕ್ಕು ಗೇಲಿ ಮಾಡಿದ್ರು. ಆದ್ರೆ ಅದಕ್ಕೆ ತಲೆ ಕೆಡಿಸಿಕೊಳ್ಳದ ಜೋಗಪ್ಪ ಪ್ರೇಮ್ ಅಂದು ಗೇಲಿ ಮಾಡಿದ್ದ ಮಂದಿಗೆ ಇಂದು ಗೋಲಿ ಹೊಡೆದು ನುಡಿದಂತೆ 6 ಸೂಪರ್‌ಗಳ ಜೊತೆ ಹೈ ಬಜೆಟ್ ಸಿನಿಮಾಗೆ ಜೋಗಿ ಪ್ರೇಮ್ ಸಜ್ಜಾಗಿದ್ದಾರೆ.

ಅರೆರೆ  ಪ್ರೇಮ್ ಸದ್ಯ ಕೇಡಿ ಸಿನಿಮಾ ಮಾಡ್ತಿದ್ದಾರೆ ಅಲ್ವಾ ಈಗ್ಯಾಫ್ ನಲ್ಲಿ ಮತ್ಯಾವ್ದಪ್ಪ ಹೊಸ ಸಿನಿಮಾ ಅಂತ ಕನ್ಪ್ಯೂಸ್ ಅಗ್ಬೇಡಿ ಯಾಕಂದ್ರೆ ನಮ್ ಬೆಸಗರಹಳ್ಳಿ ಹೈದ ಪ್ರೇಮ್ ಕೇಡಿ ಚಿತ್ರಕ್ಕೆ 6 ಹೀರೋಗಳ ತಂದು ನಿಲ್ಲಿಸಿದ್ದಾರೆ. ಅಲ್ಲದೆ ಈಗಾಗಲೇ ಒಬ್ಬ ಸೂಪರ್ ಸ್ಟಾರ್‌ಗೆ ಆಕ್ಷನ್ ಕಟ್ ಹೇಳಾಗಿದೆ. ಜೊತೆಗೆ ಪೊಗರು ಪೋರ ಪ್ರೇಮ್ ಅಡ್ಡಕ್ಕೆ ವೆಲ್ ಕಮ್ ಮಾಡೊಕು ಸಜ್ಜಾಗಿದ್ದಾರೆ. ಜೋಗಿ ಸ್ಯಾಂಡಲ್‌ವುಡ್ ಶೋ ಮ್ಯಾನ್. ಅದ್ಭುತ ಸಿನಿಮಾಗಳ ಮೇಕರ್. ಅಂಡ್, ಪ್ರಮೋಷನ್ ಕಿಂಗ್. ಜೋಗಿ ಪ್ರೇಮ್ ಸಿನಿಮಾ ಸೆಟ್ಟೇರ್ತಿದೆ ಅಂದ್ರೆ ಸಾಕು, ಇಡೀ ಭಾರತೀಯ ಚಿತ್ರರಂಗವನ್ನೇ ಅತ್ತ ತಿರುಗಿ ನೋಡುತ್ತೆ.

ಇದನ್ನೂ ಓದಿ: Rohit Shetty Injured : ಶೂಟಿಂಗ್‌ ವೇಳೆ ನಿರ್ದೇಶಕ ರೋಹಿತ್ ಶೆಟ್ಟಿಗೆ ತೀವ್ರ ಗಾಯ.. ಆಸ್ಪತ್ರೆಗೆ ದಾಖಲು..!

ಅದ್ರಲ್ಲೂ ಒಂದು ಸಿನಿಮಾವನ್ನ ಪ್ರೇಕ್ಷಕರಿಗೆ ಹೇಗೆ ತಲುಪಿಸ್ಬೇಕು ಅನ್ನೋದನ್ನ ಪ್ರೇಮ್ ನೋಡಿ ಕಲೀಬೇಕು. ಬರೀ ಪ್ರಮೋಶನ್ ಮಾತ್ರವಲ್ಲ ಒಳ್ಳೆ ಸ್ಟಾರ್ ಕಾಸ್ಟ್, ಮೇಕಿಂಗ್, ಸಾಂಗ್ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡೋದ್ರಲ್ಲಿ ಎತ್ತಿದ ಕೈ ನಮ್ ಶೋ ಮ್ಯಾನ್ ಪ್ರೇಮ್. ಅದಕ್ಕೆ ಸಾಕ್ಷಿ ಎಂಬಂತೆ ಪ್ರೇಮ್ ತಮ್ಮ ಬಾಮೈದನ ಜೊತೆ ಏಕ್ ಲವ್ ಯಾ ಮಾಡಿ ಮುಗಿಸಿ. ಈಗ ಆಕ್ಷನ್‌ ಪ್ರಿನ್ಸ್ ಧ್ರುವ ಜೊತೆ ಕೇಡಿ ಚಿತ್ರ ಮಾಡ್ತಿದ್ದು, ಈ ಚಿತ್ರಕ್ಕಾಗಿ ಪ್ರೇಮ್ 6 ಸೂಪರ್ ಸ್ಟಾರ್ ಗಳ ಒಂದೇ ಫ್ರೇಮ್‌ನಲ್ಲಿ ನಿಲ್ಲಿಸೋಕೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.

ಪ್ರೇಮ್  ಅದ್ಬುತ ಸಿನಿಮಾ ಮೇಕರ್ ಅನ್ನೋದ್ರಲ್ಲಿ ಯಾವ್ದೇ ಡೌಟ್ ಇಲ್ಲ. ಅದರೆ ತಾನು ಮಾಡೊ ಕೆಲಸದಲ್ಲಿ ಗುಟ್ಟು ಕಾಪಾಡಿಕೊಳ್ಳೊದ್ರಲ್ಲಿ ಪ್ರೇಮ್ ಕೊಂಚ ವೀಕ್. ಕೆಲಸ ಮಾಡೊಕು ಮುನ್ನ ಹೇಳುವ ಪ್ರೇಮ್ ಆ ಕೆಲಸ ಮಾಡಿಯೇ ಗಾಂಧಿನಗರದಲ್ಲಿ ತೊಡೆ ತಟ್ತಾರೆ...ಅದಕ್ಕೆ ಪೂರಕವಾಗಿ ಈಗ ಮೂರು ವರ್ಷಗಳ ಹಿಂದೆ ವಿಲನ್ ಪ್ರೇಸ್ ಮೀಟ್ ಒಂದರಲ್ಲಿ ಆರು ಜನ ಸೂಪರ್‌ಸ್ಟಾರ್ ಜೊತೆ ಹೈ ಬಜೆಟ್‌ನಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ್ರು.. ಈ ಮಾತನ್ನ ಕೇಳಿದ್ದೇ ತಡ, ಗಾಂಧಿನಗರ ಮಂದಿ ಊಡಾಫೆ ಮಾತಾಡಿದ್ರು.. ಗೇಲಿ ಮಾಡಿ ನಕ್ಕಿದ್ರು. ಆದ್ರೆ ಅದೇ ಮಂದಿ ಈಗ ಪ್ರೇಮ್‌ರನ್ನ ಹಾಡಿ ಹೋಗಳುವಂತಾಗಿದೆ.

ಇದನ್ನೂ ಓದಿ: ಗಾಂಧಿ ಮತ್ತು ನೆಹರು ಅವರನ್ನೂ ಕೂಡಾ ವಿರೋಧಿಸಬೇಕು : ಚೇತನ್‌ ಅಹಿಂಸಾ

ದಿ ವಿಲನ್ ಟೈಮ್ ಅಲ್ಲಿ ಕಂಡಿದ್ದ ಕನಸನ್ನು ಈಗ ನನಸು ಮಾಡಿಕೊಳ್ಳೊಕೆ ಪ್ರೇಮ್ ಸಿದ್ದವಾಗಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ‌ ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗೆ ದೊಡ್ಡ ಮಟ್ಟದಲ್ಲೆ ಪ್ಲಾನ್ ಮಾಡಿರುವ ಪ್ರೇಮ್ ಈ ಚಿತ್ರಕ್ಕೆ ಸೌತ್ ಸಿನಿ ದುನಿಯಾದ 5 ಸೂಪರ್ ಸ್ಟಾರ್ ಗಳನ್ನು ಕರೆತಂದು ಪೊಗರು ಪೋರನ ಚಿತ್ರದಲ್ಲಿ ನಿಲ್ಲಿಸೋಕೆ ತೆರೆಮರೆ ಯಲ್ಲಿ ಭರ್ಜರಿ ಪ್ಲಾನ್ ಮಾಡ್ತಿದ್ದಾರೆ. ಧ್ರುವ ಜೊತೆಗಿನ ಯುದ್ದದಲ್ಲಿ ಸ್ಯಾಂಡಲ್ ವುಡ್ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್, ಬಾಲಿವುಡ್ ನಟ ಸಂಜು ಬಾಬ, ರಮೇಶ್ ಅರವಿಂದ್, ಜೊತೆಗೆ ಟಾಲಿವುಡ್ ,ಕಾಲಿವುಡ್ ,ಮಾಲಿವುಡ್ ಸ್ಟಾರ್ ನಟರನ್ನು ಒಟ್ಟಿಗೆ ತೋರಿಸೊಕೆ ಪ್ರೇಮ್ ಸಿದ್ದರಾಗಿದ್ಧಾರೆ.

ವಿಶೇಷ ಅಂದ್ರೆ ಪ್ರೇಮ್ ಹೊಸ ವರ್ಷದಲ್ಲಿ ಅಣ್ಣಯ್ಯಪ್ಪ ಪಾತ್ರದಲ್ಲಿ ಕ್ರೇಜಿಸ್ಟಾರ್ ಮಾಸ್ ಲುಕ್ ನ ರಿವೀಲ್ ಮಾಡಿ ಸಿನಿ ರಸಿಕರಿಗೆ ಸರ್ಪ್ರೈಸ್ ಕೊಟ್ಟಿದ್ರು.. ರವಿಮಾಮನ ಖಡಕ್ ಲುಕ್ ನೋಡಿ ಪ್ರೇಮ್ ಭರ್ಜರಿಯಾಗಿ ಫೋಟೋ ಶೂಟ್ ಮಾಡಿಸಿದ್ದಾರೆ ಅಂತ ಮಾತಾನಾಡಿದ್ರು. ಅದರೆ ಪ್ರೇಮ್ ಒಂದು ಹೆಜ್ಜೆ ಮುಂದೆ ಹೋಗಿ ಸದ್ದಿಲ್ಲದೆ ಅಣ್ಣಯ್ಯಪ್ಪನ ಜೊತೆ ಶೂಟಿಂಗ್ ಮುಗಿಸಿದ್ದಾರೆ. ಕೇಡಿ ಚಿತ್ರಕ್ಕಾಗಿ ಕೋಟಿ ಕೋಟಿ ವೆಚ್ಚದ ಸೆಟ್ ಗಳನ್ನ ಹಾಕಿಸಿರೋ ಪ್ರೇಮ್ ಮಿನರ್ವ ಮಿಲ್ ನಲ್ಲಿ ಎರಡು ಕೋಟಿ ಖರ್ಚ್ ಮಾಡಿಸಿ ಫ್ಯಾಕ್ಟರಿ ಸೆಟ್ ಹಾಕಿಸಿ ಆ ಸೆಟ್ ನಲ್ಲೇ ರವಿ ಚಂದ್ರನ್ ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. 

ಇದನ್ನೂ ಓದಿ: Balakrishna Helicopter : ತಪ್ಪಿತು ದೊಡ್ಡ ಅಪಘಾತ.. ಬಾಲಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ.!

ಇದಲ್ಲದೆ ಪ್ರೇಮ್ ಕೇಡಿ ಚಿತ್ರಕ್ಕಾಗಿ ಸುಂಕದಕಟ್ಟೆ ಬಳಿ ಇರುವ ಸೀಗೇನಹಳ್ಳಿ 20 ಎಕರೆಯಲ್ಲಿ 18 ಕೋಟಿ ವೆಚ್ಚದಲ್ಲಿ  70 ದಶಕದ ಬೆಂಗಳೂರನ್ನ ರೀ ಕ್ರಿಯೇಟ್ ಮಾಡಿದ್ದಾರೆ.. ಅಲ್ಲದೆ ಇದೇ ತಿಂಗಳ 21 ರಿಂದ ಜೋಗಿ ಪ್ರೇಮ್ ಕೇಡಿ ಚಿತ್ರದ ಎರಡನೇ ಶೆಡ್ಯೂಲ್ ಅನ್ನು ಶುರು ಮಾಡಲಿದ್ದು,21  ಕ್ಕೆ ಕೇಡಿ ಅವತಾರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ರೇನ್ ಅಡ್ಡಕ್ಕೆ ಬಲಗಾಲಿಟ್ಟು ಅಖಾಡಕ್ಕೆ ಇಳಿಯಲಿದ್ದಾರೆ.

ಇದಲ್ಲದೆ ಈ ಚಿತ್ರಕ್ಕೆ ಪ್ರೇಮ್ ಧ್ರುವಗಾಗಿ ಈ ಚಿತ್ರಕ್ಕೆ ಕನ್ನಡತಿಯನ್ನ ಕರೆದು ಕೊಂಡು ಬರೋಕೆ ಪ್ಲಾನ್ ಮಾಡಿದ್ದು, ನಾಯಕಿಯ ಹುಡುಕಾಟವನ್ನು ಶುರು ಮಾಡಿದ್ದಾರೆ.ಒಟ್ಟಿನಲ್ಲಿ ಪ್ರೇಮ್ ಈ ಚಿತ್ರವನ್ನು ಬಜೆಟ್, ಸ್ಟಾರ್ ಕಾಸ್ಟ್. ಮೇಕಿಂಗ್, ಮ್ಯೂಸಿಕ್ ಎಲ್ಲಾ ವಿಭಾಗದಲ್ಲೂ ಗ್ರ್ಯಾಂಡ್ ಆಗಿ ಮಾಡಲು ಪಕ್ಕಾ ಪ್ಲಾಬ್ ಮಾಡಿದ್ದು, ಆ ಪ್ಲಾನ್ ನಂತೆಯೇ ಕೇಡಿ ಚಿತ್ರವನ್ನು ತೆರೆ ಮೇಲೆ ಕಟ್ಟಿ ಕೊಡಲು ಪ್ರೇಮ್ ಬಳಗ ಶ್ರದ್ದೆಯಿಂದ ಕಷ್ಟ ಅನ್ನದೆ ಇಷ್ಟ ಪಟ್ಟು ಕೆಲಸ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News