Kabza: ಎಲ್ಲೆಲ್ಲೂ ‘ಕಬ್ಬ’ ಸಿನಿಮಾದ್ದೇ ಹವಾ, ಹೊಸ ಸುದ್ದಿ ಏನ್ ಗೊತ್ತಾ?

Kabza Movie New Updates: ‘ಕಬ್ಜ’ದಲ್ಲಿ ರಿಯಲ್ ಸ್ಟಾರ್ ಉಪೇಂದ್ರನಿಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ ಮುಂತಾದವರು ಅಭಿನಯಿಸಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Feb 11, 2023, 04:49 PM IST
  • ನಾರ್ತ್​ ಅಮೆರಿಕದಲ್ಲಿ ಕಬ್ಜ ಸಿನಿಮಾ ಭರ್ಜರಿ ಓಪನಿಂಗ್​ ಪಡೆಯುವ ಸಾಧ್ಯತೆ ದಟ್ಟವಾಗಿದೆ
  • ದೊಡ್ಡ ಸಂಸ್ಥೆಗಳು ‘ಕಬ್ಜ’ದ ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ
  • ‘ಪ್ರೈಂ ಶೋ ಎಂಟರ್​ಟೇನ್ಮೆಂಟ್​’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದೆ
Kabza: ಎಲ್ಲೆಲ್ಲೂ ‘ಕಬ್ಬ’ ಸಿನಿಮಾದ್ದೇ ಹವಾ, ಹೊಸ ಸುದ್ದಿ ಏನ್ ಗೊತ್ತಾ? title=
‘ಕಬ್ಜ’ದ ಹೊಸ ಸುದ್ದಿ

ಬೆಂಗಳೂರು: ಕಬ್ಜ... ಡೇ ಬೈ ಡೇ ತುಂಬಾ ಸುದ್ದಿಯಲ್ಲಿರೋ ಸಿನಿಮಾ. ಕಬ್ಜ ಚಿತ್ರವನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ದೊಡ್ಡ ದೊಡ್ಡ ಸ್ಟಾರ್‍ಗಳಿಂದ ಹಿಡಿದು ಪ್ರತಿಯೊಬ್ಬ ಅಭಿಮಾನಿಯೂ ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಜೊತೆಗೆ ದಿನವೂ ಲೆಕ್ಕಾಚಾರ ಮಾಡುತ್ತಿದ್ದಾರೆ. ಇದೀಗ ಸಿನಿಮಾ ಬಗೆಗಿನ ಒಂದೊಂದೇ ಇಂಟ್ರೆಸ್ಟಿಂಗ್ ಮ್ಯಾಟರ್ಸ್ ನಮ್ಮ ನಿರೀಕ್ಷೆಯನ್ನು ಇನ್ನಷ್ಟು ದುಪ್ಪಟ್ಟು ಮಾಡುತ್ತಿದೆ.

ಕಬ್ಜ ಡೈರೆಕ್ಟರ್ ಮುಂದೆ ಸ್ಟಾರ್ ಡೈರೆಕ್ಟರ್‍ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡ್ಕೊಳ್ಳೋ ಬಗ್ಗೆ ಗಾಂಧಿನಗರದಲ್ಲಿ ಟಾಕ್ ಕೂಡ ಅಷ್ಟೇ ಜೋರಾಗಿ ನಡೆಯುತ್ತಿದೆ. ಕಬ್ಜ ಟೈಟಲ್ ಸಾಂಗ್ ಕೇಳಿ ಫ್ಯಾನ್ಸ್ ಹುಚ್ಚರಂತೆ ಇಷ್ಟಪಟ್ಟಿರೋ ವಿಚಾರ ನಿಮ್ಗೆ ಗೊತ್ತೇ ಇದೆ. ಇದೀಗ ಮತ್ತೊಂದು ಸ್ವೀಟ್ ಮ್ಯಾಟರ್ ನಿಮಗೆ ಖುಷ್ ಕೊಡುತ್ತೆ ಅದೇನು ಅಂತ ಮುಂದೆ ಓದಿ.

ಇದನ್ನೂ ಓದಿ: ಸತ್ಯ ಕಥೆ ಆಧರಿಸಿದ ʼಕ್ರಿಸ್ಟಿʼ ಸಿನಿಮಾ ಟ್ರೈಲರ್

ನಾರ್ತ್​ ಅಮೆರಿಕದಲ್ಲಿ ಈ ಸಿನಿಮಾ ಭರ್ಜರಿ ಓಪನಿಂಗ್​ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿನ ದೊಡ್ಡ ಸಂಸ್ಥೆಗಳು ‘ಕಬ್ಜ’ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ. ‘ಪ್ರೈಂ ಶೋ ಎಂಟರ್​ಟೇನ್ಮೆಂಟ್​’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು, 450ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆ ಮಾಡಲಿದೆ. ಅಷ್ಟೇ ಅಲ್ಲ ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ಖ್ಯಾತ ನಿರ್ಮಾಪಕ/ವಿತರಕ ಆನಂದ್​ ಪಂಡಿತ್​ ಸಜ್ಜಾಗಿದ್ದಾರೆ. ಇವೆಲ್ಲವೂ ಕನ್ನಡದ ಸಿನಿಮಾಗೆ ಹೊರ ಭಾಗದಲ್ಲಿ ಸಿಗುತ್ತಿರೋ ಗೌರವ ಅಲ್ಲದೇ ಇನ್ನೇನು ಅಲ್ವಾ..

‘ಕಬ್ಜ’ದಲ್ಲಿ ರಿಯಲ್ ಸ್ಟಾರ್ ಉಪೇಂದ್ರನಿಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ ಮುಂತಾದವರು ಅಭಿನಯಿಸಿದ್ದಾರೆ. ‘ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎ.ಜೆ.ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಇದು ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆಯಾಗಿದೆ.

ಇದನ್ನೂ ಓದಿ: ಹೇಗಿದೆ ನೋಡಿ ಗುಳಿ ಕೆನ್ನೆ ಬೆಡಗಿಯ ಸಿನಿ ಎಂಟ್ರಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News