ಸ್ವಂತ YouTube channel ಆರಂಭಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ..!

ಕಳೆದೆರಡು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿರುವ ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿರುವ ಕೊಡಗಿನ ಬೆಡಗಿ ಈಗ ತಮ್ಮದೇ ಸ್ವಂತ YouTube channel ವೊಂದನ್ನು ಆರಂಭಿಸಿದ್ದಾರೆ.

Written by - Zee Kannada News Desk | Last Updated : Mar 11, 2022, 07:56 PM IST
  • ಈಗ ರಶ್ಮಿಕಾ ಯುಟ್ಯೂಬ್ ಗೆ ಎಂಟ್ರಿ ನೀಡಿರುವ ಕುರಿತಾಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ
 ಸ್ವಂತ YouTube channel ಆರಂಭಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ..! title=
Photo Courtesy: Twitter

ಬೆಂಗಳೂರು: ಕಳೆದೆರಡು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿರುವ ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿರುವ ಕೊಡಗಿನ ಬೆಡಗಿ ಈಗ ತಮ್ಮದೇ ಸ್ವಂತ YouTube channel ವೊಂದನ್ನು ಆರಂಭಿಸಿದ್ದಾರೆ.

ಈಗ ಈ ಕುರಿತಾಗಿ Know more about me, maybe ಎನ್ನುವ ಶೀರ್ಷಿಕೆಯೊಂದಿಗೆ ಸಂಕ್ಷಿಪ್ತ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟಿ ರಶ್ಮಿಕಾ (Rashmika Mandanna), ಇದರಲ್ಲಿ ಅವರು ಕೆಲವು ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಾಣಬಹುದು.ಇದು ಮುಂಬರುವ ದಿನಗಳಲ್ಲಿ ಅವರ ಈ ಚಾನೆಲ್ ಹೇಗೆಲ್ಲಾ ಇರಬಹುದು ಎನ್ನುವುದರ ಕುರಿತಾದ ಸಂಕ್ಷಿಪ್ತ ಇಣುಕು ನೋಟವನ್ನು ನೀಡುತ್ತದೆ.

ಇದನ್ನೂ ಓದಿ-Viral Video: ‘ಪುಷ್ಪ’ ಸಿನಿಮಾದ ಶ್ರೀವಲ್ಲಿ ಗುಂಗಿಗೆ ಹೆಂಗೆಂಗೋ ಆಡುತ್ತಿರುವ ಯುವಕ..!

ಈಗ ರಶ್ಮಿಕಾ ಯುಟ್ಯೂಬ್ ಗೆ ಎಂಟ್ರಿ ನೀಡಿರುವ ಕುರಿತಾಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.ಅವರ ಈ ವಿಡಿಯೋಗೆ ಪ್ರತಿಕ್ರಿಯಿಸುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಯುಟ್ಯೂಬ್ ಎಂಟ್ರಿಗೆ ಸಂತಸ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಇನ್ಸ್ಟಾಗ್ರಾಂ ನಲ್ಲಿ 29 ಕ್ಕೂ ಅಧಿಕ ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ರಷ್ಮಿಕ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸೋಶಿಯಲ್ ಮೀಡಿಯಾ ಫಾಲೋವರ್ಸ್ ಹೊಂದಿರುವ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಉಡುಗೆ ತೊಡುಗೆ, ಪ್ರವಾಸ, ಸಿನಿಮಾ, ಆಹಾರಡ ಕುರಿತಾದ ಅಪ್ಡೇಟ್ ಗಳನ್ನು ಅವರು ಆಗಾಗ ನೀಡುತ್ತಲೇ ಇರುತ್ತಾರೆ.ಈಗ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಚಿತ್ರದ ಮೂಲಕ ಮೊದಲ ಬಾರಿಗೆ ಹಿಂದಿಗೆ ಎಂಟ್ರಿ ನೀಡುತ್ತಿದ್ದಾರೆ.ಈ ಚಿತ್ರವೂ ಜೂನ್ 10, 2022 ರಂದು ಬಿಡುಗಡೆಯಾಗಲಿದೆ.ಇದರ ಜೊತೆಗೆ ಅವರು ವಿಕಾಸ್ ಬಹ್ಲ್ ಅವರ 'ಗುಡ್ ಬೈ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.ಕನ್ನಡದಲ್ಲಿ ಅವರು ಕೊನೆಯದಾಗಿ  ಧ್ರುವ ಸರ್ಜಾ ಅಭಿನಯದ 'ಪೊಗರು'.ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ-WATCH:ಹಿಂದಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ ನಟಿ ರಾಧಿಕಾ ಕುಮಾರಸ್ವಾಮಿ, ಅಭಿಮಾನಿಗಳ ದಿಲ್ ಖುಷ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News