ರಶ್ಮಿಕಾ ಜೊತೆ ಗುಟ್ಟಾಗಿ ಮದುವೆಯಾದ್ರಾ ವಿಜಯ್ ದೇವರಕೊಂಡ! ಒಂದೇ ಮನೆಯಲ್ಲಿದ್ದಾರಾ ಈ ಜೋಡಿ?

Vijay Devarakonda Rashmika Mandanna Marriage: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಡೇಟಿಂಗ್‌ ವದಂತಿ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದರ ಜೊತೆಗೆ ಇತ್ತೀಚೆಗೆ ಅವರ ಮದುವೆ ವಿಚಾರ ಸಹ ಸದ್ದು ಮಾಡುತ್ತಿದೆ. 

Written by - Chetana Devarmani | Last Updated : Feb 29, 2024, 09:37 AM IST
  • ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ
  • ರಶ್ಮಿಕಾ ಜೊತೆ ಗುಟ್ಟಾಗಿ ಮದುವೆಯಾದ್ರಾ ವಿಜಯ್?
  • ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದಾರೆ ರಶ್ಮಿಕಾ - ವಿಜಯ್!?
ರಶ್ಮಿಕಾ ಜೊತೆ ಗುಟ್ಟಾಗಿ ಮದುವೆಯಾದ್ರಾ ವಿಜಯ್ ದೇವರಕೊಂಡ! ಒಂದೇ ಮನೆಯಲ್ಲಿದ್ದಾರಾ ಈ ಜೋಡಿ?   title=

Rashmika Mandanna Marriage: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಆಗಾಗ ಮುನ್ನೆಲೆಗೆ ಬರುತ್ತದೆ. ಆದರೆ ಈಗ ಅವರ ಮದುವೆ ಸುದ್ದಿ ಸಹ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂದು ಸಹ ಹೇಳಲಾಗ್ತಿದೆ. 

2018ರಲ್ಲಿ ಮೊದಲ ಬಾರಿಗೆ ‘ಗೀತ ಗೋವಿಂದಂ’ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಈ ಕಾರಣದಿಂದ 2019 ರಲ್ಲಿ ಮತ್ತೆ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಅಲ್ಲಿಂದ ಈ ಜೋಡಿ ಮಧ್ಯೆ ಏನೋ ನಡೀತಿದೆ ಎಂಬ ಮಾತುಗಳು ಶುರುವಾದವು. 

ಇದನ್ನೂ ಓದಿ: ಈ ಸ್ಟಾರ್ ನಟನ ಜೊತೆ ತನಿಷಾ ಕುಪ್ಪಂಡ ಲವ್, 6 ವರ್ಷದ ಪ್ರೀತಿ ಮುರಿದು ಬೀಳಲು ಇದೇ ಕಾರಣ!! 

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಂದೇ ಮನೆಯಲ್ಲಿದ್ದಾರೆ ಎಂಬ ಚರ್ಚೆ ಕೂಡ ಶುರುವಾಗಿದೆ. Instagram ನಲ್ಲಿ ಅವರು ಹಾಕುವ ಪ್ರತ್ಯೇಕ ಪೋಸ್ಟ್ ಗಳು ಇಂತಹ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರು ಒಟ್ಟಿಗೆ ಟ್ರಿಪ್‌ ಕೂಡ ಹೋಗುತ್ತಿದ್ದಾರೆ ಎಂಬ ವದಂತಿಗಳಿವೆ. ಹೀಗಿರುವಾಗ ಅವರಿಬ್ಬರು ಈಗಾಗಲೇ ಮದುವೆಯಾಗಿದ್ದಾರೆ ಎಂಬ ಅನುಮಾನ ಕೆಲವರನ್ನು ಕಾಡುತ್ತಿದೆ ಎನ್ನಲಾಗಿದೆ. 

ರಶ್ಮಿಕಾ ಮಂದಣ್ಣ ಫ್ಯಾನ್ಸ್‌ ಪೇಜ್‌ ಒಂದರಲ್ಲಿ ಒಂದು ಪೋಸ್ಟ್ ಕಾಣಿಸಿಕೊಂಡಿದೆ. ಅದರಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಎಂತಹ ಗಂಡ ಸಿಗಬೇಕು ಎಂಬ ಕಾಮೆಂಟ್ ಇದೆ. ಅಲ್ಲಿ ರಶ್ಮಿಕಾ ಪತಿ ವಿಜಯ್ ದೇವರಕೊಂಡ ಅವರಂತೆಯೇ ಇರಬೇಕು ಎಂದು ಬರೆಯಲಾಗಿದೆ. ಅದಕ್ಕೆ ʻನಿಜ’ ಎಂದು ರಶ್ಮಿಕಾ ಕೂಡ ಕಾಮೆಂಟ್ ಮಾಡಿದ್ದಾರೆ. ಇದರಿಂದಾಗಿ ಅಭಿಮಾನಿಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗಾಗಲೇ ಮದುವೆಯಾಗಿರಬಹುದೇ ಎಂಬ ಅನುಮಾನ ಮೂಡಿದೆ ಎನ್ನಲಾಗಿದೆ. (Note: ಈ ಲೇಖನವನ್ನು ವರದಿಗಳು ಮತ್ತು ವದಂತಿಗಳ ಆಧಾರದ ಮೇಲೆ ಬರೆಯಲಾಗಿದ್ದು, ಜೀ ಕನ್ನಡ ನ್ಯೂಸ್‌ ಸುದ್ದಿಯನ್ನು ದೃಢೀಕರಿಸುವುದಿಲ್ಲ.)

ಇದನ್ನೂ ಓದಿ: ಬ್ಯಾಡ್ಮಿಂಟನ್ ಆಟಗಾರನ ಜೊತೆ ಸಪ್ತಪದಿ ತುಳಿಯಲಿರುವ ತಾಪ್ಸಿ ಪನ್ನು..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News