ಸಲ್ಮಾನ್‌ ಖಾನ್‌ಗೆ ತೆಲುಗು ಡೈಲಾಗ್‌ ಹೇಳಿಕೊಟ್ಟ ಕನ್ನಡತಿ ರಶ್ಮಿಕಾ ಮಂದಣ್ಣ...!

ಗುಡ್‌ಬೈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಬಿಗ್‌ ಬಾಸ್‌ ಸೀಸನ್‌ 16 ಗೆ ಸಿನಿಮಾ ಪ್ರಮೋಶನ್‌ಗಾಗಿ ತೆರಳಿದ್ದರು, ಈ ವೇಳೆ ನಟ ಸಲ್ಮಾನ್‌ ಖಾನ್‌ಗೆ ಅವರಿಗೆ ತೆಲುಗು ಸಿನಿಮಾದ ಪ್ರಸಿದ್ಧ ಡೈಲಾಗ್‌ ಒಂದನ್ನು ಹೇಳಿಕೊಟ್ಟರು.

Written by - Krishna N K | Last Updated : Oct 9, 2022, 05:11 PM IST
  • ಗುಡ್‌ಬೈ ಸಿನಿಮಾದ ಪ್ರಚಾರದಲ್ಲಿ ನಟಿ ರಶ್ಮಿಕಾ ಮಂದಣ್ಣ ಬ್ಯುಸಿ
  • ಪ್ರಮೋಶನ್‌ ನಡುವೆ ಸಲ್ಮಾನ್‌ ಖಾನ್‌ ತೆಲುಗು ಡೈಲಾಗ್‌ ಹೇಳಿಕೊಟ್ಟ ನ್ಯಾಷುನಲ್‌ ಕ್ರಷ್‌
  • ಬಿಗ್‌ ಬಾಸ್‌ ಸೀಸನ್‌ 16 ಗೆ ಗುಡ್‌ಬೈ ಸಿನಿಮಾ ಪ್ರಮೋಶನ್‌ಗಾಗಿ ತೆರಳಿದ್ದ ರಶ್ಮಿಕಾ
ಸಲ್ಮಾನ್‌ ಖಾನ್‌ಗೆ ತೆಲುಗು ಡೈಲಾಗ್‌ ಹೇಳಿಕೊಟ್ಟ ಕನ್ನಡತಿ ರಶ್ಮಿಕಾ ಮಂದಣ್ಣ...! title=

ಬೆಂಗಳೂರು : ಗುಡ್‌ಬೈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಬಿಗ್‌ ಬಾಸ್‌ ಸೀಸನ್‌ 16 ಗೆ ಸಿನಿಮಾ ಪ್ರಮೋಶನ್‌ಗಾಗಿ ತೆರಳಿದ್ದರು, ಈ ವೇಳೆ ನಟ ಸಲ್ಮಾನ್‌ ಖಾನ್‌ಗೆ ಅವರಿಗೆ ತೆಲುಗು ಸಿನಿಮಾದ ಪ್ರಸಿದ್ಧ ಡೈಲಾಗ್‌ ಒಂದನ್ನು ಹೇಳಿಕೊಟ್ಟರು.

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಸಿನಿಮಾ ಗುಡ್‌ ಬೈ ಪ್ರಚಾರಕ್ಕಾಗಿ ನೀನಾ ಗುಪ್ತಾ ಜೊತೆ ಇತ್ತೀಚೆಗೆ ಬಿಗ್ ಬಾಸ್ 16 ರ ಸೆಟ್‌ಗಳಿಗೆ ಭೇಟಿ ನೀಡಿದ್ದರು. ಈ ವೇಳೆ ತೆಲುಗಿಗೆ ಡಬ್‌ ಆಗಿರುವ ಸಲ್ಮಾನ್‌ ಖಾನ್‌ ಅವರ ಸಿನಿಮಾದ ಪ್ರಮುಖ ಡೈಲಾಗ್‌ ಆದ.. ಜೀವನದಲ್ಲಿ ಮೂರು ವಿಷಯಗಳನ್ನು ಉದಾಸೀನ ಮಾಡ್ಬಾರದು, ಒಂದು ನಾನು, ನಂದು ಮತ್ತು ನನ್ನದು (ಜಿಂದಗಿ ಮೈ ತೀನ್‌ ಚೀಸ್‌ ಕಬಿ ಅಂಡರೆಸ್ಟಿಮೇಟ್‌ ನೈ ಕರ್ನಾ.. ಮಿ, ಐ ಆಂಡ್‌ ಮೈಸೆಲ್ಫ್‌) ಎಂಬ ಡೈಲಾಗನ್ನು ತೆಲುಗಿನಲ್ಲಿ ಹೇಗೆ ಹೇಳಬೇಕು ಎಂದು ಹೇಳಿಕೊಟ್ಟಿದ್ದಾರೆ. ರಶ್ಮಿಕಾ ಹೇಳಿದಂತೆ ಸಲ್ಮಾನ್‌ ಕೂಡ ಹೇಳಿದ್ದಾರೆ. ಈ ವೇಲೆ ರಶ್ಮಿಕಾ ಹಿಪ್ ಹಿಪ್ ಹುರ್ರೆ ಎಂದು ಚೀರಿ ಸಂತೋಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ʼಹೊಂಬಾಳೆ ಫಿಲಂಸ್‌ ಪ್ಯಾನ್‌ ಇಂಡಿಯಾ ಸಿನಿಮಾಗೆ ಮೂಹೂರ್ತʼ

ಇನ್ನು ರಶ್ಮಿಕಾ ಬಿಬಿ 16 ವೇದಿಕೆಯ ಮೇಲೆ ಪುಪ್ಪಾ ಸಿನಿಮಾದ ಸಾಮಿ..ಸಾಮಿ ಹಾಡಿಗೆ ಡಾನ್ಸ್‌ ಮಾಡಿದರು. ಸಲ್ಮಾನ್‌ ಖಾನ್‌ ಸಹ ಅವರಿಗೆ ಸಾಥ್‌ ನೀಡಿದರು. ಅಲ್ಲದೆ, ಬಿಗ್‌ಹೌಸ್‌ ಸದಸ್ಯರು ಸಹ ಪುಷ್ಪಾ ಹಾಡನ್ನು ಮರುಸೃಷ್ಟಿಸಿದರು. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ ಜನಪ್ರಿಯ ಡೈಲಾಗ್‌ ತಗ್ಗೆದೆಲೇ ಕೂಡಾ ಬಿಗ್‌ಹೌಸ್‌ ಮಂದಿಯಿಂದ ಕೇಳಿ ಬಂತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News