Ramayana Movie:'ರಾಮಾಯಣ'ಕ್ಕೆ ಮುಹೂರ್ತ ಫಿಕ್ಸ್..! ವಿಶೇಷ ದಿನದಂದೇ ಅನೌನ್ಸ್ ಪ್ಲಾನ್‌

Ramayana Movie 2024: ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರವನ್ನು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.

Written by - Zee Kannada News Desk | Last Updated : Mar 3, 2024, 01:17 PM IST
  • ಭಾರತೀಯ ಮಹಾಕಾವ್ಯವನ್ನು ಆಧರಿಸಿದ ‘ರಾಮಾಯಣ’ ಸಿನಿಮಾವನ್ನು ನಿರ್ದೇಶಕ ನಿತೀಶ್ ತಿವಾರಿ ಮೂರು ಭಾಗಗಳಲ್ಲಿ ನಿರ್ಮಿಸಲಿದ್ದಾರೆ.
  • ರಾಮನ ಪಾತ್ರವನ್ನು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ನಟಿಸಲಿದ್ದಾರೆ.
  • ಏಪ್ರಿಲ್ 17 ರಂದು ಶ್ರೀರಾಮ ನವಮಿಯಂದು ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ.
Ramayana Movie:'ರಾಮಾಯಣ'ಕ್ಕೆ ಮುಹೂರ್ತ ಫಿಕ್ಸ್..! ವಿಶೇಷ ದಿನದಂದೇ ಅನೌನ್ಸ್ ಪ್ಲಾನ್‌  title=

Ramayana Movie: ‘ರಾಮಾಯಣ’ ಸಿನಿಮಾ ದೇಶಾದ್ಯಂತ ಸಿನಿಪ್ರೇಮಿಗಳ ಕುತೂಹಲ ಕೆರಳಿಸುತ್ತಿದೆ. ಹಿಂದಿಯಲ್ಲಿ ತಯಾರಾಗಲಿರುವ ಈ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಭಾರತೀಯ ಮಹಾಕಾವ್ಯವನ್ನು ಆಧರಿಸಿದ ಈ ಸಿನಿಮಾವನ್ನು ನಿರ್ದೇಶಕ ನಿತೀಶ್ ತಿವಾರಿ ಮೂರು ಭಾಗಗಳಲ್ಲಿ ನಿರ್ಮಿಸಲಿದ್ದಾರೆ. 

‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರವನ್ನು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಡಿತ್ತು. ಹನುಮಾನ್ ಪಾತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಶೂರ್ಪಣಖಾ ಪಾತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವದಂತಿಗಳಿವೆ. ಆದ್ರೆ ಈ ಪ್ರಾಜೆಕ್ಟ್ ಬಗ್ಗೆ ಸಿನಿಮಾ ವಲಯದಲ್ಲಿ ದಿನಕ್ಕೊಂದು ಸುದ್ದಿ ಕೇಳಿ ಬರುತ್ತಿದೆ.

ಇದನ್ನೂ ಓದಿ: Nayana Nagaraj: ಪ್ರಿಯಕರನ ಜೊತೆಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಗಿಣಿರಾಮ ನಟಿ!

ಇಲ್ಲಿಯವರೆಗೂ ಈ ಚಿತ್ರದ ಬಗ್ಗೆ ಯಾವುದೇ ರೀತಿಯ ಅಧಿಕೃತ ಘೋಷಣೆಯಾಗಿಲ್ಲ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಈ ಮಹಾಕಾವ್ಯದ ಕಥೆಯನ್ನು ಬೆಳ್ಳಿತೆರೆಗೆ ತರಲು ತಯಾರಕರು ಯೋಜಿಸುತ್ತಿದ್ದಾರೆಂದು ತೋರುತ್ತದೆ. ಈಗಾಗಲೇ ಎಲ್ಲಾ ನಟರ ಲುಕ್ ಟೆಸ್ಟ್, ವಾಯ್ಸ್ ಟೆಸ್ಟ್ ಮತ್ತಿತರ ಕಾರ್ಯಕ್ರಮಗಳು ಮುಗಿದಿವೆ ಎನ್ನಲಾಗಿದೆ. ಇನ್ನು ಈ ಸಿನಿಮಾದ ಘೋಷಣೆಗೆ ಮತ್ತು ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.

ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ 17 ರಂದು ಶ್ರೀರಾಮ ನವಮಿಯಂದು ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆಯಂತೆ. ಅದೇ ದಿನ ಈ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಲಿದೆ. ನಿರ್ದೇಶಕ ನಿತೀಶ್ ತಿವಾರಿ ಸುಧಾರಿತ ತಂತ್ರಜ್ಞಾನ ಬಳಸಿ ಈ ಸಿನಿಮಾ ಮಾಡಲಿದ್ದಾರೆ. ನಮಿತಾ ಮಲ್ಹೋತ್ರಾ, ಮಧು ಮಂಟೇನಾ ಮತ್ತು ಅಲ್ಲು ಅರವಿಂದ್ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಲಿದ್ದಾರೆ ಎಂಬ ವದಂತಿಯೂ ಇದೆ. ಇತ್ತೀಚೆಗಷ್ಟೇ ಸಾಯಿ ಪಲ್ಲವಿ ಮುಂಬೈಗೆ ಹೋಗಿದ್ದು, ರಾಮಾಯಣ ಸಿನಿಮಾದ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ ಆಕೆಯನ್ನು  ಸೀತೆಯ ಪಾತ್ರದಿಂದ ತೆಗೆದುಹಾಕಿ ಜಾನಿ ಕಪೂರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಹೇಳಲಾಗುತ್ತದೆ.ಮಾಹಿತಿ ಕೂಡ ಇದೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನೂಸಿಕ್ಕಿಲ್ಲ.

ಇದನ್ನೂ ಓದಿ:  ತಮನ್ನಾ ಭಾಟಿಯಾ ಜೊತೆ ವಸಿಷ್ಠ ಸಿಂಹ... ಯಾವುದು ಆ ಸಿನಿಮಾ?Webforms

ರಾಮಾಯಣವನ್ನು ಆಧರಿಸಿದ ಅನೇಕ ಚಿತ್ರಗಳು ಈಗಾಗಲೇ ತೆಲುಗು ಮತ್ತು ಹಿಂದಿಯಲ್ಲಿ ಬಂದಿವೆ. ಹಾಗೆಯೇ ತೆರೆಗೆ ಬಂದ ರಾಮಾಯಣ ಧಾರಾವಾಹಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈಗ ನಿತೀಶ್ ತಿವಾರಿ ಅವರ ಮುಂಬರುವ ರಾಮಾಯಣ ಹೇಗಿರಲಿದೆ ಎಂದು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಬಾಲಿವುಡ್ ನಿರ್ದೇಶಕ ಓಮ್ರಾತ್ ನಿರ್ದೇಶನದ ಆದಿಪುರುಷ ಚಿತ್ರ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಸಿನಿಮಾದ ಬಗ್ಗೆ ನೆಟ್ಟಿಗರು ನಿರ್ದೇಶಕರನ್ನು ಟ್ರೋಲ್ ಮಾಡುದ್ದರು. ಅಲ್ಲದೇ ಈ ಚಿತ್ರದ ಸಂಭಾಷಣೆಗಳು ರಾಮಾಯಣವನ್ನು ಅವಮಾನಿಸುತ್ತವೆ ಎಂಬ ದೂರುಗಳು ದೇಶದ ಹಲವೆಡೆ ಈಗಲೂ ಇವೆ. ಇದಕ್ಕೆ ಚಿತ್ರತಂಡವು ಕೂಡ  ಕ್ಷಮೆಯಾಚಿಸಿದೆ.

ಅಲ್ಲದೇ ಹಿಂದಿಯಲ್ಲಿ ಮೂಡಿ ಬರುವ ರಾಮಾಯಣ ಸಿನಿಮಾ ಹೇಗೆ ಮೂಡಿ ಬರಲಿದೆ ಎಂದೂ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News