ಕಾವೇರಿ ಕೂಗಿಗೆ ಧ್ವನಿಗೂಡಿಸದ ರಾಜ್‌, ರಿಷಬ್‌, ರಕ್ಷಿತ್‌ ಶೆಟ್ಟಿ : ನೆಟಿಜನ್ಸ್‌ ಆಕ್ರೋಶ

ಕಾವೇರಿ ವಿಚಾರವಾಗಿ ನಾವು ಸದಾ ಒಂದಾಗಿ ಇರುತ್ತೇವೆ ಅಂತ ಸ್ಯಾಂಡಲ್‌ವುಡ್‌ ಕಲಾವಿದರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಆದ್ರೆ ಸಿನಿಮಾ ಪ್ರಮೋಷನ್‌ ವೇಳೆ ಕಾಣಿಸಿಕೊಳ್ಳುವ ಶೆಟ್ಟಿ ಟೀಂ ಈ ವಿಚಾರವಾಗಿ ಧ್ವನಿ ಎತ್ತದೇ ಇರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.

Written by - Krishna N K | Last Updated : Sep 29, 2023, 03:45 PM IST
  • ರಾಜ್ಯಾದ್ಯಂತ ಕಾವೇರಿ ಕಹಳೆ ಮೊಳಗಿದೆ, ಸ್ಯಾಂಡಲ್‌ವುಡ್‌ ಸಹ ಈ ಕುರಿತು ಧ್ವನಿ ಎತ್ತಿದೆ.
  • ಇಂದು ಶಿವಣ್ಣ ನೇತೃತ್ವದಲ್ಲಿ ಚಂದನವನದ ಕಲಾವಿದರು ಒಗ್ಗಟ್ಟು ಪ್ರದರ್ಶನ ಮಾಡಿದರು.
  • ಜೀವನದಿ ಕುರಿತು ಧ್ವನಿ ಎತ್ತದ ರಿಷಬ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ, ರಕ್ಷಿತ್‌ ಶೆಟ್ಟಿ.
ಕಾವೇರಿ ಕೂಗಿಗೆ ಧ್ವನಿಗೂಡಿಸದ ರಾಜ್‌, ರಿಷಬ್‌, ರಕ್ಷಿತ್‌ ಶೆಟ್ಟಿ : ನೆಟಿಜನ್ಸ್‌ ಆಕ್ರೋಶ title=

ಬೆಂಗಳೂರು : ರಾಜ್ಯಾದ್ಯಂತ ಕಾವೇರಿ ಕಹಳೆ ಮೊಳಗಿದೆ. ಸ್ಯಾಂಡಲ್‌ವುಡ್‌ ಸಹ ಈ ಕುರಿತು ಧ್ವನಿ ಎತ್ತಿದೆ. ಇಂದು ಶಿವಣ್ಣ ನೇತೃತ್ವದಲ್ಲಿ ಚಂದನವನದ ಕಲಾವಿದರು ಒಗ್ಗಟ್ಟು ಪ್ರದರ್ಶನ ಮಾಡಿದರು. ಆದ್ರೆ ಜೀವನದಿ ಕುರಿತು ರಿಷಬ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ, ರಕ್ಷಿತ್‌ ಶೆಟ್ಟಿ ಒಂದೇ ಒಂದು ವಿಚಾರ ಮಾತನಾಡದಿರುವುದು ನೆಟ್ಟಿಗರಿಗೆ ಇಷ್ಟವಾಗಿಲ್ಲ.

ಹೌದು.. ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆ. ರಾಜ್ಯಾದ್ಯಂತ ಬಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಕಾವೇರಿ ವಿಚಾರವಾಗಿ ನಾವು ಸದಾ ಒಂದಾಗಿ ಇರುತ್ತೇವೆ ಅಂತ ಸ್ಯಾಂಡಲ್‌ವುಡ್‌ ಕಲಾವಿದರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಆದ್ರೆ ಸಿನಿಮಾ ಪ್ರಮೋಷನ್‌ ವೇಳೆ ಕಾಣಿಸಿಕೊಳ್ಳುವ ಶೆಟ್ಟಿ ಟೀಂ ಈ ವಿಚಾರವಾಗಿ ಧ್ವನಿ ಎತ್ತದೇ ಇರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.

ಇದನ್ನೂ ಓದಿ: ನಮ್ಮ ಮನೆ ವಾಚ್‌ಮ್ಯಾನ್‌ ಪಕ್ಕದ ಮನೆಗೆ ನೀರು ಬಿಡ್ತಿದ್ದಾನೆ : ನಟ ಉಪೇಂದ್ರ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅನ್ಯ ಭಾಷೆಯ ಸಿನಿಮಾಗಳನ್ನು ಪ್ರಮೋಷನ್‌ ಮಾಡುವ ರಿಷಬ್‌ ಶೆಟ್ಟಿ ಮತ್ತು ರಕ್ಷಿತ್‌ ಶೆಟ್ಟಿಯವರಿಗೆ ಕಾವೇರಿ ವಿಚಾರವಾಗಿ ಏಕೆ ಸೈಲೆಂಟ್‌ ಆಗಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ರಿಷಬ್‌ ಕಳೆದ ಕೆಲವು ದಿನಗಳ ಹಿಂದೆ ತಮ್ಮ ಎಕ್ಸ್‌ ಖಾತೆಯಲ್ಲಿ ಕಾವೇರಿ ಕುರಿತು ಸಂದೇಶ ಹಾಕಿ ಸುಮ್ಮನಾಗಿದ್ದರು.

ಇನ್ನು ಕಾಂತಾರ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾದ ಖುಷಿಯಲ್ಲಿ ರಿಷಬ್‌ ಶೆಟ್ಟಿ ಇದ್ದಾರೆ. ಅಲ್ಲದೆ, ಸಪ್ತಸಾಗರದಾಚೆ ಪ್ರಮೋಷನ್‌ನಲ್ಲಿ ರಕ್ಷಿತ್‌ ಶೆಟ್ಟಿ ಬ್ಯುಸಿಯಾಗಿದ್ದು, ರಾಜ್‌ಬಿ ಶೆಟ್ಟಿ ಟೋಬಿ ಯಶಸ್ಸಿನ ಖುಷಿಯಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News