Richard Antony: ರಕ್ಷಿತ್ ಶೆಟ್ಟಿಯ ಸಮುದ್ರ ದೇವನ ಅವತಾರಕ್ಕೆ ಫ್ಯಾನ್ಸ್ ಗಳು ಫಿದಾ

ಸದ್ಯ ಭಾರತೀಯ ಸಿನಿಮಾದಲ್ಲಿ ಕನ್ನಡದ ಹಲವು ಕಲಾತ್ಮಕ ಹಾಗೂ ಭಾರಿ ಬಜೆಟ್ ನ ಸಿನಿಮಾಗಳು ಸದ್ದು ಮಾಡುತ್ತಿವೆ. ಇದರ ಸಂಪೂರ್ಣ ಶ್ರೇಯ ಈಗ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಗೆ ಸಲ್ಲಬೇಕು.

Written by - Zee Kannada News Desk | Last Updated : Jul 11, 2021, 04:52 PM IST
  • ಸದ್ಯ ಭಾರತೀಯ ಸಿನಿಮಾದಲ್ಲಿ ಕನ್ನಡದ ಹಲವು ಕಲಾತ್ಮಕ ಹಾಗೂ ಭಾರಿ ಬಜೆಟ್ ನ ಸಿನಿಮಾಗಳು ಸದ್ದು ಮಾಡುತ್ತಿವೆ. ಇದರ ಸಂಪೂರ್ಣ ಶ್ರೇಯ ಈಗ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಗೆ ಸಲ್ಲಬೇಕು.
  • ಮೊದಲ ಬಾರಿಗೆ ಉಳಿದವರು ಕಂಡಂತೆ ಸಿನಿಮಾದ ಮೂಲಕ ನಿರ್ದೇಶನಕ್ಕೆ ಕೈಹಾಕಿದ್ದ ರಕ್ಷಿತ್ ಶೆಟ್ಟಿ (Rakshit Shetty) ಈಗ ರಿಚರ್ಡ್ ಆಂಟನಿ ಟೀಸರ್ ಮೂಲಕ ಕಥೆಗೆ ಇರುವ ಆಳವನ್ನು ದೃಶ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.
Richard Antony: ರಕ್ಷಿತ್ ಶೆಟ್ಟಿಯ ಸಮುದ್ರ ದೇವನ ಅವತಾರಕ್ಕೆ ಫ್ಯಾನ್ಸ್ ಗಳು ಫಿದಾ  title=
Photo Courtesy: Twitter

ಬೆಂಗಳೂರು: ಸದ್ಯ ಭಾರತೀಯ ಸಿನಿಮಾದಲ್ಲಿ ಕನ್ನಡದ ಹಲವು ಕಲಾತ್ಮಕ ಹಾಗೂ ಭಾರಿ ಬಜೆಟ್ ನ ಸಿನಿಮಾಗಳು ಸದ್ದು ಮಾಡುತ್ತಿವೆ. ಇದರ ಸಂಪೂರ್ಣ ಶ್ರೇಯ ಈಗ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಗೆ ಸಲ್ಲಬೇಕು.

ಇದನ್ನೂ ಓದಿ: HBD Rakshit Shetty: ಪಂಚ ಭಾಷೆಗಳಲ್ಲಿ ಬಿಡುಗಡೆಯಾದ 777 Charlie teaser

ಕೆಜಿಎಫ್ ಚಿತ್ರದ ನಂತರ ಕನ್ನಡ ಸಿನಿಮಾದ ಅದೃಷ್ಟವೇ ಬದಲಾಗಿ ಹೋಗಿದೆ, ಕನ್ನಡ ಸಿನಿಮಾದ ವ್ಯಾಪ್ತಿ ಮತ್ತು ಮಾರುಕಟ್ಟೆ ಈಗ ಪ್ಯಾನ್ ಇಂಡಿಯಾ ಅಷ್ಟೇ ಅಲ್ಲದೆ ಪ್ಯಾನ್ ವರ್ಲ್ಡ್ ಆಗಿದೆ. ಈಗಾಗಲೇ ಕೆಜಿಎಫ್ ಚಾಪ್ಟರ್ 1 ರ ಯಶಸ್ಸಿನ ನಂತರ ಎರಡನೇ ಅಧ್ಯಾಯ ಕೂಡ ಬಿಡುಗಡೆ ಸಜ್ಜಾಗಿದೆ. ಅಷ್ಟೇ ಅಲ್ಲದೆ ದ್ವಿತ್ವ, ಬಘೀರಾ,ಮತ್ತು ಸದ್ಯ ಟೈಟಲ್ ಲಾಂಚ್ ಆಗಿರುವ ರಿಚರ್ಡ್ ಆಂಟನಿ ಸಿನಿಮಾಗಳೆಲ್ಲವೂ ಕೂಡ ಹೊಂಬಾಳೆ ಬ್ಯಾನರ್ ನಲ್ಲಿಯೇ ನಿರ್ಮಾಣವಾಗುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದಲ್ಲೇ ಮುಂದಿನ ಮೂರು ಎರಡು ವರ್ಷಗಳಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ ಕನ್ನಡದ ಸಿನಿಮಾಗಳ ಸದ್ದೇ ಹೆಚ್ಚು ಇರಲಿದೆ ಎನ್ನಲಾಗುತ್ತಿದೆ.

ಮೊದಲ ಬಾರಿಗೆ ಉಳಿದವರು ಕಂಡಂತೆ ಸಿನಿಮಾದ ಮೂಲಕ ನಿರ್ದೇಶನಕ್ಕೆ ಕೈಹಾಕಿದ್ದ ರಕ್ಷಿತ್ ಶೆಟ್ಟಿ (Rakshit Shetty) ಈಗ ರಿಚರ್ಡ್ ಆಂಟನಿ ಟೀಸರ್ ಮೂಲಕ ಕಥೆಗೆ ಇರುವ ಆಳವನ್ನು ದೃಶ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.ಈಗ ಸಿನಿಮಾದ ಟೈಟಲ್ ಲಾಂಚ್ ಮಾಡಿ ಟೀಸರ್ ಹಂಚಿಕೊಂಡಿರುವ ನಟ ನಿರ್ದೇಶಕ ರಕ್ಷಿತ ಶೆಟ್ಟಿ "ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ..."ರಿಚರ್ಡ್ ಆಂಟನಿ" - ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ" ಎಂದು ಬರೆದುಕೊಂಡಿದ್ದಾರೆ. ಲಾರ್ಡ್ ಆಫ್ ದಿ ಸಿ ಎನ್ನುವ ಮೂಲಕ ರಿಚರ್ಡ್ ಆಂಟನಿ ಆಟವೆಲ್ಲಾ ನಡೆಯುವುದು ಸಮುದ್ರದಲ್ಲೇ ಎನ್ನುವ ಸಂದೇಶವನ್ನು ಟೀಸರ್ ಕಟ್ಟಿಕೊಡುತ್ತದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಅವನೇ ಶ್ರೀಮನ್ನಾರಾಯಣ'

ಈ ಚಿತ್ರದ ನಾಯಕ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ರಕ್ಷಿತ್ ಶೆಟ್ಟಿ ಅವರೇ ನಿರ್ವಹಿಸಲಿದ್ದಾರೆ, ಚಿತ್ರಕ್ಕೆ ಬಿ.ಅಜನಿಶ್  ಲೋಕನಾಥ್ ಅವರ ಸಂಗೀತವಿದ್ದರೆ, ಕರಮ್ ಅವರು ಚಿತ್ರಕ್ಕಾಗಿ ಛಾಯಾಗ್ರಹಣವನ್ನು ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News