Jailer collection : ಜೈಲರ್‌ ಹೊಸ ದಾಖಲೆ, ಗಲ್ಲಾಪೆಟ್ಟಿಗೆಯಲ್ಲಿ ತಲೈವಾ ಕಮಾಲ್‌! ಒಟ್ಟು ಕಲೆಕ್ಷನ್‌ ಎಷ್ಟು ಕೋಟಿ?

Jailer box Office collection day 5: ರಜನಿಕಾಂತ್ ಅವರ ಇತ್ತೀಚಿನ ಸಿನಿಮಾ ಜೈಲರ್ ಹೊಸ ದಾಖಲೆ ಬರೆದಿದೆ. ಈಗ ಈ ವರ್ಷಕ್ಕೆ ಹೆಚ್ಚು ಗಳಿಕೆಯ ತಮಿಳು ಚಿತ್ರವಾಗಿದೆ. ಪೊನ್ನಿಯಿನ್ ಸೆಲ್ವನ್ II ಅನ್ನು ಬೀಟ್‌ ಮಾಡಿ ಮುಂದಕ್ಕೆ ಸಾಗಿದೆ. 

Written by - Chetana Devarmani | Last Updated : Aug 16, 2023, 04:11 PM IST
  • ರಜನಿಕಾಂತ್ ಅವರ ಇತ್ತೀಚಿನ ಸಿನಿಮಾ ಜೈಲರ್
  • ಬಾಕ್ಸ್‌ ಆಫೀಸ್‌ನಲ್ಲಿ ಜೈಲರ್‌ ಹೊಸ ದಾಖಲೆ ಸೃಷ್ಟಿ
  • ಗಲ್ಲಾಪೆಟ್ಟಿಗೆಯಲ್ಲಿ ತಲೈವಾ ಕಮಾಲ್‌!
Jailer collection : ಜೈಲರ್‌ ಹೊಸ ದಾಖಲೆ, ಗಲ್ಲಾಪೆಟ್ಟಿಗೆಯಲ್ಲಿ ತಲೈವಾ ಕಮಾಲ್‌! ಒಟ್ಟು ಕಲೆಕ್ಷನ್‌ ಎಷ್ಟು ಕೋಟಿ?  title=

Jailer box Office collection day 5: ರಜನಿಕಾಂತ್ ಅವರ ಇತ್ತೀಚಿನ ಸಿನಿಮಾ ಜೈಲರ್ ಹೊಸ ದಾಖಲೆ ಬರೆದಿದೆ. ಈಗ ಈ ವರ್ಷಕ್ಕೆ ಹೆಚ್ಚು ಗಳಿಕೆಯ ತಮಿಳು ಚಿತ್ರವಾಗಿದೆ. ಪೊನ್ನಿಯಿನ್ ಸೆಲ್ವನ್ II ಅನ್ನು ಬೀಟ್‌ ಮಾಡಿ ಮುಂದಕ್ಕೆ ಸಾಗಿದೆ. ಮಣಿರತ್ನಂ ಅವರ PS II ಸರಿಸುಮಾರು ₹345 ಕೋಟಿ ಗಳಿಸಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್‌ನಲ್ಲಿ ಮೋಹನ್‌ಲಾಲ್, ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಿನಾಯಕನ್, ಶಿವರಾಜ್‌ಕುಮಾರ್ ಮತ್ತು ನಾಗೇಂದ್ರ ಬಾಬು ಮುಂತಾದವರು ನಟಿಸಿದ್ದಾರೆ.  

ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅಂಕಿಅಂಶಗಳನ್ನು ಟ್ವೀಟ್ ಮಾಡಿದ್ದಾರೆ. ಜೈಲರ್‌ ಚಿತ್ರವು ಈ ಹಿಂದೆ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ II ರ ದಾಖಲೆಯನ್ನು ದಾಟಿದೆ ಎಂದು ಹೇಳಿದ್ದಾರೆ. ಐಶ್ವರ್ಯ ರೈ ಬಚ್ಚನ್, ವಿಕ್ರಮ್, ತ್ರಿಶಾ ಅಭಿನಯದ ಪೊನ್ನಿಯಿನ್ ಸೆಲ್ವನ್ II ರ ಕಲೆಕ್ಷನ್‌ಗಳನ್ನು ದಾಟಿದ ಜೈಲರ್ 2023 ರ ಮೂರನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು. ಶಾರುಖ್ ಖಾನ್ ಅವರ ಪಠಾಣ್ ಮತ್ತು ಪ್ರಭಾಸ್ ಅವರ ಆದಿಪುರುಷ ಈ ವರ್ಷದ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದೆ. 

ಇದನ್ನೂ ಓದಿ : ನ್ಯಾಷನಲ್‌ ಕ್ರಷ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದು ಇದೇ ಸಿನಿಮಾಗಳಿಂದ!

ಜೈಲರ್ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ₹174.15 ಕೋಟಿ ಗಳಿಸಿದೆ. ಭಾರತದಲ್ಲಿ ಬಿಡುಗಡೆಯಾದ ಐದು ದಿನಗಳಲ್ಲಿ ತಮಿಳು ಆವೃತ್ತಿಯೇ ₹139.05 ಕೋಟಿ ಗಳಿಸಿದೆ ಎಂದು ವರದಿ ತಿಳಿಸಿದೆ. ತೆಲುಗು ಅವತರಣಿಕೆ ₹32.55 ಕೋಟಿ ಗಳಿಸಿದ್ದರೆ ಹಿಂದಿ ವರ್ಷನ್ ಒಟ್ಟು ₹1.25 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ, ಚಿತ್ರವು ಗುರುವಾರ ಆಗಸ್ಟ್ 10 ರಂದು ಬಿಡುಗಡೆಯಾದಾಗ ₹48.35 ಕೋಟಿ (ಎಲ್ಲಾ ಭಾಷೆಗಳು) ಆರಂಭಿಕ ಕಲೆಕ್ಷನ್ ಮಾಡಿತು. ಚಿತ್ರವು ಎರಡನೇ ದಿನದಲ್ಲಿ ₹25.75 ಕೋಟಿ ಗಳಿಸಿದಾಗ ದೊಡ್ಡ ಕುಸಿತವನ್ನು ಕಂಡಿತು. ವಾರಾಂತ್ಯದಲ್ಲಿ ಸಂಗ್ರಹಗಳು ಹೆಚ್ಚಿವೆ. ಸೋಮವಾರದ ಅಂಕಿಅಂಶಗಳು ಗಮನಾರ್ಹ ಬೆಳವಣಿಗೆಯನ್ನು ತೋರಿಸಿದವು ಮತ್ತು ಭಾರತದಲ್ಲಿ ಐದನೇ ದಿನಕ್ಕೆ ₹23.55 ಕೋಟಿ ಗಳಿಸಿತು. ಆರನೇ ದಿನಕ್ಕೆ ಜೈಲರ್‌ ಸಿನಿಮಾ ವಿಶ್ವಾದ್ಯಂತ 400 ಕೋಟಿ ಗಳಿಕೆಯ ಗಡಿಯತ್ತ ದಾಪುಗಾಲಿಟ್ಟಿದೆ.

ಇದನ್ನೂ ಓದಿ: ಚಪ್ಪಲಿ ಧರಿಸಿ ರಾಷ್ಟ್ರಧ್ವಜ ಹಾರಿಸಿದ ಶಿಲ್ಪಾ ಶೆಟ್ಟಿ.. ನೆಟ್ಟಿಗರ ಆಕ್ರೋಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News