ಆಸ್ಕರ್‌ನಷ್ಟೇ ಪ್ರತಿಷ್ಠಿತ ʼಗೋಲ್ಡನ್‌ ಗ್ಲೋಬ್‌ʼ ಪ್ರಶಸ್ತಿಗೆ RRR ನಾಮಿನೇಟ್‌..!

RRR Golden Globe awards : ರಾಜಮೌಳಿ ನಿರ್ದೇಶನದ ʼRRRʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್‌ ಎಬ್ಬಿಸಿ ವಿಶ್ವದಾದ್ಯಂತ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಸಾಲು ಸಾಲು ದಾಖಲೆ ನಿರ್ಮಿಸುತ್ತಿರುವ ಸಿನಿಮಾ ಈಗ ಆಸ್ಕರ್‌ನಷ್ಟೇ ಪ್ರತಿಷ್ಠಿತವಾದ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. ಈ ಕುರಿತು ಸ್ವತಃ ಎಸ್‌ಎಸ್‌ ರಾಜಮೌಳಿ ಅವರು ಸೋಷಿಯಲ್‌ ಮೀಡಿಯಾದ ಮೂಲಕ ಫ್ಯಾನ್ಸ್‌ ಜೊತೆ ಹಂಚಿಕೊಂಡಿದ್ದಾರೆ

Written by - Krishna N K | Last Updated : Dec 13, 2022, 02:19 PM IST
  • ʼRRRʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್‌ ಎಬ್ಬಿಸಿ ವಿಶ್ವದಾದ್ಯಂತ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ
  • ರಾಜಮೌಳಿ ದೃಶ್ಯಕಾವ್ಯ ಇದೀಗ ಆಸ್ಕರ್‌ನಷ್ಟೇ ಪ್ರತಿಷ್ಠಿತವಾದ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ
  • ಸಾಲು ಸಾಲು ದಾಖಲೆ ನಿರ್ಮಿಸುತ್ತಿರುವ ಸಿನಿಮಾಗೆ ಆಸ್ಕರ್‌ ಪಕ್ಕಾ ಎಂದು ನೆಟ್ಟಿಗರು ಹೇಳುತ್ತಿದ್ದಾರೆ
ಆಸ್ಕರ್‌ನಷ್ಟೇ ಪ್ರತಿಷ್ಠಿತ ʼಗೋಲ್ಡನ್‌ ಗ್ಲೋಬ್‌ʼ ಪ್ರಶಸ್ತಿಗೆ RRR ನಾಮಿನೇಟ್‌..! title=

RRR Golden Globe awards : ರಾಜಮೌಳಿ ನಿರ್ದೇಶನದ ʼRRRʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್‌ ಎಬ್ಬಿಸಿ ವಿಶ್ವದಾದ್ಯಂತ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಸಾಲು ಸಾಲು ದಾಖಲೆ ನಿರ್ಮಿಸುತ್ತಿರುವ ಸಿನಿಮಾ ಈಗ ಆಸ್ಕರ್‌ನಷ್ಟೇ ಪ್ರತಿಷ್ಠಿತವಾದ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. ಈ ಕುರಿತು ಸ್ವತಃ ಎಸ್‌ಎಸ್‌ ರಾಜಮೌಳಿ ಅವರು ಸೋಷಿಯಲ್‌ ಮೀಡಿಯಾದ ಮೂಲಕ ಫ್ಯಾನ್ಸ್‌ ಜೊತೆ ಹಂಚಿಕೊಂಡಿದ್ದಾರೆ

ಇನ್ನು, ವಿದೇಶಗಳಲ್ಲಿ ಇಂದಿಗೂ ಅಬ್ಬರಿಸುತ್ತಿರುವ ಆರ್‌ಆರ್‌ಆರ್‌ ಸಿನಿಮಾ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಳುತ್ತಿದ್ದು, ಈ ಬಾರಿ ಆಸ್ಕರ್ ಪಶಸ್ತಿಯನ್ನು ಜಕ್ಕಣ್ಣ ಮುಡಿಗೇರಿಸಿಕೊಳ್ಳುತ್ತಾರೆ ಅಂತ ನೆಟ್ಟಿಗರು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಇದರ ನಡುವೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ರಾಜಮೌಳಿಯ ಸಿನಿಮಾ ಆಯ್ಕೆಯಾಗಿದ್ದು, ಆಸ್ಕರ್‌ ಕೂಡಾ ಪಕ್ಕಾ ಎನ್ನುವುವಂತಿದೆ. ಅದ್ರೆ ಭಾರತದಿಂದ ಆಸ್ಕರ್‌ಗೆ ಆರ್‌ಆರ್‌ಆರ್‌ ಆಯ್ಕೆಯಾಗಿಲ್ಲ.

ಇದನ್ನೂ ಓದಿ: ಸಡನ್ ಆಗಿ ಕಿಚ್ಚನ ಮನೆಗೆ ಭೇಟಿ ಕೊಟ್ಟಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ... ಯಾಕೆ ಗೊತ್ತಾ..?

ಇದೀಗ 80ನೇ ಗೋಲ್ಡನ್ ಗ್ಲೋಬ್ ನಾಮಿನೇಶನ್‌ ಪ್ರಕ್ರಿಯೆ ಆರಂಭಗೊಂಡಿದ್ದು, ರಾಜಮೌಳಿ ದೃಶ್ಯಕಾವ್ಯ ಆರ್‌ಆರ್‌ಆರ್‌ ಸಿನಿಮಾ ಗೋಲ್ಡನ್ ಗ್ಲೋಬ್‌ಗೆ ಎಂಟ್ರಿ ಕೊಟ್ಟಿದೆ. RRR ಸಿನಿಮಾ ಎರಡು ವಿಭಾಗದಲ್ಲಿ ನಾಮಿನೇಶನ್ ಪಡೆದುಕೊಂಡಿದ್ದು, ಅತ್ಯುತ್ತಮ ವಿದೇಶಿ ಸಿನಿಮಾ ಹಾಗೂ ಅತ್ಯುತ್ತಮ ಒರಿಜಿನಲ್ ಹಾಡು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಈ ಎರಡೂ ವಿಭಾಗದಲ್ಲಿ RRR ಗೆ ಪ್ರಶಸ್ತಿ ಫಿಕ್ಸ್‌ ಎಂದು ಹೇಳಲಾಗುತ್ತಿದೆ.

 
 
 
 

 
 
 
 
 
 
 
 
 
 
 

A post shared by SS Rajamouli (@ssrajamouli)

ಇನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಕ್ಕಣ್ಣ, ಮುಂದಿನ ವರ್ಷದ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ 2 ವಿಭಾಗಗಳಲ್ಲಿ RRR ನಾಮನಿರ್ದೇಶನಗೊಂಡಿದೆ. ನಾಟು ನಾಟು ಟ್ರ್ಯಾಕ್‌ಗಾಗಿ ಅತ್ಯುತ್ತಮ ಇಂಗ್ಲಿಷ್ ಅಲ್ಲದ ಮತ್ತು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಸೋಮವಾರ ಸಂಜೆ ಗೋಲ್ಡನ್ ಗ್ಲೋಬ್ ನಾಮನಿರ್ದೇಶನಗಳನ್ನು ಘೋಷಿಸಿದೆ ಎಂದು ನಿರ್ದೇಶಕ ಎಸ್‌ಎಸ್ ರಾಜಮೌಳಿ ತೀರ್ಪುಗಾರರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News