ಎದೆಯೊಳಗಿದ್ದ ಪ್ರೀತಿ ಎದೆಮೇಲೆ ಬಂದಾಗ.. ‘ಅಪ್ಪು’ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ! ಹೇಗಿದೆ ನೋಡಿ

Raghavendra Rajkumar Tattoo: ಕರುನಾಡು ತನ್ನ ಅಪ್ಪಟ ಚಿನ್ನವನ್ನ ಕಳೆದುಕೊಂಡು ವರುಷಗಳೇ ಉರುಳಿದವು. ಆದರೂ ಅವರ ನೆನಪು ಪ್ರತೀ ಕ್ಷಣ ಅಚ್ಚಳಿಯದೆ ಮರುಕಳಿಸುತ್ತಿದೆ. ಇಲ್ಲೇ ನಮ್ಮೊಂದಿಗೆ ಇದ್ದಾರೆ ಈಗ ಬರುತ್ತಾರೆ ಅಥವಾ ಸಿನಿಮಾ ಶೂಟಿಂಗ್ ಅಂತ ಹೋಗಿದ್ದಾರೆ ಅಂತ ಅನಿಸುತ್ತೆ ವಿನಃ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಅನ್ನೋದು ಮಾತ್ರ ಕನಸಿನಲ್ಲೂ ಊಹಿಸಲು ಸಾಧ್ಯವಾಗುತ್ತಿಲ್ಲ.

Written by - YASHODHA POOJARI | Edited by - Bhavishya Shetty | Last Updated : May 29, 2023, 10:37 AM IST
    • ಅಪ್ಪು… ಈ ಹೆಸರು ಕರುನಾಡಿನ ಆಸ್ತಿ. ಕರುನಾಡಿನ ಹೆಮ್ಮೆಯ ಪುತ್ರ. ನಮ್ಮೆಲ್ಲರ ಮನೆ ಮಗ.
    • ಕರುನಾಡು ತನ್ನ ಅಪ್ಪಟ ಚಿನ್ನವನ್ನ ಕಳೆದುಕೊಂಡು ವರುಷಗಳೇ ಉರುಳಿದವು
    • ರಾಘಣ್ಣ ಅಪ್ಪು ಹೆಸರನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ
ಎದೆಯೊಳಗಿದ್ದ ಪ್ರೀತಿ ಎದೆಮೇಲೆ ಬಂದಾಗ.. ‘ಅಪ್ಪು’ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ! ಹೇಗಿದೆ ನೋಡಿ title=
Raghavendra Rajkumar

Raghavendra Rajkumar Tattoo: ಡಾ. ಪುನೀತ್ ರಾಜಕುಮಾರ್.. ಅಪ್ಪು… ಈ ಹೆಸರು ಕರುನಾಡಿನ ಆಸ್ತಿ. ಕರುನಾಡಿನ ಹೆಮ್ಮೆಯ ಪುತ್ರ. ನಮ್ಮೆಲ್ಲರ ಮನೆ ಮಗ. ಅಪ್ಪು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಮಾಡಿರುವ ಪುಣ್ಯಕಾರ್ಯಗಳ ಪ್ರತೀ ಕ್ಷಣ ನಮ್ಮೊಂದಿಗೆ ಜೀವಂತವಾಗಿರುವಂತೆ ಮಾಡಿ, ಈ ಹೆಸರು ಈ ಭೂಮಿ, ಆಕಾಶ ಇರೋವರೆಗೂ ಶಾಶ್ವತವಾಗಿರುತ್ತೆ ಎಂದೂ ತಪ್ಪಾಗಲ್ಲ.

ಇದನ್ನೂ ಓದಿ: Ashika Ranganath : ನೇರಳೆ ಬಣ್ಣದ ಸೀರೆಯಲ್ಲಿ ಚುಟು ಚುಟು ಬ್ಯೂಟಿ

ಕರುನಾಡು ತನ್ನ ಅಪ್ಪಟ ಚಿನ್ನವನ್ನ ಕಳೆದುಕೊಂಡು ವರುಷಗಳೇ ಉರುಳಿದವು. ಆದರೂ ಅವರ ನೆನಪು ಪ್ರತೀ ಕ್ಷಣ ಅಚ್ಚಳಿಯದೆ ಮರುಕಳಿಸುತ್ತಿದೆ. ಇಲ್ಲೇ ನಮ್ಮೊಂದಿಗೆ ಇದ್ದಾರೆ ಈಗ ಬರುತ್ತಾರೆ ಅಥವಾ ಸಿನಿಮಾ ಶೂಟಿಂಗ್ ಅಂತ ಹೋಗಿದ್ದಾರೆ ಅಂತ ಅನಿಸುತ್ತೆ ವಿನಃ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಅನ್ನೋದು ಮಾತ್ರ ಕನಸಿನಲ್ಲೂ ಊಹಿಸಲು ಸಾಧ್ಯವಾಗುತ್ತಿಲ್ಲ.

ನಮಗೆ ಈ ಪರಿ ನೋವು ಇರುವಾಗ ಮನೆಮಗನನ್ನ ಕಳೆದುಕೊಂಡ ಕುಟುಂಬಕ್ಕೆ ಎಷ್ಟು ನೋವು ಕಾಡುತ್ತಿರಬಹುದು? ನೀವೇ ಲೆಕ್ಕಾ ಹಾಕಿ. ಹೌದು ಅಪ್ಪು ಅಂದ್ರೆ ಡಾ.ರಾಜ್ ಕುಟುಂಬಕ್ಕೆ ಪಂಚಪ್ರಾಣ. ರಾಘಣ್ಣನಿಗೆ ಪುನೀತ್ ಅಂದ್ರೆ ಉಸಿರು. ಇದೀಗ ರಾಘಣ್ಣ ಅಪ್ಪು ಹೆಸರನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಾನು ಇರೋವರೆಗೂ ಶಾಶ್ವತವಾಗಿರಲಿ ಅಂತ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಅಪ್ಪು ಎಂದು ತಮ್ಮನ ಹೆಸರನ್ನ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ರಾಘಣ್ಣನ ನೋವನ್ನ ಕಂಡು ಅಭಿಮಾನಿಗಳು ಮರುಗಿದ್ದಾರೆ. ಅಪ್ಪು ನಿಧನದ ನಂತರ ರಾಘಣ್ಣ ಅಪ್ಪು ನೆನಪಲ್ಲೇ ದಿನ‌ ದೂಡುತ್ತಿದ್ದಾರೆ. ಇಷ್ಟೇ ಅಲ್ಲ ಇದರ ಜೊತೆಗೆ ಪ್ರತಿದಿನ ಅಪ್ಪು ಫೋಟೋ ಇರುವ ಬ್ಯಾಡ್ಜ್ ಅನ್ನು ಕೂಡ ಧರಿಸಿ ನನ್ನೊಂದಿಗೆ ಅಪ್ಪು ಸದಾ ಇದ್ದಾನೆ ಅನ್ನೋ ಭಾವನೆಯಲ್ಲೇ ರಾಘಣ್ಣ ಜೀವಿಸುತ್ತಿದ್ದಾರೆ.

ಇದನ್ನೂ ಓದಿ:Cannes 2023: ಆಫ್ ಶೋಲ್ಡರ್ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಅನುಷ್ಕಾ ಶರ್ಮಾ

ಈಗ ಅಪ್ಪು ಹೆಸರನೇ ಹಚ್ಚೆ ಹಾಕಿಸಿಕೊಂಡ ರಾಘಣ್ಣನ ನೋವು ಅಭಿಮಾನಿಗಳಿಗೆ ಅರ್ಥವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಈ ಫೋಟೋವನ್ನ ಶೇರ್ ಮಾಡಿ ಸಾವಿರಾರು ಕಾಮೆಂಟ್’ಗಳನ್ನ ಹಾಕುತ್ತಿದ್ದಾರೆ. ಅದೇನೇ ಇರಲಿ ಅಪ್ಪು ವೀ ಮಿಸ್ ಯೂ ಎವರ್ ಆಂಡ್ ಎವರ್..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News