ಗ್ರಾ. ಪಂ. ಚುನಾವಣೆ ಪ್ರಚಾರಕ್ಕಿಳಿದ 'ಪುಟ್ಟಗೌರಿ' ಖ್ಯಾತಿ ರಂಜನಿ ರಾಘವನ್..!

'ಪುಟ್ಟಗೌರಿ' ಎಂದೆ ಖ್ಯಾತಿ ಪಡೆದ ನಟಿ ರಂಜನಿ ರಾಘವನ್ ಅವರು ಈ ಪಂಚಾಯಿತಿ ಚುನಾವಣೆಯಲ್ಲಿ  ಮತಯಾಚನೆ

Last Updated : Dec 18, 2020, 09:27 PM IST
  • ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಗಳಿಗೆ ಸಿನಿ ರಂಗದವರು ಬಂದು ಅಭ್ಯರ್ಥಿ ಪರ ಪ್ರಚಾರಕ್ಕೆ ಬರುವುದನ್ನ ನೋಡಿರುತ್ತೀರಿ. ಆದ್ರೆ, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಟಾರ್ ನಟ-ನಟಿಯರು ಬರುವುದನ್ನ ಕೇಳಿದ್ದೀರಾ?
  • 'ಪುಟ್ಟಗೌರಿ' ಎಂದೆ ಖ್ಯಾತಿ ಪಡೆದ ನಟಿ ರಂಜನಿ ರಾಘವನ್ ಅವರು ಈ ಪಂಚಾಯಿತಿ ಚುನಾವಣೆಯಲ್ಲಿ ಮತಯಾಚನೆ
  • ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮಪಂಚಾಯಿತಿಯಲ್ಲಿ ನಾಳೆ ಪ್ರಚಾರ ಕಾರ್ಯ
ಗ್ರಾ. ಪಂ. ಚುನಾವಣೆ ಪ್ರಚಾರಕ್ಕಿಳಿದ 'ಪುಟ್ಟಗೌರಿ' ಖ್ಯಾತಿ ರಂಜನಿ ರಾಘವನ್..! title=

ಬೆಂಗಳೂರು: ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಗಳಿಗೆ ಸಿನಿ ರಂಗದವರು ಬಂದು ಅಭ್ಯರ್ಥಿ ಪರ ಪ್ರಚಾರಕ್ಕೆ  ಬರುವುದನ್ನ ನೋಡಿರುತ್ತೀರಿ. ಆದ್ರೆ, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಟಾರ್ ನಟ-ನಟಿಯರು  ಬರುವುದನ್ನ ಕೇಳಿದ್ದೀರಾ? ಹೌದು, ಕರ್ನಾಟಕದಲ್ಲಿ 'ಪುಟ್ಟಗೌರಿ' ಎಂದೆ ಖ್ಯಾತಿ ಪಡೆದ ನಟಿ ರಂಜನಿ ರಾಘವನ್ ಅವರು ಈ ಪಂಚಾಯಿತಿ ಚುನಾವಣೆಯಲ್ಲಿ  ಮತಯಾಚನೆ ಮಾಡಲಿದ್ದಾರಂತೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮಪಂಚಾಯಿತಿಯಲ್ಲಿ ನಾಳೆ ಪ್ರಚಾರ ಕಾರ್ಯ ನಡೆಯಲಿದೆ. ವಿಜಯಲಕ್ಷ್ಮಿ ಬಸವರಾಜ ಹೂಗಾರ, ಯಂಕಪ್ಪ ನುಚ್ಚಿನ ಹಾಗೂ ಬಿ ಎನ್ ಮೇತ್ರಿ ಪರ ರಂಜನಿ ರಾಘವನ್(Ranjani Raghavan) ಅವರು ಪ್ರಚಾರ ನಡೆಸಲಿದ್ದಾರೆ. ಒಟ್ಟು 19 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು ಮೂವರು ಅಭ್ಯರ್ಥಿಗಳ ಪರವಾಗಿ ರಂಜನಿ ನಾಳೆ ಪ್ರಚಾರ ನಡೆಸಲಿದ್ದಾರೆ.

ಗ್ರಾ.ಪಂ.ಚುನಾವಣೆ: 'ರಾಜ್ಯ ರಾಜಕೀಯ ನಾಯಕ'ರ ನಿದ್ದೆಗೆಡಿಸಿದ ಈ ಮಹತ್ವದ ಆದೇಶ..!

'ಗ್ರಾಮದ ಪರವಾಗಿ ದುಡಿಯಲು ನಿಂತವರಿಗೆ ಬೆಂಬಲ ನೀಡಲು ಬಾಗಲಕೋಟೆಗೆ ಬರುತ್ತಿದ್ದೇನೆ, ಎಲ್ಲರೂ ಸಹಕರಿಸಿ' ಎಂದು ರಂಜನಿ ರಾಘವನ್ ಮನವಿ ಮಾಡಿಕೊಂಡಿದ್ದಾರೆ. ಕಿರುತೆರೆ ಕಲಾವಿದರು ಈ ಪ್ರಚಾರ ಕಾರ್ಯದಲ್ಲಿ ಭಾಗಿಯಾಗೋದು ಅಪರೂಪವಾಗಿತ್ತು. ಗ್ರಾಮ ಪಂಚಾಯಿತಿ ಚುನಾವಣೆಗೆ ಸೆಲೆಬ್ರಿಟಿಗಳನ್ನು ಕರೆಸಿ ಪ್ರಚಾರ ಮಾಡೋದು ಕೂಡ ವಿರಳವಾಗಿದೆ. ಹೀಗಿದ್ದಾಗ ರಂಜನಿ ರಾಘವನ್ ಅವರ ಈ ನಡೆ ಅಚ್ಚರಿ ಮೂಡಿಸಿದೆ.

ಶಾಲಾ ಪುನಾರಂಭ ವಿಚಾರ, ನಾಳೆ ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ಮಹತ್ವದ ಸಭೆ

Trending News