Pushpa 2: ಇಂದಿನಿಂದ ಅಲ್ಲು ಅರ್ಜುನ್‌ ಪುಷ್ಪ 2 ಜಾತ್ರೆಯ ಸಡಗರ! ಹೊಸ ಅಪ್‌ಡೇಟ್‌ ಏನು?

Pushpa 2 Jaathara: ಟಾಲಿವುಡ್‌ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2: ದಿ ರೂಲ್’ ಜಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇಂದು ಈ ಚಿತ್ರದ ಹೊಸ ಅಪ್‌ಡೇಟ್‌ಗಾಗಿ ಫ್ಯಾನ್ಸ್‌ಗಾಘಿ ಕಾಯುತ್ತಿದ್ದಾರೆ, ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 2, 2024, 11:16 AM IST
  • ಇಂದಿನಿಂದ ಅಂದರೆ ಏಪ್ರಿಲ್‌ 2 ರಿಂದ ಪುಷ್ಪ ಮಾಸ್​ ಜಾತ್ರೆ ಆರಂಭವಾಗಲಿದೆ ಎಂದು ಪೋಸ್ಟರ್ ರಿಲೀಸ್‌ ಮಾಡುವುದರ ಮೂಲಕ ನಿನ್ನೆ ಏಪ್ರಿಲ್‌ 1 ರಂದು ಚಿತ್ರತಂಡ ತಿಳಿಸಿದೆ.
  • ಇನ್ನೂ ಈ ಪೋಸ್ಟರ್ ನೋಡಿದ ನೆಟ್ಟಿಗರು, ಇದು ಪುಷ್ಪ 2 ಟೀಸರ್ ಬಿಡುಗಡೆ ದಿನಾಂಕ ಅನೌನ್ಸ್ ಮಾಡೋದು ಫಿಕ್ಸ್ ಎನ್ನುತ್ತಿದ್ದಾರೆ.
  • ಸಾಮಾಜಿಕ ಜಾಲತಾಣದಲ್ಲಿ ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ದಿನ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ವೈರಲ್ ಆಗಿತ್ತು.
Pushpa 2: ಇಂದಿನಿಂದ ಅಲ್ಲು ಅರ್ಜುನ್‌ ಪುಷ್ಪ 2 ಜಾತ್ರೆಯ ಸಡಗರ! ಹೊಸ ಅಪ್‌ಡೇಟ್‌ ಏನು? title=

Pushpa 2 Jaathara Begins From Today: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಹುನಿರೀಕ್ಷಿತ ‘ಪುಷ್ಪ 2: ದಿ ರೂಲ್’ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರತಂಡ ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ಇಂದಿನಿಂದ ಅಂದರೆ ಏಪ್ರಿಲ್‌ 2 ರಿಂದ ಪುಷ್ಪ ಮಾಸ್​ ಜಾತ್ರೆ ಆರಂಭವಾಗಲಿದೆ  ಎಂದು ಪೋಸ್ಟರ್ ರಿಲೀಸ್‌ ಮಾಡುವುದರ ಮೂಲಕ ನಿನ್ನೆ ಏಪ್ರಿಲ್‌ 1 ರಂದು ಚಿತ್ರತಂಡ ತಿಳಿಸಿದೆ. ಇದಕ್ಕಾಗಿ ನಿರ್ದೇಶಕ ಸುಕುಮಾರ್ ಅದ್ಧೂರಿಯಾಗಿ ತಯಾರಿ ಮಾಡಿಕೊಂಡಿದ್ದಾರೆ.

ಪುಷ್ಪ 2 ಸಿನಿಮಾತಂಡ ಮಾಸ್​ ಜಾತ್ರೆಯ ವಿಚಾರವನ್ನು ಪೋಸ್ಟರ್ ಬಿಡುಗಡೆಯ ಮೂಲಕ ರಿವೀಲ್‌ ಆಗಿದೆ. ಈ ಪೋಸ್ಟರ್‌ನಲ್ಲಿ "ನಾಳೆ ಪುಷ್ಪ ಮಾಸ ಜಾತ್ರೆ ಆರಂಭವಾಗಲಿದೆ. ನಾಳೆ (ಏಪ್ರಿಲ್ 2) ಅತ್ಯಾಕರ್ಷಕ ಘೋಷಣೆ ಬರಲಿದೆ" ಎಂದು ಮೈತ್ರಿ ಮೂವೀ ಮೇಕರ್ಸ್ ಸೋಶಿಯಲ್‌ ಮಿಡಿಯಾ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಪೋಸ್ಟರ್ ನೋಡಿದ ನೆಟ್ಟಿಗರು, ಇದು ಪುಷ್ಪ 2 ಟೀಸರ್ ಬಿಡುಗಡೆ ದಿನಾಂಕ ಅನೌನ್ಸ್ ಮಾಡೋದು ಫಿಕ್ಸ್ ಎನ್ನುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Pushpa (@pushpamovie)

ಇದನ್ನೂ ಓದಿ: Prabhas: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ಗೆ ಬಂದ ಮದುವೆ ಪ್ರಪೋಸಲ್‌ಗಳು ಎಷ್ಟು ಗೊತ್ತೇ?

‘ಪುಷ್ಪ 2: ದಿ ರೂಲ್’ ಸಿನಿಮಾ ಆಗಸ್ಟ್ 15 ರಂದು ವಿಶ್ವದಾದ್ಯಂತೆ ತರೆಗೆ ಅಪ್ಪಳಿಸಲಿದೆ ಎಂಬುದು ಇನ್ನೊಮ್ಮೆ ಖಚಿತ ಪಡಿಸಿದೆ. ಇದಕ್ಕೂ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ದಿನ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ  ವೈರಲ್ ಆಗಿತ್ತು. ಇದರ ನಿಟ್ಟಿನಲ್ಲಿ ಚಿತ್ರತಂಡ ಇತ್ತೀಚಗೆ ಸೂಚನೆಯೊಂದು ನೀಡಿದ್ದು, ಈ ಸಿನಿಮಾದ ಟೀಸರ್‌ ಫೈನಲ್ ಕಟ್ ಸಿದ್ದವಾಗಿದೆ. ಆದರಿಂದ ಇವತ್ತು ಈ ಚಿತ್ರದ ಟೀಸರ್‌ ರಿಲೀಟ್‌ ಡೇಟ್‌ ಅನ್ನು ಪುಷ್ಪ ಟೀ ಅನೌನ್ಸ್‌ ಮಾಡಲಿದೆ  ಎನ್ನಲಾಗ್ತಿದೆ.

ಪುಷ್ಪ 2 ಸಿನಿಮಾಗಾಗಿ ಫ್ಯಾನ್ಸ್‌ ಎದುರು ನೋಡ್ತಾಯಿದ್ದು, ಇದರಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಜಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಕ ದೇವಿ ಶ್ರೀಪ್ರಸಾದ್  ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

Trending News