ಸಖತ್ ಸೌಂಡ್ ಮಾಡುತ್ತಿರುವ ಪುಷ್ಪಾ-2 ಸಿನಿಮಾವನ್ನು ಈ ಐದು ಕಾರಣಗಳಿಗಾಗಿ ನೋಡಲೇಬೇಕು..!

Pushpa 2: ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ-2 ದಿ ರೂಲ್’ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಬಾಕ್ಸ್ ಅಫೀಸ್ ಅನ್ನು ಹರಿದು ಮುಕ್ಕುತ್ತಿದೆ. ಸಿನಿ ಪ್ರಿಯರನ್ನು ಶರವೇಗದಲ್ಲಿ ಸೆಳೆಯುತ್ತಿದೆ. ಇದಪ್ಪ ಕ್ರೇಜು ಅಂದ್ರೆ…

Written by - Yashaswini V | Last Updated : Dec 5, 2024, 11:13 AM IST
  • ‘ಪುಷ್ಪಾ-2’ ಬಿಡುಗಡೆ ಆಗುವುದಕ್ಕೂ ಮೊದಲೇ ನೂರಾರು ಕೋಟಿ ರೂಪಾಯಿಗಳ ಮುಂಗಡ ಬುಕಿಂಗ್ ಆಗಿತ್ತು.
  • ಮೊದಲ ದಿನವಾದ ಇವತ್ತು ಇನ್ನೂ ನೂರಾರು ಕೋಟಿ ರೂಪಾಯಿಗಳನ್ನು ‘ಕೊಳ್ಳೆ’ ಹೊಡೆದಿದೆ.
  • ‘ಪುಷ್ಪಾ-2’ ಸಿನಿಮಾವನ್ನು ಈ ಐದು ಕಾರಣಗಳಿಗೆ ನೋಡಲೇಬೇಕು ಎನ್ನುತ್ತಾರೆ ವಿಮರ್ಶಕರು ಮತ್ತು ಸಿನಿ ತಜ್ಞರು.
ಸಖತ್ ಸೌಂಡ್ ಮಾಡುತ್ತಿರುವ ಪುಷ್ಪಾ-2 ಸಿನಿಮಾವನ್ನು ಈ  ಐದು ಕಾರಣಗಳಿಗಾಗಿ ನೋಡಲೇಬೇಕು..!  title=

Pushpa 2 The Rule: ಭಾರೀ ನಿರೀಕ್ಷೆ ಹುಟ್ಟಿಸಿದ್ದ ‘ಪುಷ್ಪಾ-2’ ಕಡೆಗೂ ಇಂದು ತೆರೆಕಂಡಿದೆ. Sorry, ತೆರೆ ಕಂಡಿಲ್ಲ; ತೆರೆಗೆ ಅಪ್ಪಳಿಸಿ ಆವರಿಸಿಕೊಂಡಿದೆ. ಬಿಡುಗಡೆ ಆಗುವುದಕ್ಕೂ ಮೊದಲೇ ನೂರಾರು ಕೋಟಿ ರೂಪಾಯಿಗಳ ಮುಂಗಡ ಬುಕಿಂಗ್ ಆಗಿತ್ತು. ಮೊದಲ ದಿನವಾದ ಇವತ್ತು ಇನ್ನೂ ನೂರಾರು ಕೋಟಿ ರೂಪಾಯಿಗಳನ್ನು ‘ಕೊಳ್ಳೆ’ ಹೊಡೆದಿದೆ. ಈ ಪರಿ ಕ್ರೇಜು ಕ್ರಿಯೇಟ್ ಮಾಡಿರುವ ‘ಪುಷ್ಪಾ-2’ ಸಿನಿಮಾದಲ್ಲಿ ಅಂಥದ್ದೇನಿದೆ?

ಯಾವುದೇ ಒಂದು ಸಿನಿಮಾ ನೋಡೋಕೆ ಹಲವಾರು ಕಾರಣ ಇರುತ್ತವೆ. ಆದರೆ ‘ಪುಷ್ಪಾ-2’ ಸಿನಿಮಾವನ್ನು ಈ ಐದು ಕಾರಣಗಳಿಗೆ ನೋಡಲೇಬೇಕು ಎನ್ನುತ್ತಾರೆ ವಿಮರ್ಶಕರು ಮತ್ತು ಸಿನಿ ತಜ್ಞರು. 

1. ಅಲ್ಲು ಅರ್ಜುನ್ ಲುಕ್ ಅಂಡ್ ಅಪಿಯರೆನ್ಸ್!
‘ಪುಷ್ಪಾ-2’ ಸಿನಿಮಾದ ನಾಯಕ ಅಲ್ಲು ಅರ್ಜುನ್ ಅವರ ಡಿಫರೆಂಟ್ ಡಿಫರೆಂಟ್ ಲುಕ್ ಸಾಕು; ನಿಮ್ಮ ಪೈಸಾ ವಸೂಲ್ ಎನ್ನುವಂತಿದೆ. ಜೊತೆಗೆ ಪ್ರತಿ ದೃಶ್ಯದಲ್ಲೂ, ಪ್ರತಿ ಡೈಲಾಗ್ ಡಿಲೆವರಿಯಲ್ಲೂ ಅಲ್ಲು ಅರ್ಜುನ್ ತೋರಿರುವ ಡಿಫರೆಂಟ್ ಅಪಿಯರೆನ್ಸ್ ಅನ್ನು ನೀವು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. ‘ಪುಷ್ಪಾ-1’ರಲ್ಲೇ ವಿಶಿಷ್ಟವಾದ ಮ್ಯಾನರಿಸಂನಿಂದ ಮನಸೂರೆಗೊಂಡಿದ್ದ ಅಲ್ಲು ‘ಪುಷ್ಪಾ-2’ ಸಿನಿಮಾದಲ್ಲೂ ಮುದಗೊಳಿಸುತ್ತಾರೆ. ಅಲ್ಲು ಅರ್ಜುನ್ ಫ್ಯಾನ್ ಅಲ್ಲದಿದ್ದರೂ ಈ ಸಿನಿಮಾದಲ್ಲಿ ನೀವು ಥ್ರಿಲ್ ಆಗುವ ‘ಅಪಾಯ’ ತಂದೊಡ್ಡಲಿದೆ. 

ಇದನ್ನೂ ಓದಿ- ರಶ್ಮಿಕಾ ಮಂದಣ್ಣಗೆ ‘ಇವರು’ ಸಿಕ್ಕರೆ ಮದುವೆ ಆಗ್ತಾರಂತೆ!: ವಿಜಯ್ ದೇವರಕೊಂಡ ಜತೆ ಲವ್ ಗಾಸಿಪ್ ನಡುವೆ ಶಾಕಿಂಗ್ ಹೇಳಿಕೆ ಕೊಟ್ಟ ನ್ಯಾಷನಲ್ ಕ್ರಷ್!

2.  ಸುಕುಮಾರ್ ನಿರ್ದೇಶನ:
ಒಂದು ಮಾಮೂಲಿ ಕತೆಯನ್ನು ಸಿನಿಮಾಕ್ಕೆ ಹೇಗೆ ಬಗ್ಗಿಸಬೇಕು-ಒಗ್ಗಿಸಬೇಕು ಎನ್ನುವುದನ್ನು ‘ಪುಷ್ಪಾ-1’ರಲ್ಲೇ ತೋರಿಸಿಕೊಟ್ಟಿದ್ದ ನಿರ್ದೇಶಕ ಸುಕುಮಾರ್ ನಿಜವಾಗಿಯೂ ‘ಪುಷ್ಪಾ-2’  ಸಿನಿಮಾದ ಹೀರೋ. ಚಿತ್ರದ ಪ್ರತಿ ಫ್ರೆಮಿನಲ್ಲೂ ಸುಕುಮಾರ್ ಕೈಚಳಕ ಕಾಣಸಿಗುತ್ತದೆ. ಬಿಗಿಯಾದ ನಿರೂಪಣೆ, ಅವಶ್ಯಕವಾದ ಅದ್ದೂರಿತನ, ಸಾಂಗುಗಳಿಗೆ ಬಂದರೆ ಸಿರಿತನಗಳೆಲ್ಲದರ ಕ್ರೆಡಿಟ್ಟು ಸುಕುಮಾರ್ ಅವರಿಗೆ ಸಲ್ಲಲೇಬೇಕು. ಇವತ್ತೇನಾದ್ರೂ ‘ಪುಷ್ಪಾ-2’ ಇಷ್ಟೊಂದು ಕ್ರೇಜು ಕ್ರಿಯೇಟ್ ಮಾಡಿದೆ ಎಂದ್ರೆ ಅದಕ್ಕೆ ಕಾರಣ ನಿರ್ದೇಶಕ ಸುಕುಮಾರ್. 

3. ರಶ್ಮಿಕಾ ಮಂದಣ್ಣರ ನೋಟ, ಶ್ರೀಲೀಲಾರ ಸೊಂಟ!
‘ಪುಷ್ಪಾ-2’ ಸಿನಿಮಾದ ‘ಡಾನ್’ ಅಲ್ಲು ಅರ್ಜುನ್ ನೋಟ ಒಂಥರಾ ವೈಲ್ಡ್ ಅಪಿಯರೆನ್ಸ್ ಆದರೆ ನಾಯಕಿ ರಶ್ಮಿಕಾ ಮಂದಣ್ಣ ಅವರ ಲುಕ್ ಕಣ್ಣೋಟದಲ್ಲೇ ಕೊಲ್ಲುವ, ರಪ್ಪೆ ಮಿಟುಕಿಸಿ ಮಿಂಚುಕ್ಕಿಸುವ ಬೋಲ್ಡ್ ಬ್ಯಾಲೆನ್ಸ್. ತಾನು ಸುಂಸುಮ್ನೆ ನ್ಯಾಷನಲ್ ಕ್ರಷ್ ಅಲ್ಲ ಅಂತಾ ‘ಪುಷ್ಪಾ-2’ನಲ್ಲೂ ನಿರೂಪಿಸಿದ್ದಾರೆ ಬ್ಯೂಟಿ ಅಂಡ್ ಕ್ಯೂಟಿ ರಶ್ಮಿಕಾ. ಇವರಲ್ಲದೆ ‘ಕಿಸಕ್’ ಐಟಂ ಸಾಂಗಿಗೆ ಎದೆ ದಸಕ್ ಎನ್ನುವ ರೀತಿಯಲ್ಲಿ ಸೊಂಟ ಬಳುಕಿಸಿದ್ದಾರೆ ಇನ್ನೊಬ್ಬ ಕನ್ನಡತಿ ಶ್ರೀಲೀಲಾ. ಇವು ಕೂಡ ‘ಪುಷ್ಪಾ-2’ ಸಿನಿಮಾ ನೋಡೋಕೆ ಇರೋ ಕಾರಣಗಳು.

4. ಪೊಲೀಸ್ ಸೂಪರಿಂಟೆಂಡೆಂಟ್ ಪಾತ್ರದಲ್ಲಿ ಫಹಾದ್ ಫಾಸಿಲ್ ಅವರದು ರೋಮಾಂಚನಕಾರಿ ಅಭಿನಯ. ಬೋಳು ತಲೆಯ ಫಾಸಿಲ್ ಅಭಿನಯವನ್ನು ನೋಡಿಯೇ ಆನಾಂದಿಸಬೇಕು. ಚಿತ್ರದ ಕೆಲವು ದೃಶ್ಯಗಳಲ್ಲಿ ಅಲ್ಲು ಅರ್ಜುನ್ ಮತ್ತು ಫಾಹದ್ ಫಾಸಿಲ್ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಸಿನಿಮಾ ನೋಡಿದ ಮೇಲೆ ಹೌದು, ಚಿತ್ರ ನೋಡಲು ಇದು ಓದು ಕಾರಣ ಎಂದು ಅನಿಸದಿರದು ಎನ್ನುತ್ತಾರೆ ವಿಮರ್ಶಕರು. 

ಇದನ್ನೂ ಓದಿ- ʻಪುಷ್ಪ-2ʼ ನೋಡಿದ್ಮೇಲೆ ಪಾರ್ಟ್ 3 ಯಾವಾಗ ಸ್ವಾಮಿ ಅಂತೀರಾ. .? ಡೈರೆಕ್ಟರ್ ಸುಕುಮಾರ್ ಮತ್ತು ಅಲ್ಲು ಅರ್ಜುನ್‌ಗೆ ಬಿಗ್ ಸಲ್ಯೂಟ್

5. ಕಾಸ್ಟ್ಯೂಮ್
ನಿರ್ದೇಶಕ ಸುಕುಮಾರ್ ಅವರಿಗೆ ಇಂಥ ಕಾಸ್ಟೂಮ್ಸ್ ಜನರಿಗೆ ಮೆಚ್ಚುಗೆ ಆಗುತ್ತೆ ಅಂತಾ ಅದ್ಹೇಗೆ ಅನಿಸಿತೋ ಗೊತ್ತಿಲ್ಲ. ನಿಜಕ್ಕೂ ಚಿತ್ರದ ಪ್ರತಿಯೊಬ್ಬರ, ಪ್ರತಿ ದೃಶ್ಯದ ಕಾಸ್ಟೂಮ್ಸ್ ನಲ್ಲಿ ಏನೋ ಒಂದು ರೀತಿಯ ಆಕರ್ಷಣೆ ಇದೆ. ಕಾಸ್ಟೂಮ್ಸ್ ಗಳಿಂದಲೂ ಸಿನಿಮಾಕ್ಕೆ ವೀಕ್ಷಕರನ್ನು ಸೆಳೆಯಬಹುದು ಎನ್ನುವುದನ್ನು ಸುಕುಮಾರ್ ತೋರಿಸಿಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಅಂದಹಾಗೆ  ‘ಪುಷ್ಪಾ-2 ದಿ ರೂಲ್’ ಸಿನಿಮಾದಲ್ಲಿ ನ್ಯೂನ್ಯತೆಗಳು ಇಲ್ಲವೇ ಇಲ್ಲ ಅಂತಾ ಅಲ್ಲ. ಎಕ್ಸ್ ಪೋಸು, ಕ್ರೈಂ, ಅಬ್ಬರ ಅತಿಯಾಯಿತು ಅನಿಸುತ್ತದೆ. ಅಪರಾಧಿಕೃತ್ಯದ ವೈಭವೀಕರಣ ಎನಿಸುತ್ತದೆ. ಇನ್ನೂ ಅದ್ಭುತವಾಗಿ ಮಾಡಬಹುದಿತ್ತು ಎಂದೂ ಹೇಳಬಹುದು. ಅದೆಲ್ಲವನ್ನು ಮೀರಿ ಒಮ್ಮೆ ನೋಡಬಹುದು ಎನ್ನುವುದು ವಿಮರ್ಶಕರು ಮತ್ತು ಸಿನಿ ತಜ್ಞರ ಅಭಿಪ್ರಾಯವಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News