pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್ ಸೇರಿಸಿಕೊಂಡಿದ್ದ ಸಿನಿಮಾ ಇದು. ರಿಲೀಸ್ ಆಗೋಕೆ ಮುನ್ನವೇ ಈ ರೇಂಜ್‌ಗೆ ಸಿನಿಮಾ ಸೌಂಡ್ ಮಾಡಿತ್ತು ಅಂದ್ರೆ ಇನ್ನೂ, ರಿಲೀಸ್ ಆದ್ಮೇಲೆ ಕೇಳಬೇಕಾ? ಪುಷ್ಪ 2 ಸಿನಿಮಾ ಎಲ್ಲಾ ಇತಿಹಾಸದ ದಾಖಲೆಗಳನ್ನು ಪುಡಿ ಪುಡಿ ಮಾಡಿ ಮುನ್ನುಗ್ಗುತ್ತಿದೆ.
ಅಲ್ಲು ಅರ್ಜುನ್ ಹಾಗೂ ನ್ಯಾಶನಲ್ ಕ್ರಶ್ ಮಂದಣ್ಣ ಅವರ ಪುಷ್ಪ ಸಿನಿಮಾದ ಸೀಕ್ವೆಲ್ ಆಗಿರುವ ಪಷ್ಪ-2 ದಿ ಪೂಲ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೊದಲನೆ ದಿನವೇ ಈ ಸಿನಿಮಾ ಸಿಕ್ಕಾಪಟ್ಟೆ ರೆಸ್ಪಾನ್ಸ್ ಪಡೆದುಕೊಂಡಿದ್ದು, ಗೆಲುವಿನತ್ತ ಮುನ್ನುಗ್ಗುತ್ತಿದೆ. ಇನ್ನೂ, ರಿಲೀಸ್‌ಗೂ ಮುನ್ನವೇ 1000 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದ್ದ ಸಿನಿಮಾ, ಇದೀಗ ಮೊದಲ ದಿನವೇ ದಾಕಾಲೆಯ ಕಲೆಕ್ಷನ್ ಮಾಡಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸವನ್ನು ಸೃಷ್ಟಿಸಿದೆ.
12500 ಥಿಯೇಟರ್‌ಗಳಲ್ಲಿ ಪುಷ್ಪ 2 ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಈ ಸಿನಿಮಾ 294 ಕೋಟಿ ಬಾಚಿಕೊಂಡಿದೆ. ಇದೇ ಮೊದಲ ಭಾರಿಗೆ ಇಷ್ಟು ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಇತಿಹಾಸ ಬರೆದಿದ್ದು, 'ಮೈತ್ರಿ ಮೂವಿ ಮೇಕರ್ಸ್' ತನ್ನ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಘೊಷಿಸಿಕೊಂಡಿದೆ. ಈ ಮುಂಚೆ ರಿಲೀಸ್ ಆಗಿದ್ದ ಪುಷ್ಪ ಸಿನಿಮಾ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಾಲೆ ಸೃಷ್ಟಿಸುವ ಮೂಲಕ ಫುಲ್ ಸೌಂಡ್ ಮಾಡಿತ್ತು. ಇದೀಗ ಪುಷ್ಪ 2 ದಿ ರೂಲ್ ಸಿನಿಮಾ ಕೂಡ ಇದಕ್ಕೂ ಮೀರಿದ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ್ದ ಸಿನಿಮಾಗಲ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ.
ಮೊದಲನೆ ದಿನವೇ ಅಲ್ಲು ನಟನೆಯ ಪುಷ್ಪ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಪುಷ್ಪ ಸಿನಿಮಾ ಇಂಡಸ್ಟ್ರಿಯನ್ನೆ ಗಢ ಗಢ ನಡುಗಿಸಲಿದೆ. ಸಿನಿಮಾ ವಿಶ್ಲೇಶಕರು ಪುಷ್ಪ ಸಿನಿಮಾ ದುಪ್ಪಟ್ಟು ಹಣವನ್ನು ತನ್ನ ಬಾಕ್ಸ್ ಆಫಿಸ್ ಕಲೆಕ್ಷನ್‌ಗೆ ಸೇರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, ಅಭಿಮಾನಿಗಳಂತೂ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.
THE BIGGEST INDIAN FILM creates HISTORY at the box office ❤️🔥#Pushpa2TheRule grosses 294 CRORES worldwide on Day 1 making it THE HIGHEST OPENING DAY in Indian Cinema 💥💥💥#Pushpa2BiggestIndianOpener
RULING IN CINEMASBook your tickets now!
🎟️ https://t.co/tHogUVEOs1… pic.twitter.com/uDhv2jq8dc— Mythri Movie Makers (@MythriOfficial) December 6, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.