ಹುಬ್ಬಳ್ಳಿ: ಮುಂದಿನ ಜನ್ಮ ಅಂತಿದ್ರೆ ಅದು ಹುಬ್ಬಳ್ಳಿಯಲ್ಲೇ ಆಗಲಿ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.
ಬಹುನಿರೀಕ್ಷಿತ ನಟಸಾರ್ವಭೌಮ ಚಿತ್ರದ ಅದ್ಧೂರಿ ಆಡಿಯೋ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು. ನಟ ಹುಬ್ಬಳ್ಳಿ ಜನರ ಪ್ರೀತಿ ಹಾಗೂ ಸಾವಜೀ ಹೋಟೆಲ್ ಮಾಂಸದೂಟ ಮರೆಯಲು ಸಾಧ್ಯವೇ ಇಲ್ಲ. ನಮ್ಮೆಲ್ಲರ ಪ್ರೀತಿ, ಆಶೀರ್ವಾದ ನಮ್ಮ ಮೇಲಿದೆ. ಮುಂದಿನ ಜನ್ಮ ಅಂತಿದ್ದರೆ ಅದು ಹುಬ್ಬಳ್ಳಿಯಲ್ಲೇ ಆಗಲಿ ಬಿಡಿ" ಎಂದು ಹೇಳಿದರು. ರಾಜ್ ಕುಮಾರ್, ರಚಿತಾ ರಾಮ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ದೊಡ್ಡಣ್ಣ ಚಿತ್ರತಂಡದ ಜೊತೆಗೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪುನೀತ್ ರಾಜ್ ಕುಮಾರ್, " ಹುಬ್ಬಳ್ಳಿಗೆ ಬಂದ ಕೂಡಲೇ ಸಿದ್ದಾರೂಢರ ಮಠಕ್ಕೆ ತೆರಳಿ ದರ್ಶನ ಪಡೆದೆ. ಈ ನಗರಕ್ಕೆ ಆಗಾಗ ಬರುತ್ತಲೇ ಇರುತ್ತೇನೆ. ದೊಡ್ಮನೆ ಹುಡುಗ ಚಿತ್ರದ ದೃಶ್ಯಗಳನ್ನು ನಾಲ್ಕು ದಿನಗಳ ಕಾಲ ಇಲ್ಲೇ ಮಾಡಿದ್ದೆವು. ಹುಬ್ಬಳ್ಳಿ ಜನರ ಪ್ರೀತಿ ಹಾಗೂ ಸಾವಜೀ ಹೋಟೆಲ್ ಮಾಂಸದೂಟ ಮರೆಯಲು ಸಾಧ್ಯವೇ ಇಲ್ಲ. ನಮ್ಮೆಲ್ಲರ ಪ್ರೀತಿ, ಆಶೀರ್ವಾದ ನಮ್ಮ ಮೇಲಿದೆ. ಮುಂದಿನ ಜನ್ಮ ಅಂತಿದ್ದರೆ ಅದು ಹುಬ್ಬಳ್ಳಿಯಲ್ಲೇ ಆಗಲಿ ಬಿಡಿ" ಎಂದು ಹೇಳಿದರು.
ಗಾಯಕ ವಿಜಯ್ ಪ್ರಕಾಶ್, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅನುಪಸ್ಥಿತಿಯಲ್ಲಿಯೇ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಿತು. ಐಟಿ ಶೋಧ ಮುಂದುವರೆದಿದ್ದರಿಂದ ರಾಕ್‌ಲೈನ್ ವೆಂಕಟೇಶ್, ಹುಬ್ಬಳ್ಳಿಗೆ ಆಗಮಿಸಲು ಸಾಧ್ಯವಾಗಲಿಲ್ಲ.
ಇನ್ನು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಯಶ್ ಆಗಮಿಸಬೇಕಿತ್ತು. ಆದರೆ, ಐಟಿ ಶೋಧ ಮುಂದುವರೆದಿದ್ದರಿಂದ ಅವರೂ ಸಹ ಬರಲು ಸಾಧ್ಯವಾಗಲಿಲ್ಲ. ''ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಇಂದು ವಿಮಾನ ಕೈತಪ್ಪಿದ ಕಾರಣ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.'' ಎಂದು ಫೇಸ್ ಬುಕ್ ನಲ್ಲಿ ಯಶ್ ತಿಳಿಸಿದ್ದಾರೆ.