ಪವರ್‌ ಸ್ಟಾರ್‌ ಪುನೀತ್‌ ಅಭಿನಯದ ಕೊನೆಯ ಸಿನಿಮಾಗೆ ಕೋಟಿ ಕೋಟಿ ಆಫರ್..!‌

'ಜೇಮ್ಸ್‌' ಪುನೀತ್‌ ಅಭಿನಯದ ಕೊನೆಯ ಸಿನಿಮಾ. ಹೀಗೆ ಅಪ್ಪು ಕೊನೆಯ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕೋಟಿ ಕೋಟಿ ಆಫರ್‌ ಬರುತ್ತಿದ್ದರೂ ಕೂಡ 'ಜೇಮ್ಸ್‌' ನಿರ್ಮಾಪಕರು ಇದಕ್ಕೆ ಒಪ್ಪುತ್ತಿಲ್ಲ. 

Written by - Malathesha M | Edited by - Ranjitha R K | Last Updated : Mar 8, 2022, 12:45 PM IST
  • ಅಪ್ಪು ಹೆಸರಲ್ಲೇ ಒಂದು ಪವರ್‌ ಇದೆ.
  • ಅಪ್ಪು ಕೊನೆಯ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
  • ಮಾರ್ಚ್ 17ಕ್ಕೆ 'ಜೇಮ್ಸ್' ರಿಲೀಸ್ ಆಗುತ್ತಿದೆ.
ಪವರ್‌ ಸ್ಟಾರ್‌ ಪುನೀತ್‌ ಅಭಿನಯದ ಕೊನೆಯ ಸಿನಿಮಾಗೆ ಕೋಟಿ ಕೋಟಿ ಆಫರ್..!‌ title=
ಮಾರ್ಚ್ 17ಕ್ಕೆ 'ಜೇಮ್ಸ್' ರಿಲೀಸ್ ಆಗುತ್ತಿದೆ. (file photo)

ಬೆಂಗಳೂರು : ಅಪ್ಪು ಹೆಸರಲ್ಲೇ ಒಂದು ಪವರ್‌ ಇದೆ (Puneeth Rajkumar).  ಅಪ್ಪು ಅಂದ್ರೆನೇ ಒಂದು ಪವರ್‌.  ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌, ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಇಂದು ನಮ್ಮೊಂದಿಗಿಲ್ಲ. ಈ ನೋವು ಕೋಟಿ ಕೋಟಿ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಈಗ ನಮ್ಮೆದುರು ಉಳಿದಿರುವುದು ಪುನೀತ್‌ ಅವರು ಬಿಟ್ಟು ಹೋಗಿರುವ ಅವರ ಕೊನೆಯ ಸಿನಿಮಾ ಮಾತ್ರ (Puneeth Rajkumar Last film).

'ಜೇಮ್ಸ್‌'  (James film) ಪುನೀತ್‌ ಅಭಿನಯದ ಕೊನೆಯ ಸಿನಿಮಾ. ಹೀಗೆ ಅಪ್ಪು ಕೊನೆಯ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕೋಟಿ ಕೋಟಿ ಆಫರ್‌ ಬರುತ್ತಿದ್ದರೂ ಕೂಡ 'ಜೇಮ್ಸ್‌' ನಿರ್ಮಾಪಕರು ಇದಕ್ಕೆ ಒಪ್ಪುತ್ತಿಲ್ಲ. BKT ಭಾಗಕ್ಕೆ ಸುಮಾರು 12 ಕೋಟಿ ರೂಪಾಯಿ ಆಫರ್‌ ಬಂದರೂ ನಿರ್ಮಾಪಕರು ಇದನ್ನ ತಿರಸ್ಕರಿಸಿದ್ದಾರಂತೆ (James producer).

ಇದನ್ನೂ  ಓದಿ : Pooja Hegde: ಆಲಿಯಾ ಭಟ್ ಬಾಯ್‌ ಫ್ರೆಂಡ್‌ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದೇನು ಗೊತ್ತಾ..?

₹12 ಕೋಟಿ ಆಫರ್..!
ಅಂದಹಾಗೆ ಅಪ್ಪು ಹುಟ್ಟುಹಬ್ಬದಂದು 'ಜೇಮ್ಸ್‌' ಸಿನಿಮಾ ರಿಲೀಸ್‌ ಆಗಲಿದೆ (James release date). ಅಂದರೆ ಮಾರ್ಚ್ 17ಕ್ಕೆ 'ಜೇಮ್ಸ್' ರಿಲೀಸ್ ಆಗುತ್ತಿದೆ. ಇದೇ ಕಾರಣಕ್ಕೆ ವಿತರಕರು 'ಜೇಮ್ಸ್' ಸಿನಿಮಾಗೆ ಮುಗಿಬಿದ್ದು, ದೊಡ್ಡ ದೊಡ್ಡ ಆಫರ್‌ ಕೊಡುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ಚಿತ್ರದ ನಿರ್ಮಾಪಕ ಕಿಶೋರ್ ಕೇರ್‌ ಮಾಡುತ್ತಿಲ್ಲ. ಅಷ್ಟಕ್ಕೂ BKT ಅಂದ್ರೆ ಬೆಂಗಳೂರು, ಕೋಲಾರ ಹಾಗೂ ತುಮಕೂರು ಭಾಗಕ್ಕೆ 12 ಕೋಟಿ ರೂಪಾಯಿ ಆಫರ್‌ ಕೊಟ್ಟರೂ ನಿರ್ಮಾಪಕ ಕಿಶೋರ್ ಓಕೆ ಅಂದಿಲ್ಲ.

ಒಟ್ಟಾರೆ 'ಜೇಮ್ಸ್'ನ ಚಿತ್ರವನ್ನು  (James film) ಅದ್ಧೂರಿಯಾಗಿ ದೇಶಾದ್ಯಂತ ರಿಲೀಸ್‌ ಮಾಡಲು ಚಿತ್ರತಂಡ ಸನ್ನದ್ಧವಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಮೊದಲ ಹಂತದಲ್ಲೇ ಸುಮಾರು 130 ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಗಳು ಕನ್ಫರ್ಮ್‌ ಆಗಿದ್ದು, ಇನ್ನೇನು ಮುಂದಿನ ವಾರ ಜೇಮ್ಸ್‌ ದೇಶಾದ್ಯಂತ ಹವಾ ಎಬ್ಬಿಸೋದು ಗ್ಯಾರಂಟಿ.

ಇದನ್ನೂ  ಓದಿ : Kabzaa:ಬಿಗ್‌ ಸರ್ಪ್ರೈಸ್‌ ನೀಡಿದ 'ಕಬ್ಜ' ಟೀಂ.. ಕಿಚ್ಚ ಸುದೀಪ್‌ಗೆ ಇವರೇ ನಾಯಕಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News