ಶಿವಣ್ಣನ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಪ್ರಶಾಂತ್‌ ಸಂಬರಗಿ; ಮತ್ತೊಂದು ಪೋಸ್ಟ್‌ ಡಿಲೀಟ್‌

Prashanth Sambargi : ಕರ್ನಾಟಕ ವಿದಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಕದನ ಕಲಿಗಳು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಸ್ಟಾರ್‌ ನಟ ನಟಿಯರು ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಇದರಿಂದಾಗಿ ಅನೇಕ ಟೀಕೆಗಳು ಕೇಳಿಬರುತ್ತಿವೆ.  

Written by - Zee Kannada News Desk | Last Updated : May 8, 2023, 01:21 PM IST
  • ಖ್ಯಾತ ನಟ ಹ್ಯಾಟ್ರಿಕ್‌ ಹಿರೋ ಶಿವರಾಜ್‌ ಕುಮಾರ್‌ ಅವರು ಕಾಂಗ್ರೆಸ್‌ ಪರ ಪ್ರಚಾರದಲ್ಲಿ ತೊಡಗಿದ್ದರು
  • ಈ ವಿಚಾರವಾಗಿ ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರಗಿ ಪದೇ ಪದೇ ಶಿವಣ್ಣನ ವಿರುದ್ಧವಾಗಿ ವ್ಯಂಗ್ಯವಾಡಿ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಿದ್ದರು.
  • ಪ್ರಶಾಂತ್‌ ಸಂಬರಗಿ ಮಾಡಿರುವ ಶಿವಣ್ಣನ ವಿರುದ್ಧದ ಪೋಸ್ಟ್‌ಗಳಿಗೆ ಅಭಿಮಾನಿಗಳು ಕಿಡಿಕಾರಿದ್ದಾರೆ.
ಶಿವಣ್ಣನ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಪ್ರಶಾಂತ್‌ ಸಂಬರಗಿ; ಮತ್ತೊಂದು ಪೋಸ್ಟ್‌ ಡಿಲೀಟ್‌  title=

Shivaraj Kumar : ಖ್ಯಾತ ನಟ ಹ್ಯಾಟ್ರಿಕ್‌ ಹಿರೋ ಶಿವರಾಜ್‌ ಕುಮಾರ್‌ ಅವರು ಕಾಂಗ್ರೆಸ್‌ ಪರ ಪ್ರಚಾರದಲ್ಲಿ ತೊಡಗಿದ್ದರು ಈ ವಿಚಾರವಾಗಿ ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರಗಿ ಪದೇ ಪದೇ ಶಿವಣ್ಣನ ವಿರುದ್ಧವಾಗಿ ವ್ಯಂಗ್ಯವಾಡಿ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಶಿವಣ್ಣ ವರ್ಸಸ್‌ ಪ್ರಶಾಂತ್‌ ಸಂಬರಗಿ ಟಾಕ್‌ ವಾರ್‌ ದಿಢೀರ್‌ ತಣ್ಣಗಾಗಿದೆ. 

ಹೌದು ಶಿವಣ್ಣ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಸಾಮಾನ್ಯವಾಗಿ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರಶಾಂತ್‌ ಸಂಬರಗಿ ಮಾಡಿರುವ ಶಿವಣ್ಣನ ವಿರುದ್ಧದ ಪೋಸ್ಟ್‌ಗಳಿಗೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಅಭಿಮಾನಿಗಳ ಆಕ್ರೋಶಕ್ಕೆ ಪ್ರಶಾಂತ್‌ ಸಂಬರಗಿ ಸೈಲೆಂಟ್‌ ಆಗಿದ್ದಾರೆ. ಇದೀಗ ಶಿವಣ್ಣ ಜೊತೆಗಿರುವ ಪೋಸ್ಟ್‌ಗಳನ್ನು ಶೇರ್‌ ಮಾಡಿ ನಾನು ನನ್ನ ಪೋಸ್ಟ್‌ನ್ನು ವಾಪಸ್‌ ಪಡೆಯುತ್ತೇನೆ ಎಂದು ಬರೆದುಕೊಂಡಿದ್ದಾರೆ. 

 

ಇದನ್ನೂ ಓದಿ-ದಿ ಕೇರಳ ಸ್ಟೋರಿ ʼಹೊಸ ರೀತಿಯ ಭಯೋತ್ಪಾದನೆʼಯನ್ನು ಬಹಿರಂಗಪಡಿಸುತ್ತಿದೆ 

ಶಿವಣ್ಣ ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡುತ್ತಿರುವುದಕ್ಕೆ ಬಿಜೆಪಿ ಪಕ್ಷದವರು ಶಿವಣ್ಣನ ಮೇಳೆ ಕಿಡಿಕಾರುತ್ತಿದ್ದಾರೆ. ಜೊತೆಗೆ ಸಾಕಷ್ಟು ಜನರು ಅವರನ್ನು ಟೀಕಿಸಿ ಮಾತನಾಡಿದ್ದಾರೆ. ಬಿಜೆಪಿಯ ಬೆಂಬಲಿಗ ಪ್ರಶಾಂತ್‌ ಸಂಬರಗಿ ಕೂಡ ಈ ವಿಚಾರವಾಗಿ ಶಿವಣ್ಣ ಅವರನ್ನು ಕುರಿತು ವ್ಯಂಗ್ಯವಾಗಿ ಮಾತನಾಡಿ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದರು. ಈ ಹಿಂದೆ ಅವಹೇಳನಕಾರಿಯಾಗಿ ಪೋಸ್ಟ್‌ ಶೇರ್‌ ಮಾಡಿ ನಂತರ ತಾವೇ ಡಿಲೀಟ್‌ ಮಾಡಿದ್ದರು, ಇದಾದನಂತರ ಶಿವಣ್ಣನಿಗೆ 10 ಪ್ರಶ್ನೆಗಳನ್ನು ಮುಂದಿಟ್ಟು ಮತ್ತೊಂದು ಪೋಸ್ಟ್‌ ಶೇರ್‌ ಮಾಡಿದ್ದರು.

ಇದೀಗ ಪ್ರಶಾಂತ್‌ ಸಂಬರಗಿ ಅವರು ದಿಡೀರ್‌ ತಮ್ಮ ದಿಕ್ಕನ್ನೆ ಬದಲಿಸಿಕೊಂಡಿದ್ದಾರೆ. "ಶಿವಣ್ಣ ಮತ್ತೆ ಇನ್ನೊಬ್ಬ ನಮ್ಮ ಆಪ್ತಮಿತ್ರನೊಂದಿಗೆ ಇದೀಗ ತಾನೇ ಮಾತನಾಡಿದೆ.. ಶಿವಣ್ಣ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಶಿವಣ್ಣ ಅವರು ಅವರ ತಂದೆಯ ಬಯಕೆಯಂತೆ ರಾಜಕೀಯದಿಂದ ದೂರ ಇದ್ದಾರೆ. ನಾನು ಅವರ ಬಗ್ಗೆ ಬರೆದಿರುವ ಪೋಸ್ಟ್ ನ್ನು ವಾಪಸ್‌ ಪಡೆಯುತ್ತಿದ್ದೇನೆ ಮತ್ತು ಶಿವಣ್ಣನ ಅಭಿಮಾನಿಗಳಿಗೆ ಕರ್ನಾಟಕದಾದ್ಯಂತ ನೋಯಿಸಬಾರದು ಎಂದು ನಾನು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ-ʼಮದುವೆಗಾಗಿ ಮತಾಂತರʼ ಖುಷ್ಬೂ ವಿರುದ್ಧ ಟೀಕೆ; ನೆಟ್ಟಿಗರ ಪ್ರಶ್ನೆಗೆ ನಟಿಯ ಉತ್ತರವೇನು..? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇ

Trending News