ಸೂಪರ್ ಸ್ಟಾರ್ ರಜನೀಕಾಂತ್ ಗೆ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

೫೧ನೇ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ (Rajinikanth) ಅವರಿಗೆ ನೀಡಲಾಗುವುದು ಎಂದು ಮಾಹಿತಿ ಪ್ರಸಾರ ಸಚಿವ ಪ್ರಕಾಶ್ ಜಾವೇದ್ಕರ್ (Prakash Javedkar) ಪ್ರಕಟಿಸಿದ್ದಾರೆ.

Written by - Ranjitha R K | Last Updated : Apr 1, 2021, 10:50 AM IST
  • ರಜನೀಕಾಂತ್ ಮುಡಿಗೆ ಮತ್ತೊಂದು ಗರಿ
  • ರಜನೀಕಾಂತ್ ಗೆ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ
  • ಪ್ರಶಸ್ತಿ ಪ್ರಕಟಿಸಿದ ಸಚಿವ ಪ್ರಕಾಶ್ ಜಾವೇದ್ಕರ್
ಸೂಪರ್ ಸ್ಟಾರ್ ರಜನೀಕಾಂತ್ ಗೆ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ title=
ರಜನೀಕಾಂತ್ ಗೆ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ (file photo)

ನವದೆಹಲಿ :  Rajinikanth Dada Saheb Phalke Award - ಸೂಪರ್ ಸ್ಟಾರ್ ರಜನೀಕಾಂತ್ ಸಾಧನೆಗೆ ಮತ್ತೊಂದು ಗರಿ. ಈ ಬಾರಿಯ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ರಜನೀಕಾಂತ್ (Rajinikanth) ಅವರಿಗೆ ಒಲಿದಿದೆ. ಈ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇದ್ಕರ್ ಘೋಷಿಸಿದ್ದಾರೆ. 

೫೧ನೇ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ (Rajinikanth) ಅವರಿಗೆ ನೀಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇದ್ಕರ್ (Prakash Javedkar) ಪ್ರಕಟಿಸಿದ್ದಾರೆ.  5 ಸದಸ್ಯರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಈ ಪ್ರಶಸ್ತಿಯನ್ನು ರಜನಿಕಾಂತ್ ಅವರಿಗೆ ನೀಡಲು ಸರ್ವಾನುಮತದಿಂದ ನಿರ್ಧರಿಸಿದೆ  ಎಂದು ಅವರು ಹೇಳಿದ್ದಾರೆ. 

 

ಇದನ್ನೂ ಓದಿ : Malaika Arora: ಗೋಡೆಯ ಮೇಲೆ ನಟಿಯ ಯೋಗ ಕಂಡು ಹುಬ್ಬೇರಿಸಿದ ನೆಟ್ಟಿಗರು

ದರ್ಬಾರ್ (Darbar) ಚಿತ್ರಕ್ಕಾಗಿ ರಜನಿಕಾಂತ್ ಸೇರಿದಂತೆ ಇಡಿ ಚಿತ್ರ (Cinema) ತಂಡಕ್ಕೆ ಮೇಕ್ ಅಪ್ ಮಾಡಿರುವ ದೇವ್ ಅವರಿಗೆ 2020ರ  ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗಿತ್ತು.  ದೇವ್ (Dev) ಮುಂಬೈ ತಲುಪಿದ ನಂತರ ಕೆಲಸಕ್ಕಾಗಿ ಬಹಳ  ಕಷ್ಟ ಪಟ್ಟಿದ್ದರು. ನಂತರ ಧಾರಾವಾಹಿಗಳ (Serials)  ಮೇಕಪ್ ಕಲಾವಿದರ ಸಹಾಯಕರಾಗಿ ಕೆಲಸ ಮಾಡಿದ್ದರು. 

ಇದನ್ನೂ ಓದಿ : 6 ಕೋಟಿ ಮೌಲ್ಯದ Lamborghini ಕಾರ್ ಖರೀದಿಸಿದ ನಟ ಪ್ರಭಾಸ್ ; ಇಲ್ಲಿದೆ VIDEO

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News