ಸೆಟ್ಟೇರಿತು ಪ್ರಜ್ವಲ್ “ಕರಾವಳಿ” ಸಿನಿಮಾ: ಮುಹೂರ್ತದ ಸ್ಪೆಷಲ್ ಅಟ್ರ್ಯಾಕ್ಷನ್ ಗಜಗಾತ್ರದ ಕೋಣ!

Kaaravali movie: ಕರಾವಳಿ ಈಗಾಗಲೇ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ. ಗುರುದತ್ ಗಾಣಿಗ ನಿರ್ದೇಶನದ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾ಼ಣವಾಗಿರೋ ಚಿತ್ರ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ. 

Written by - YASHODHA POOJARI | Last Updated : Feb 20, 2024, 06:40 PM IST
  • ಬಹು ನಿರೀಕ್ಷಿತ “ಕರಾವಳಿ” ಸಿನಿಮಾಗೆ ಅದ್ದೂರಿ ಮಹೂರ್ತ
  • ಕಲರ್ ಫುಲ್ ಆಗಿ ಸೆಟ್ಟೇರಿತು ಪ್ರಜ್ವಲ್ “ಕರಾವಳಿ” ಸಿನಿಮಾ
  • ಕರಾವಳಿ ಸಂಸ್ಕೃತಿ ಆಚರಣೆಯ ಮಧ್ಯೆ ಸೆಟ್ಟೇರಿದ “ಕರಾವಳಿ” ಸಿನಿಮಾ
ಸೆಟ್ಟೇರಿತು ಪ್ರಜ್ವಲ್ “ಕರಾವಳಿ” ಸಿನಿಮಾ: ಮುಹೂರ್ತದ ಸ್ಪೆಷಲ್ ಅಟ್ರ್ಯಾಕ್ಷನ್ ಗಜಗಾತ್ರದ ಕೋಣ!  title=

Prajwal Devaraj: ಈಗಾಗಲೇ ಕರಾವಳಿ ಸಿನಿಮಾ ಪೋಸ್ಟರ್ ಮತ್ತು ಟೀಸರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಅಧಿಕೃತವಾಗಿ ಮೂಹೂರ್ತ ಮಾಡುವ ಮೂಲಕ ಶೂಟಿಂಗ್ ಗೆ ಹೊರಡಲು ಸಿದ್ಧವಾಗಿದೆ. ಬೆಂಗಳೂರಿನ ಪ್ರಸಿದ್ಧ ಬುಲ್ ಟೆಂಪಲ್ ನಲ್ಲಿ ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.

ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾ ತಂಡ ಹಾಜರಾಗಿತ್ತು. ಜೊತೆಗೆ ಹಿರಿಯ ನಟ ದೇವರಾಜ್ ದಂಪತಿ ಸೇರಿದಂತೆ ಪ್ರಜ್ವಲ್ ದೇವರಾಜ್ ಅವರ ಫ್ಯಾಮಿಲಿ ಕೂಡ ಭಾಗಿಯಾಗಿತ್ತು. ಇನ್ನು ವಿಶೇಷ ಎಂದರೆ  ಎಡಿಜಿಪಿ ಅನುಚಿತ್ ಅವರು ಭಾಗಿಯಾಗಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕ ಜಾಕ್ ಮಂಜು ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಡೈನಾಮಿಕ್ ದೇವರಾಜ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ರು. 

ಇದನ್ನೂ ಓದಿ-ಸದ್ಯ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ರಾಕುಲ್ ಪ್ರೀತ್ ಮೊದಲ ಸಂಬಳ ಎಷ್ಟು ಗೊತ್ತಾ?

ಮುಹೂರ್ತದ ಹೈಲೈಟ್ಸ್ ಎಂದರೆ ಕೋಣ. ಕರಾವಳಿ ಚಿತ್ರದ ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕೋಣ ಪತ್ರಿಕಾಗೋಷ್ಠಿಗೂ ಹಾಜರಾಗಿದ್ದು ವಿಶೇಷವಾಗಿತ್ತು. ಗಜಗಾತ್ರದ ಕೋಣವನ್ನ ನೋಡಿದವರೆಲ್ಲಾ ಆಶ್ಚರ್ಯ ಪಟ್ಟಿದ್ದೆ ಹೆಚ್ಚು. ಇನ್ನು ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾ ತಂಡ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡರು.

ನಿರ್ದೇಶಕ ಮತ್ತು ನಿರ್ಮಾಪಕ ಗುರುದತ್ ಗಾಣಿಗ ಮಾತನಾಡಿ, ‘ಇದು ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಇದು ಹಳ್ಳಿಯ ಕಥೆ. ಕಂಬಳ ಪ್ರಪಂಚದಲ್ಲಿನೋಡಯುತ್ತಿರುವವ ಕಥೆ. ಕಂಬಳದ ಬಗ್ಗೆ ಇರಲಿದೆ’ ಎಂದು ಹೇಳಿದರು. ಮತ್ತು ಪ್ರಾಣಿಗಳ ಜೊತೆ ಕೆಲಸ ಮಾಡುವುದು ಎಷ್ಟು ಕಷ್ಟ, ಹೇಗೆ ಕೆಲಸ ಮಾಡಬೇಕು, ಚಿತ್ರೀಕರಣಕ್ಕೆ ಏನೆಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎನ್ನುವುದನ್ನು ಸಹ ತಿಳಿಸಿದರು.
  
ನಟ ಪ್ರಜ್ವಲ್ ದೇವರಾಜ್ ಮಾತನಾಡಿ ಕೋಣದ ಜೊತೆಗಿನ ಶೂಟಿಂಗ್ ಅನುಭವ ಬಿಚ್ಚಿಟ್ಟರು. ‘ನೋಡೋಕೆ ಮಾತ್ರ ಭಯ ಆದರೆ ತುಂಬಾ ಸಾಫ್ಟ್ ಆಗಿದೆ. ಕನ್ನಡ ಸಿನಿಮಾರಂಗ ಬೆಳೆಯುತ್ತಿದೆ. ಕರಾವಳಿ ಸಿನಿಮಾದ ಟೀಸರ್ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಕಥೆ ತುಂಬಾ ಚೆನ್ನಾಗಿದೆ. ನನಗೆ ತುಂಬಾ ಇಷ್ಟವಾಗಿದೆ. ನನ್ನ ಫ್ಯಾನ್ಸ್‌ಗೆ ಖುಷಿಯಾಗುವ ಹಾಗೆ ನಾನು ಸಿನಿಮಾಗಳನ್ನ ಮಾಡುತ್ತೇನೆ. ಕರಾವಳಿ ಸಿನಿಮಾ ಕೂಡ ನನ್ನ ಫ್ಯಾನ್ಸಿಗೆ ತುಂಬಾ ಇಷ್ಟ ಆಗುತ್ತೆ. ಇದು ನನ್ನ 40 ನೇ ಸಿನಿಮಾ ಎನ್ನುವುದು ವಿಶೇಷ' ಎಂದರು. 

ಇನ್ನು ಮಗನ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ಡೈನಾಮಿಕ್ ಸ್ಟಾರ್ ದೇವರಾಜ್ ಮಾತನಾಡಿ, ಇಡೀ ತಂಡಕ್ಕೆ ಶುಭ ಹಾರೈಸುವ ಜೊತೆಗೆ ‘ಕರಾವಳಿ ನನ್ನ ಮಗನ ಕರಿಯರ್ ನಲ್ಲೇ ಬೆಸ್ಟ್ ಸಿನಿಮಾ ಆಗಲಿದೆ. ಎಲ್ಲೇ ಹೋದರು ಕರಾವಳಿ ಚಿತ್ರದ ಬಗ್ಗೆ ಕೇಳುತ್ತಾರೆ’ ಎಂದರು. 

ಇದನ್ನೂ ಓದಿ-ಒಂದು ಕಾಲದಲ್ಲಿ ಸೆಕ್ಯುರಿಟಿ ಗಾರ್ಡ್.. ಈಗ ಒಂದು ಚಿತ್ರಕ್ಕೆ 5 ಕೋಟಿ ತೆಗೆದುಕೊಳ್ಳುವ ಸೂಪರ್ ಸ್ಟಾರ್!

ಇನ್ನು ಕರಾವಳಿ ಸಿನಿಮಾಗೆ ನಾಯಕಿಯಾಗಿ ಸಂಪದಾ ಆಯ್ಕೆ ಆಗಿದ್ದಾರೆ. ಈಗಾಗಲೇ ಬೆಂಕಿ ಹಾಗೂ ರೈಡರ್ ಸಿನಿಮಾಗಳಲ್ಲಿ ಕಾಣಿಸೊಂಡಿದ್ದ ಸಂಪದಾ ಇದೀಗ ಕರಾವಳಿ ಸಿನಿಮಾದಲ್ಲಿಮಿಂಚಲಿದ್ದಾರೆ. ಚಿತ್ರದ ಬಗ್ಗೆಸ ಸಖತ್ ಎಕ್ಸಾಯಿಟ್ ಆಗಿರುವ ಸಂಪದಾ ಪಶುವೈದ್ಯೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾರೆಮಾ ವರ್ಕ್ ಇದೆ,  ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ವಿಶೇಷ ಎಂದರೆ ನಟ ಮಿತ್ರ ಕರಾವಳಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಟಿವಿ ಶ್ರೀಧರ್, ಜಿ ಜಿ, ನಿರಂಜನ್ ಇನ್ನು ಹಲವು ಪ್ರಖ್ಯಾತ ಕಲಾವಿದರು ಕರಾವಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮುಹೂರ್ತ ಮುಗಿಸಿರೋ ಸಿನಿಮಾತಂಡ ಇದೇ ತಿಂಗಳು 23 ರಿಂದ ಕರಾವಳಿ ಭಾಗದಲ್ಲಿ ಚಿತ್ರೀಕರಣ ಶುರು ಮಾಡಲಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News