Prabhas marriage : ಡಾರ್ಲಿಂಗ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌..! ತಿರುಪತಿಯಲ್ಲಿ ನಟ ಪ್ರಭಾಸ್‌ ಮದುವೆ ಫಿಕ್ಸ್‌

Actor Prabhas wedding : ಇಷ್ಟು ದಿನ ನಟ ಡಾರ್ಲಿಂಗ್‌ ಪ್ರಭಾಸ್‌ ಮದುವೆ ಯಾವಾಗ ಎಂದು ತಲೆಕಡಿಸಿಕೊಂಡಿದ್ದ ಅವರ ಅಭಿಮಾನಿಗಳಿಗೆ ಕೊಂಚ ರಿಲೀಫ್‌ ಸಿಕ್ಕಿದೆ. ಪ್ರಭಾಸ್‌ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ತಿರುಪತಿಯಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಹಾಗಿದ್ರೆ ರೆಬಲ್‌ ಸ್ಟಾರ್‌ ಮದುವೆಯಾಗಲಿರುವ ಹುಡುಗಿ ಯಾರು ಅಂತೀರಾ.. ಮುಂದೆ ಓದಿ..

Written by - Krishna N K | Last Updated : Jun 9, 2023, 05:02 PM IST
  • ಮದುವೆ ಯಾವಾಗ ಎಂದು ತಲೆಕಡಿಸಿಕೊಂಡಿದ್ದ ಪ್ರಭಾಸ್‌ ಅಭಿಮಾನಿಗಳಿಗೆ ಕೊಂಚ ರಿಲೀಫ್‌ ಸಿಕ್ಕಿದೆ.
  • ತಿರುಪತಿಯಲ್ಲಿ ಪ್ರಭಾಸ್‌ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ.
  • ಆದಿಪುರುಷ ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದ ವೇಳೆ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ.
Prabhas marriage : ಡಾರ್ಲಿಂಗ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌..! ತಿರುಪತಿಯಲ್ಲಿ ನಟ ಪ್ರಭಾಸ್‌ ಮದುವೆ ಫಿಕ್ಸ್‌ title=

Prabhas marriage : ಪೌರಾಣಿಕ ಚಿತ್ರ ʼಆದಿ ಪುರುಷʼದಲ್ಲಿ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನನ್ ನಟಿಸಿದ್ದಾರೆ. ಬಾಲಿವುಡ್ ನಿರ್ದೇಶಕ ಓಂ ರಾವುತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೃತಿ ಸನನ್ ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣಾಸುರನ ಪಾತ್ರವನ್ನು ನಟಿಸಿದ್ದಾರೆ. 

ಆದಿಪುರುಷ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಜೂನ್ 16 ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಪ್ರಚಾರ ಕಾರ್ಯ ಶುರುವಾಗಿದೆ. ಇದರ ಭಾಗವಾಗಿ ತಿರುಪತಿಯಲ್ಲಿ ದೊಡ್ಡ ಮಟ್ಟದ ಪ್ರೀ ರಿಲೀಸ್ ಇವೆಂಟ್‌ ಆಯೋಜಿಸಲಾಗಿತ್ತು. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ (ಎಸ್‌ವಿಯು) ಕ್ರೀಡಾಂಗಣದಲ್ಲಿ ಸಮಾರಂಭ ಅದ್ದೂರಿಯಾಗಿ ನಡೆಯಿತು. 

ಇದನ್ನೂ ಓದಿ: ಕಪಿಲ್ ಶರ್ಮಾ, ಜಾನಿ ಲಿವರ್ ಅಲ್ಲ.. ಭಾರತದ ಶ್ರೀಮಂತ ಕಾಮಿಡಿಯನ್‌ ದಕ್ಷಿಣ ಭಾರತದ ಈ ಹಾಸ್ಯ ನಟ

‘ಆದಿ ಪುರುಷ’ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ಪ್ರಭಾಸ್ ತಮ್ಮ ಮದುವೆ ಬಗ್ಗೆ ಪ್ರಸ್ತಾಪ ಮಾಡಿದರು. ವೇದಿಕೆಯ ಮೇಲೆ ಪ್ರಭಾಸ್ ಮಾತನಾಡುತ್ತಿದ್ದಾಗ ಅಭಿಮಾನಿಗಳು ಯಾವಾಗ ಮದುವೆಯಾಗುತ್ತೀರಿ ಎಂದು  ಕೇಳಿದ್ರು, ಆಗ ಡಾರ್ಲಿಂಗ್‌ ಯಾವಾಗ ಎಂದು ಹೇಳದೆ ತಿರುಪತಿಯಲ್ಲಿ ಖಂಡಿತಾ ಮದುವೆಯಾಗುತ್ತೇನೆ ಎಂದು ಉತ್ತರಿಸಿದರು. 

ವಧು ಮತ್ತು ದಿನಾಂಕ ತಿಳಿದಿಲ್ಲವಾದರೂ, ಸ್ಥಳ ತಿರುಪತಿ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಪ್ರಭಾಸ್ ಅಭಿಮಾನಿಗಳು ಸದ್ಯದಲ್ಲೇ ಮದುವೆಯಾಗ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಗಂಧದ ಗುಡಿ ಪ್ರವೇಶಿಸಿದ ಮುಂಬೈ ಹುಡುಗಿ ಪ್ರಾಚಿ ಶರ್ಮ..! ಫೋಟೋಸ್‌ ನೋಡಿ

ಇನ್ನು ಪ್ರಭಾಸ್‌ ಮದುವೆ ಸ್ಥಳ ಪ್ರಸ್ತಾಪ ಬೆನ್ನಲ್ಲೆ ಕೃತಿ ಸನೋನ್ ಹೆಸರು ಮುಂಚೂಣಿಗೆ ಬಂದಿದೆ. ಪ್ರಭಾಸ್‌ ಕೃತಿ ಸನೋನ್‌ ಮದುವೆಯಾಗ್ತಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದ್ರೆ, ಕೆಲ ನೆಟ್ಟಿಜನ್ಸ್‌ ಇಲ್ಲಾ ಡಾರ್ಲಿಂಗ್‌ ಅನುಷ್ಕಾ ಶೆಟ್ಟಿ ಕೈ ಹಿಡಿಯಲಿದ್ದಾರೆ ಎಂದು ವಾದಿಸುತ್ತಿದ್ದಾರೆ. ಸದ್ಯ ಈ ಪ್ರಶ್ನೆಗೆ ಪ್ರಭಾಸ್‌ ಅವರೇ ಉತ್ತರ ನೀಡಿಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News