Prabhas and Anushka Shetty : ಯಂಗ್‌ ರೆಬೆಲ್ ಪ್ರಭಾಸ್‌‌ ಮತ್ತು ಅನುಷ್ಕಾ ಶೆಟ್ಟಿ ಒಂದಾಗುತ್ತಿದ್ದಾರಾ?

ಈ ಸಿನಿಮಾ ಬಳಿಕ ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಮದುವೆ ಕೂಡ ಆಗ್ತಾರೆ ಅನ್ನೋ ಗಾಸಿಪ್‌ ದೊಡ್ಡದಾಗಿತ್ತು. ಆದರೆ ಅದೆಲ್ಲಾ ಗಾಸಿಪ್, ನಾವು ಒಳ್ಳೆಯ ಗೆಳೆಯರು ಅಂತಾ ಹೇಳಿ ಈ ಜೋಡಿ ತಕ್ಕ ಉತ್ತರ ನೀಡಿತ್ತು.

Written by - Malathesha M | Last Updated : Mar 30, 2022, 08:30 PM IST
  • ಮದುವೆ ಗಾಸಿಪ್
  • ಮತ್ತೊಮ್ಮೆ ಮೋಡಿ..!
  • ಮತ್ತೆ ಒಂದಾದ ಜೋಡಿ
Prabhas and Anushka Shetty : ಯಂಗ್‌ ರೆಬೆಲ್ ಪ್ರಭಾಸ್‌‌ ಮತ್ತು ಅನುಷ್ಕಾ ಶೆಟ್ಟಿ ಒಂದಾಗುತ್ತಿದ್ದಾರಾ? title=

ಅದು ಮುದ್ದಾದ ಜೋಡಿ, 'ಬಾಹುಬಲಿ'ಯ ಮೂಲಕ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಜೋಡಿ ಮತ್ತೆ ತೆರೆ ಮೇಲೆ ಒಂದಾಗಲೇ ಇಲ್ಲ. ಆದರೆ ಇದೀಗ ತೆಲುಗು ಸಿನಿ ರಸಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು,  ತೆರೆ ಮೇಲೆ ಕಣ್ಮರೆಯಾಗಿದ್ದ ಆ ಜೋಡಿ ಮತ್ತೆ ಒಂದಾಗುತ್ತಿದೆ. ಅಷ್ಟಕ್ಕೂ ನಾವು ಹೇಳ್ತಿರೋದು ಯಾವ ಜೋಡಿ ಬಗ್ಗೆ ಅನ್ನೋ ಹಿಂಟ್‌ ನಿಮಗೆ ಈಗಾಗಲೇ ಸಿಕ್ಕಿರಬಹುದು ಅಲ್ವಾ..? ಅದರ ಕಂಪ್ಲೀಟ್‌ ಡೀಟೇಲ್ಸ್‌ ಮುಂದೆ ಇದೆ ಓದಿ.

ಬಾಹುಬಲಿ(Bahubali Movie).. ಭಾರತೀಯ ಸಿನಿಮಾ ರಂಗದಲ್ಲಿ ಈ ಚಿತ್ರ ಸೃಷ್ಟಿಸಿದ ದಾಖಲೆಗಳು ಒಂದೆರಡಲ್ಲ. ಬಾಕ್ಸ್‌ ಆಫಿಸ್‌ನಿಂದ ಹಿಡಿದು, ಪ್ರತಿ ಹಂತದಲ್ಲೂ ಈ ಸಿನಿಮಾ ನೂರಾರು ದಾಖಲೆ ಸೃಷ್ಟಿಮಾಡಿತ್ತು. ಅದರಲ್ಲೂ ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಜೋಡಿ ಬಾಹುಬಲಿ ಚಿತ್ರದಲ್ಲಿ ದೊಡ್ಡ ಮೋಡಿ ಮಾಡಿತ್ತು. ಈ ಸಿನಿಮಾ ಬಳಿಕ ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಮದುವೆ ಕೂಡ ಆಗ್ತಾರೆ ಅನ್ನೋ ಗಾಸಿಪ್‌ ದೊಡ್ಡದಾಗಿತ್ತು. ಆದರೆ ಅದೆಲ್ಲಾ ಗಾಸಿಪ್, ನಾವು ಒಳ್ಳೆಯ ಗೆಳೆಯರು ಅಂತಾ ಹೇಳಿ ಈ ಜೋಡಿ ತಕ್ಕ ಉತ್ತರ ನೀಡಿತ್ತು.

ಇದನ್ನೂ ಓದಿ : 20 ಕೆಜಿ ತೂಕ ಇಳಿಸಿಕೊಂಡ ನಟಿ ಗೀತಾ...ಇದರ ಹಿಂದಿನ ಗುಟ್ಟೇನು?

ಮದುವೆ ಗಾಸಿಪ್

ಇನ್ನು ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್‌(Prabhas and Anushka) ಜೋಡಿ ಒಟ್ಟಿಗೆ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಈ ಜೋಡಿಯ ಮದುವೆ ವಿಚಾರ ಗಾಸಿಪ್‌ ಅಂತಾ ಗೊತ್ತಾದ ನಂತರ, ಕಡೇ ಪಕ್ಷ ಮತ್ತೆ ಒಟ್ಟಿಗೆ ನಟನೆ ಮಾಡ್ತಾರಾ ಅಂತಾ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಅಭಿಮಾನಿಗಳ ಈ ಎಲ್ಲಾ ಕುತೂಹಲಗಳಿಗೆ ಇದೀಗ ಉತ್ತರ ಸಿಕ್ಕಿದೆ. ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ.

ಮತ್ತೆ ಒಂದಾದ ಜೋಡಿ

ಹೌದು, ಬಾಹುಬಲಿ(Bahubali)ಯ ಜೋಡಿ ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಮತ್ತೆ ಬೆಳ್ಳಿತೆರೆ ಮೇಲೆ ಒಂದಾಗುತ್ತಿದ್ದಾರೆ. ಈ ಸುದ್ದಿ ಕನ್ಫರ್ಮ್‌ ಕೂಡ ಆಗಿದೆ. ಸದ್ಯ 'ರಾಜ ಡಿಲಕ್ಸ್' ಎಂದು ಹೆಸರು ಇಟ್ಟಿರುವ ಚಿತ್ರದಲ್ಲಿ ಪ್ರಭಾಸ್‌, ಅನುಷ್ಕಾ ಶೆಟ್ಟಿ ಜೋಡಿ ಒಟ್ಟಾಗಿ ನಟಿಸಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಕಮಾಲ್‌ ಮಾಡಲು ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಸಜ್ಜಾಗಿದ್ದಾರೆ. ಇದು ಇಬ್ಬರ ಅಭಿಮಾನಿಗಳಿಗೆ ರಸದೌತಣ ನೀಡುವ ಮುನ್ಸೂಚನೆ ನೀಡಿದೆ.

ಮತ್ತೊಮ್ಮೆ ಮೋಡಿ..!

'ರಾಜ ಡಿಲಕ್ಸ್' ಬಗ್ಗೆ ಮಾತುಕತೆ ನಡೆದು ಎಲ್ಲಾ ಫೈನಲ್‌ ಆಗಿದ್ದರು ಕೂಡ ಕಥೆ ಮತ್ತಿತರ ಮಾಹಿತಿಗಳು ಬಹಿರಂಗವಾಗಿಲ್ಲ. ಅನುಷ್ಕಾ ಶೆಟ್ಟಿ(Anushka Shetty) ಕೂಡ ಈ ಸಿನಿಮಾದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರಂತೆ. ಈ ಮೂಲಕ ಮತ್ತೊಮ್ಮೆ ಪ್ರಭಾಸ್‌ ಜೋಡಿಯಾಗಿ ಕಾಣಿಸಿಕೊಳ್ಳಲು ಅನುಷ್ಕಾ ಸಜ್ಜಾಗಿದ್ದಾರೆ. ಈ ಬಾರಿಯೂ ಬೆಳ್ಳಿತೆರೆ ಮೇಲೆ ಈ ಜೋಡಿ ಮೋಡಿ ಮಾಡೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ : RRR Box Office: ಹೊಸ ಇತಿಹಾಸ ಸೃಷ್ಟಿಸಿದ ರಾಜಮೌಳಿ ಸಿನಿಮಾ

ಒಟ್ನಲ್ಲಿ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಸಜ್ಜಾಗುತ್ತಿದ್ದು, 'ರಾಜ ಡಿಲಕ್ಸ್' ಸಿನಿಮಾ(Raj Deluxe Movie)ಗೆ ಮಾರುತಿ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಈ ಮೂಲಕ ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿದ್ದು, ಯಾವಾಗ ಸಿನಿಮಾ ಕಣ್ತುಂಬಿಕೊಳ್ಳಲಿದ್ದೇವೆ ಅಂತಾ ಅಭಿಮಾನಿ ಬಳಗ ಕಾಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News