James: ‘ಜೇಮ್ಸ್’ ಸಿನಿಮಾ ಸರಿಯಿಲ್ಲ ಎಂದವನಿಗೆ ಚಳಿ ಬಿಡಿಸಿದ ‘ಅಪ್ಪು’ ಫ್ಯಾನ್ಸ್!

‘ಜೇಮ್ಸ್’ ಸಿನಿಮಾ ನನಗೆ ಅರ್ಥವಾಗಿಲ್ಲ, ಟಿಕೆಟ್‍ಗೆ ದುಡ್ಡು ಕೊಟ್ಟಿದ್ದೇ ವೇಸ್ಟ್ ಅಂತಾ ಹೇಳಿದ್ದ ಯುವಕನನ್ನು ಹುಡುಕಿದ ‘ಅಪ್ಪು’ ಫ್ಯಾನ್ಸ್ ಆತನಿಗೆ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Mar 27, 2022, 10:45 AM IST
  • ‘ಜೇಮ್ಸ್’ ಸರಿಯಾಗಿಲ್ಲವೆಂದು ಹೇಳಿದ್ದ ಯುವಕನಿಗೆ ಚಳಿ ಬಿಡಿಸಿದ ಪುನೀತ್ ಫ್ಯಾನ್ಸ್
  • ‘ಜೇಮ್ಸ್’ ಸಿನಿಮಾಗೆ ಟಿಕೆಟ್ ತೆಗೆಕೊಂಡಿದ್ದೇ ವೇಸ್ಟ್ ಎಂದಿದ್ದವನಿಂದ ಕ್ಷಮೆಯಾಚನೆ
  • ‘ಅಪ್ಪು’ ಸಿನಿಮಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಖಡಕ್ ವಾರ್ನಿಂಗ್
James: ‘ಜೇಮ್ಸ್’ ಸಿನಿಮಾ ಸರಿಯಿಲ್ಲ ಎಂದವನಿಗೆ ಚಳಿ ಬಿಡಿಸಿದ ‘ಅಪ್ಪು’ ಫ್ಯಾನ್ಸ್! title=
ಯುವಕನಿಗೆ ಚಳಿ ಬಿಡಿಸಿದ ಪುನೀತ್ ಫ್ಯಾನ್ಸ್

ಬೆಂಗಳೂರು: ಇಡೀ ರಾಜ್ಯ ಸೇರಿದಂತೆ ದೇಶ-ವಿದೇಶದಲ್ಲಿಯೂ ಬರೀ ‘ಜೇಮ್ಸ್‌’ ಸಿನಿಮಾ(James Movie)ದ್ದೇ ಕಾರುಬಾರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Power Star Puneeth Rajkumar) ಅಭಿನಯದ ಕೊನೆ ಸಿನಿಮಾ ‘ಜೇಮ್ಸ್‌’ ನೋಡಿ ಕಣ್ಣೀರಾಕದಿರುವವರೇ ಇಲ್ಲ. ‘ಅಪ್ಪು’ವಿನ ಕೊನೆ ಸಿನಿಮಾ ಆಗಿರುವುದರಿಂದ ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಈ ಸಿನಿಮಾ ನೋಡುವುದು ನಮ್ಮ ಜವಾಬ್ದಾರಿ ಅಂತಾ ಭಾವಿಸಿದ್ದಾರೆ.   

‘ಅಪ್ಪು’ ಅಮರ… ‘ಯುವರತ್ನ’ನಿಗೆ ಶತ್ರುಗಳು ಅತಾ ಯಾರು ಇಲ್ಲ. ಪ್ರತಿಯೊಬ್ಬರೂ ಡಾ.ಪುನೀತ್‌ ರಾಜ್‌ಕುಮಾರ(Dr Puneeth Rajkumar)ನ್ನು ಪ್ರೀತಿ ಮಾಡುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಪ್ಪುರನ್ನು ಪ್ರೀತಿ ಮಾಡೋರೇ ಇದ್ದಾರೆ. ‘ಜೇಮ್ಸ್’ ಸಿನಿಮಾವನ್ನು ಒಂದಲ್ಲ ಹಲವಾರು ಬಾರಿ  ನೋಡಿದವರು ಇದ್ದಾರೆ. ಅನೇಕ ಅಭಿಮಾನಿಗಳು ಪುನೀತ್ ಮೇಲಿನ ಅಭಿಮಾನಕ್ಕೆ, ಅವರ ಸಮಾಜಸೇವೆ ನೆನೆದುಕೊಂಡು ಒಂದೇ ಥಿಯೇಟರ್‍ನ ಹಲವಾರು ಟಿಕೆಟ್‍ಗಳನ್ನು ಖರೀದಿಸಿದ್ದಾರೆ. ಇದು ಕರ್ನಾಟಕ ರತ್ನ ಪುನೀತ್ ಮೇಲಿನ ಅಭಿಮಾನ.

ಇದನ್ನೂ ಓದಿ: The Kashmir Files: ಹೊಸ ವಿವಾದಕ್ಕೆ ಸಿಲುಕಿದ ವಿವೇಕ್ ಅಗ್ನಿಹೋತ್ರಿ, ಪ್ರಕರಣ ದಾಖಲು

‘ಜೇಮ್ಸ್’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 10 ದಿನಗಳು ಕಳೆದಿವೆ. ಈಗಾಗಲೇ ಬಾಕ್ಸಾ ಆಫೀಸ್‍(James Box Office Collection)ನಲ್ಲಿ ಹೊಸ ದಾಖಲೆ ಬರೆದಿರುವ ‘ಜೇಮ್ಸ್’ ಕೋಟಿ ಕೋಟಿ ಬಾಚಿಕೊಂಡಿದೆ. ಈ ಮಧ್ಯೆ ಈ ಸಿನಿಮಾವನ್ನು ನೋಡಿದ ಯುವಕನೊಬ್ಬ ಮಾಧ್ಯಮವೊಂದರ ಮುಂದೆ ‘ಜೇಮ್ಸ್’ ಸಿನಿಮಾಗೆ ಟಿಕೆಟ್ ತೆಗೆದುಕೊಂಡಿದ್ದೇ ವೇಸ್ಟ್ ಅಂತಾ ಹೇಳಿದ್ದಾನೆ. ‘ಜೇಮ್ಸ್’ ಸಿನಿಮಾ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ ಅನ್ನೋ ಮಾತುಗಳನ್ನು ಆಡಿದ್ದಾನೆ. ಯಾವಾಗ ಈತನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ ‘ಅಪ್ಪು’ ಅಭಿಮಾನಿಗಳು ರೊಚ್ಚಿಗೆದಿದ್ದಾರೆ.

‘ಜೇಮ್ಸ್’ ಸಿನಿಮಾ(James Movie) ನನಗೆ ಅರ್ಥವಾಗಿಲ್ಲ, ಟಿಕೆಟ್‍ಗೆ ದುಡ್ಡು ಕೊಟ್ಟಿದ್ದೇ ವೇಸ್ಟ್ ಅಂತಾ ಹೇಳಿದ್ದ ಯುವಕನನ್ನು ಹುಡುಕಿದ ‘ಅಪ್ಪು’ ಫ್ಯಾನ್ಸ್ ಆತನಿಗೆ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ. ಮಲ್ಲೇಶ್ವರದ 18ನೇ ಕ್ರಾಸ್‍ನಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ಯುವಕನಿಗೆ ಪವನ್ ಎಂಬಾತ ಚಳಿ ಬಿಡಿಸಿದ್ದು, ಪುನೀತ್ ರಾಜ್‍ಕುಮಾರ್ ಸಿನಿಮಾದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡದಂತೆ ಎಚ್ಚರಿಸಿದ್ದಾನೆ. ಬಳಿಕ ಯುವಕ ‘ಅಪ್ಪು’ ಸಿನಿಮಾ ಬಗ್ಗೆ ಮಾತನಾಡಿದ್ದು ತಪ್ಪಾಯ್ತು ಅಂತಾ ಕ್ಷಮೆ ಕೇಳಿದ್ದಾನೆ.

ಇದನ್ನೂ ಓದಿ: KGF Chapter 2: ಯಶ್ ಅಭಿನಯದ ಕೆಜಿಎಫ್ 2 ಚಿತ್ರವನ್ನು ಕನಸಿನಲ್ಲಿ ನೋಡಿದೆ ಎಂದ ವಿದೇಶಿ ಅಭಿಮಾನಿ..!

ಇದಲ್ಲದೆ ಇನ್ನೊಬ್ಬ ಯುಕವ ಕೂಡ ‘ಜೇಮ್ಸ್’ ಸಿನಿಮಾಗೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೇ ತಡ ಆತನಿಗೂ ಪುನೀತ್(Puneeth Rajkumar) ಅಭಿಮಾನಿಗಳು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಳಿಕ ಆತನೂ ಸಹ ಕ್ಷಮೆಯಾಚಿಸಿದ್ದಾನೆ. ಬದುಕಿದ್ದಾಗಲೇ ಜೀವಂತ ದಂತಕಥೆಯಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು ಕಣ್ರೋ ಅಂತಾ ‘ಅಪ್ಪು’ ಫ್ಯಾನ್ಸ್ ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News