ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪ್ರಧಾನಿ ಮೋದಿ ಬಯೋಪಿಕ್; ದಿನಾಂಕ ಗೊತ್ತಾ?

ಬಾಲಿವುಡ್ ನಟ ವಿವೇಕ್ ಒಬೆರಾಯ್ ಈ ಚಿತ್ರದಲ್ಲಿ ಮೋದಿ ಅವರ ಪಾತ್ರದಲ್ಲಿ ಅಭಿನಯಿಸಿದ್ದು, 9 ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

Last Updated : May 3, 2019, 12:09 PM IST
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪ್ರಧಾನಿ ಮೋದಿ ಬಯೋಪಿಕ್; ದಿನಾಂಕ ಗೊತ್ತಾ? title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಬಯೋಪಿಕ್​ 'ಪಿಎಂ ನರೇಂದ್ರ ಮೋದಿ' ಚಿತ್ರ ಮೇ 24ರಂದು ಬಿಡುಗಡೆಯಾಗಲಿದೆ. 

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 11ರಂದೇ ಬಿಡುಗಡೆಯಾಗಬೇಕಿದ್ದ ಸಿನಿಮಾ ಹಲವು ವಾದ-ವಿವಾದಗಳ ಬಳಿಕ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಮೇ 24ರಂದು ಬಿಡುಗಡೆಯಾಗಲಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರದ ನಿರ್ಮಾಪಕ ಸಂದೀಪ್ ಸಿಂಗ್, "ಎಲ್ಲ ರೀತಿಯ ತೊಂದರೆಗಳನ್ನು ಎದುರಿಸಿ ಮತ್ತೆ ಮುನ್ನುಗ್ಗಲಿದ್ದೇವೆ. ಮೇ 24 ರಂದು 'ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆಯಾಗಲಿದೆ" ಎಂದಿದ್ದಾರೆ. ಪ್ರಧಾನಿ ಮೋದಿ ಅವರ ಜೀವನಾಧಾರಿತ ಚಿತ್ರ 70ಎಂಎಂ ಪರದೆಯ ಮೇಲೆ ಪ್ರದರ್ಶನಗೊಳ್ಳಲಿದೆ.

ಬಾಲಿವುಡ್ ನಟ ವಿವೇಕ್ ಒಬೆರಾಯ್ ಈ ಚಿತ್ರದಲ್ಲಿ ಮೋದಿ ಅವರ ಪಾತ್ರದಲ್ಲಿ ಅಭಿನಯಿಸಿದ್ದು, 9 ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನೈಜ ಜೀವನದ ಚಿತ್ರ ಕಥೆಯಿರುವ ಸಿನಿಮಾ ಪಾತ್ರಧಾರಿಯಾಗಿ ವಿವೇಕ್ ನಟಿಸುತ್ತಿದ್ದಾರೆ. ಉಳಿದಂತೆ ಬೋಮನ್ ಇರಾನಿ, ಮನೋಜ್ ಜೋಶಿ, ಪ್ರಶಾಂತ್ ನಾರಾಯಣನ್, ಬರ್ಖಾ ಬಿಸ್ಟ್, ರಾಜೇಂದ್ರ ಗುಪ್ತಾ, ಝರಿನಾ ವಹಾಬ್ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ.

Trending News