ಪೈರಸಿಗೆ ಪವರ್‌ಸ್ಟಾರ್‌ ಸಿನಿಮಾ ಬಲಿ..! ಪವನ್‌ ಕಲ್ಯಾಣ್‌ ʼಬ್ರೋʼ ಸಿನಿಮಾದ HD ಪ್ರಿಂಟ್‌ ಲೀಕ್‌

Bro Full HD Movie Leaked Online : ಟಾಲಿವುಡ್‌ ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಜೊತೆಗೆ ನಟಿಸಿರುವ ಬ್ರೋ ಸಿನಿಮಾ ಪೈರಸಿ ಭೂತಕ್ಕೆ ಬಲಿಯಾಗಿದೆ. ಇಂದು ಬಿಡುಗಡೆಯಾದ ಸಿನಿಮಾ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

Written by - Krishna N K | Last Updated : Jul 28, 2023, 10:05 PM IST
  • ಪವನ್‌ ಕಲ್ಯಾಣ್‌ ನಟನೆ ಬ್ರೋ ಸಿನಿಮಾ ಪೈರಸಿ ಭೂತಕ್ಕೆ ಬಲಿಯಾಗಿದೆ.
  • ಸಿನಿಮಾದ ಹೆಚ್‌ಡಿ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
  • ಬ್ರೋ ಸಿನಿಮಾ ಪೈರಸಿಗೆ ಗುರಿಯಾಗಿದೆ ಎಂದು ವರದಿಯಾಗಿದೆ.
ಪೈರಸಿಗೆ ಪವರ್‌ಸ್ಟಾರ್‌ ಸಿನಿಮಾ ಬಲಿ..! ಪವನ್‌ ಕಲ್ಯಾಣ್‌ ʼಬ್ರೋʼ ಸಿನಿಮಾದ HD ಪ್ರಿಂಟ್‌ ಲೀಕ್‌ title=

Pawan kalyan Bro movie : ಟಾಲಿವುಡ್‌ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬ್ರೋ ಸಿನಿಮಾ ಪೈರಸಿಗೆ ಗುರಿಯಾಗಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಯ ಪ್ರಕಾರ ಈ ಚಲನಚಿತ್ರವು ಕುಖ್ಯಾತ ಟೊರೆಂಟ್ ಸೈಟ್‌ಗಳಾದ ಮೂವಿರುಲ್ಜ್, ತಮಿಳ್‌ರಾಕರ್ಸ್, ಫಿಲ್ಮಿಜಿಲ್ಲಾ, ಐಬೊಮ್ಮ, ತಮಿಳ್‌ಯೋಗಿ ಮತ್ತು ತಮಿಳ್‌ಬ್ಲಾಸ್ಟರ್ಸ್‌ನಲ್ಲಿ ಸೋರಿಕೆಯಾಗಿದೆ.

ಸದ್ಯ ಬ್ರೋ ಚಲನಚಿತ್ರ ತಯಾರಕರು ಪೈರಸಿ ಹಿಂದೆ ಪತ್ತೆಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ತ್ರಿವಿಕ್ರಮ್ ಶ್ರೀನಿವಾಸ್ ಅವರ ಚಿತ್ರಕಥೆಯಿಂದ ಬ್ರೋ ಅನ್ನು ಸಮುದ್ರಕನಿ ನಿರ್ದೇಶಿಸಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಝೀ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಿಸಲಾದ ಬ್ರೋ, ಸಮುದ್ರಕನಿ ಅವರ ಸ್ವಂತ ತಮಿಳು ಚಲನಚಿತ್ರ ವಿನೋದಯ ಸಿತಂ (2021) ನ ರಿಮೇಕ್ ಆಗಿದೆ. 

ಇದನ್ನೂ ಓದಿ: ಬಹುನಿರೀಕ್ಷಿತ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಟೀಸರ್ ರಿಲೀಸ್..! ಧನುಷ್-ಶಿವಣ್ಣ ಪಾತ್ರ ರಿವೀಲ್‌

ಚಿತ್ರದಲ್ಲಿ ಪವನ್ ಕಲ್ಯಾಣ್, ಸಾಯಿ ಧರಮ್ ತೇಜ್, ಪ್ರಿಯಾ ಪ್ರಕಾಶ್ ವಾರಿಯರ್, ಕೇತಿಕಾ ಶರ್ಮಾ, ಬ್ರಹ್ಮಾನಂದಂ ಮತ್ತು ಸುಬ್ಬರಾಜು ನಟಿಸಿದ್ದಾರೆ. ತಮನ್ ಎಸ್ ಅವರ ಸಂಗೀತ ಸಂಯೋಜನೆ, ಸುಜಿತ್ ವಾಸುದೇವ್ ಅವರ ಛಾಯಾಗ್ರಹಣ ಮತ್ತು ನವೀನ್ ನೂಲಿ ಸಂಕಲನವಿದೆ. ಚಿತ್ರವು ಜುಲೈ 28, 2023 ರಂದು ಬಿಡುಗಡೆಯಾಯಿತು. 

ಇತ್ತೀಚಿಗೆ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಕೂಡ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. ಇದಕ್ಕೂ ಮೊದಲು, ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್, ಶಾರುಖ್ ಖಾನ್ ಅವರ ಪಠಾನ್, ಅಜಯ್ ದೇವಗನ್ ಅವರ ಭೋಲಾ ಮತ್ತು ಕಾರ್ತಿಕ್ ಆರ್ಯನ್ ಅವರ ಇತ್ತೀಚಿನ ಬಿಡುಗಡೆಯಾದ ಸತ್ಯಪ್ರೇಮ್ ಕಿ ಕಥಾ ಸೇರಿದಂತೆ ಅನೇಕ ಸಿನಿಮಾಗಳು ಪೈರಸಿಗೆ ಬಲಿಯಾಗಿದ್ದವು.

(ಸೂಚನೆ: 1957 ರ ಹಕ್ಕುಸ್ವಾಮ್ಯ ಕಾಯಿದೆಯಡಿಯಲ್ಲಿ ಪೈರಸಿಯು ಕ್ರಿಮಿನಲ್ ಅಪರಾಧವಾಗಿದೆ. Zee News ಯಾವುದೇ ರೂಪದಲ್ಲಿ ಪೈರಸಿಯನ್ನು ಉತ್ತೇಜಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News