Pathaan boycott : ಅಕ್ಷಯ್‌ ಮಾಡಿದ್ರೆ Ok ಶಾರುಖ್‌ಗೆ NO ಯಾಕೆ..? ಇಲ್ಲೂ ಇದೆ ʼಕೇಸರಿʼ...!

ನಟ ಶಾರುಖ್‌ ಖಾನ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪಠಾಣ್‌ʼ ವಿರುದ್ಧ ಬಾಯ್ಕಾಟ್‌ ಕೂಗು ಕೇಳಿ ಬರುತ್ತಿದೆ. ಬೇಷರಂ ರಂಗ್‌ನ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಗುರಿಯಾಗಿದೆ. ಇದೀಗ ನೆಟ್ಟಿಗರು ಅಕ್ಷಯ್‌ ಕುಮಾರ್‌ ಅವರನ್ನು ಈ ಮ್ಯಾಟರ್‌ಗೆ ಎಳೆದು ತಂದಿದ್ದು, ದೆ ದನಾ ದನ್‌ ಸಿನಿಮಾದಲ್ಲಿ ಕತ್ರೀನಾ ಕೇಸರಿ ಸೀರೆ ತೊಟ್ಟಿದ್ದಾರೆ ಎಂದು ಸಾಕ್ಷಿ ಮುಂದಿಟ್ಟು ಟ್ರೋಲ್‌ ಮಾಡುತ್ತಿದ್ದಾರೆ.

Written by - Krishna N K | Last Updated : Dec 14, 2022, 06:45 PM IST
  • ಬಹುನಿರೀಕ್ಷಿತ ಸಿನಿಮಾ ʼಪಠಾಣ್‌ʼ ವಿರುದ್ಧ ಬಾಯ್ಕಾಟ್‌ ಕೂಗು ಕೇಳಿ ಬರುತ್ತಿದೆ
  • ಖಾನ್‌ ಕೇಸರಿ ಮ್ಯಾಟರ್‌ಗೆ ಅಕ್ಷಯ್‌ ಕುಮಾರ್‌ ಅವರನ್ನು ಎಳೆದು ತಂದ ನೆಟ್ಟಿಗರು
  • ದೆ ದನಾ ದನ್‌ ಸಿನಿಮಾದಲ್ಲಿ ಕತ್ರೀನಾ ಕೆಸರಿ ಸೀರೆ ತೊಟ್ಟಿಕ್ಕೆ ವಿರೋಧ ಯಾಕ್‌ ಇದ್ದಿಲ್ಲ ಎಂದು ಆಕ್ರೋಶ
Pathaan boycott : ಅಕ್ಷಯ್‌ ಮಾಡಿದ್ರೆ Ok ಶಾರುಖ್‌ಗೆ NO ಯಾಕೆ..? ಇಲ್ಲೂ ಇದೆ ʼಕೇಸರಿʼ...! title=

Pathan Movie : ನಟ ಶಾರುಖ್‌ ಖಾನ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪಠಾಣ್‌ʼ ವಿರುದ್ಧ ಬಾಯ್ಕಾಟ್‌ ಕೂಗು ಕೇಳಿ ಬರುತ್ತಿದೆ. ಬೇಷರಂ ರಂಗ್‌ನ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಗುರಿಯಾಗಿದೆ. ಇದೀಗ ನೆಟ್ಟಿಗರು ಅಕ್ಷಯ್‌ ಕುಮಾರ್‌ ಅವರನ್ನು ಈ ಮ್ಯಾಟರ್‌ಗೆ ಎಳೆದು ತಂದಿದ್ದು, ದೆ ದನಾ ದನ್‌ ಸಿನಿಮಾದಲ್ಲಿ ಕತ್ರೀನಾ ಕೇಸರಿ ಸೀರೆ ತೊಟ್ಟಿದ್ದಾರೆ ಎಂದು ಸಾಕ್ಷಿ ಮುಂದಿಟ್ಟು ಟ್ರೋಲ್‌ ಮಾಡುತ್ತಿದ್ದಾರೆ.

ಹೌದು.. ನೆಟ್ಟಿಗರು ಯಾವಾಗ ಯಾವ ವಿಚಾರಕ್ಕಾಗಿ ಯಾರನ್ನು ಗುರಿಯಾಗಿಸಿಕೊಂಡು ಟ್ರೋಲ್‌ ಮಾಡ್ತಾರೆ ಅಂತ ಹೇಳೋಕೆ ಆಗಲ್ಲ. ಇದೀಗ ದೀಪಿಕಾ ತೊಟ್ಟಿದ್ದ ಕೇಸರಿ ಬಿಕಿನಿ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿ #BoycottPathaan ಎಂಬ ಹ್ಯಾಷ್‌ ಟ್ಯಾಗ್‌ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ, ಖಾನ್‌ ಪ್ಯಾನ್ಸ್‌ ಇಂಟರ್‌ನೆಟ್‌ ಅಖಾಡಕ್ಕೆ ಅಕ್ಷಯ್‌ಕುಮಾರ್‌ ಅವರನ್ನು ಎಳೆದು ತಂದಿದ್ದು, ಅಕ್ಕಿಗೆ ಒಂದು ನ್ಯಾಯ ಕಿಂಗ್‌ ಖಾನ್‌ ಒಂದು ನ್ಯಾಯವೇ ಅಂತ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಈ ಕುರಿತು ಮೆಮ್ಸ್‌ ಹರಿದಾಡುತ್ತಿವೆ.

ಇದನ್ನೂ ಓದಿ: Ram Charan : ರಾಮ್‌ಚರಣ್‌ ಜೊತೆ ಕನ್ನಡಿಗ ಡೈರೆಕ್ಟರ್‌ ಸಿನಿಮಾ..! ಯಾರು ಆ ನಿರ್ದೇಶಕ..?

ಇನ್ನು ಶಾರುಖ್​ ಖಾನ್ ನಟನೆಯ ʼಪಠಾಣ್ʼ​ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ʼಬೇಷರಂ ರಂಗ್​..ʼ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. 3 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಪಡೆದುಕೊಂಡಿದೆ. ಇದರ ನಡುವೆ ಹಾಡಿನಲ್ಲಿ ಅಶ್ಲೀಲತೆ ಹೆಚ್ಚಾಗಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಅಲ್ಲದೆ, ದೀಪಿಕಾ ಧರಿಸಿರುವ ಕೆಸರಿ ಬಿಕನಿ ಬಗ್ಗೆಯೂ ನೆಟಿಜನ್ಸ್‌ ಚಕಾರವೆತ್ತಿದ್ದಾರೆ.

ಪಠಾಣ್‌ ಸಿನಿಮಾಗೆ ಸಿದ್ದಾರ್ಥ್‌ ಆನಂದ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಶಾರುಖ್‌ ಖಾನ್‌, ದೀಪಿಕಾ ಪುಡುಕೋಣೆ, ಜಾನ್‌ ಅಬ್ರಾಹಂ ಸಿನಿಮಾದಲ್ಲಿದ್ದಾರೆ. 2023 ಜನವರಿ 25 ರಂದು ಪಠಾಣ್‌ ವಿಶ್ವದಾದ್ಯಂತ ತೆರೆ ಮೇಲೆ ಅಪ್ಪಳಿಸಲಿದೆ. ಆದ್ರೆ ಈ ನಡುವೆ ಬಾಯ್ಕಾಟ್‌ ಮಾತುಗಳು ಕೇಳಿಬರುತ್ತಿರುವುದರಿಂದ ಚಿತ್ರದ ಬಾಕ್ಸ್‌ ಆಫೀಸ್‌ಗೆ ಹೊಡೆತ ಬಿಳುವ ಲಕ್ಷಣಗಳು ಕಂಡು ಬರುತ್ತಿದೆ. ಒಟ್ಟಾರೆಗೆ ಮುಂದೆನಾಗುತ್ತೆ ಅಂತ ಕಾಯ್ದು ನೋಡ್ಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News