Oscar 2023 : ಪ್ರಶಸ್ತಿ ತೆಗೆದುಕೊಂಡು ಹಾಡಿನ ರೂಪದಲ್ಲಿ ಮಾತನಾಡಿದ ಎಂ. ಎಂ. ಕೀರವಾಣಿ ..!

Oscar Award : ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿ ಆನಂದದಲ್ಲಿ ತೇಲಾಡಿದ ಕೀರವಾಣಿ ಹಾಡಿನ ರೂಪದಲ್ಲಿ ವೇದಿಕೆ ಮೇಲೆ ಮಾತನಾಡಿದರು. 'ನಾಟು ನಾಟು' ಎನ್ನುವ ಅದ್ಭುತ ಸಾಂಗ್ ಸೃಷ್ಟಿಸಿ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಹಾಗೂ ಗೀತ ಸಾಹಿತಿ ಚಂದ್ರಬೋಸ್ ಇತಿಹಾಸ ನಿರ್ಮಿಸಿದ್ದಾರೆ. ಕೋಟಿ ಕೋಟಿ ಭಾರತೀಯರ ಕನಸು ನನಸಾಗಿದೆ. ರಾಜಮೌಳಿ ಮತ್ತವರ ತಂಡ ಹಾಗೂ ತಂಡ ಪ್ರತಿ ಭಾರತೀಯರು ಹೆಮ್ಮೆ ಪಡುವಂತೆ RRR ಆಸ್ಕರ್ ಎತ್ತಿ ಹಿಡಿದಿದೆ.

Written by - Zee Kannada News Desk | Last Updated : Mar 13, 2023, 12:29 PM IST
  • . "ಆಸ್ಕರ್ ನೀಡಿದ ಅಕಾಡೆಮಿ ಧನ್ಯವಾದ. ಈ ದಿನ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಸಂತಸ ತಂದಿದೆ.
  • ಸಂತಸ ತಡೆಯಲಾಗದೇ ಪ್ರಶಸ್ತಿಯನ್ನು ಡಾಲ್ಬಿ ಹಾಲ್‌ನ ಎಲ್ಲಾ ಮೂಲೆಗೂ ತೋರಿಸಿ ಖುಷಿಪಟ್ಟರು.
  • ತೆಲುಗು ಭಾಷೆಯಲ್ಲಿ 56 ಅಕ್ಷರಗಳಿದ್ದು, ಸಾಕಷ್ಟು ಪದಗಳ ಬಳಕೆ ಸಾಕಷ್ಟು ಭಾವಗಳು ನಮ್ಮ ಭಾಷೆಗಿದೆ.
Oscar 2023 : ಪ್ರಶಸ್ತಿ ತೆಗೆದುಕೊಂಡು ಹಾಡಿನ ರೂಪದಲ್ಲಿ ಮಾತನಾಡಿದ ಎಂ. ಎಂ. ಕೀರವಾಣಿ ..!  title=

ತೆಲುಗು ಸಿನಿಮಾ ಗೀತೆಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಇಡೀ ಪ್ರಪಂಚ 'ನಾಟು ನಾಟು' ಎಂದು ಕುಣಿತ್ತಿದೆ. ಆಸ್ಕರ್ ಟ್ರೋಫಿ ಕೈಯಲ್ಲಿ ಹಿಡಿದು ಕೀರವಾಣಿ ಮಾತು ಮರೆತು ಹಾಡಿನ ರೂಪದಲ್ಲಿ ಸಂತೋಷ ವ್ಯಕ್ತಪಡಿಸಿದರು. "ಆಸ್ಕರ್ ನೀಡಿದ ಅಕಾಡೆಮಿ ಧನ್ಯವಾದ. ಈ ದಿನ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಸಂತಸ ತಂದಿದೆ. ನನ್ನ ಮನಸ್ಸಿನಲ್ಲಿ ಒಂದು ಆಸೆ ಇತ್ತು. ರಾಜಮೌಳಿ ಮತ್ತವರ ತಂಡ ಹಾಗೂ ತಂಡ ಪ್ರತಿ ಭಾರತೀಯರು ಹೆಮ್ಮೆ ಪಡುವಂತೆ RRR ಆಸ್ಕರ್ ಎತ್ತಿ ಹಿಡಿದಿದೆ. ನಮ್ಮನ್ನು ಪ್ರಪಂಚದ ಅಗ್ರಸ್ಥಾನದಲ್ಲಿ ನಿಲ್ಲಿಸಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಈ ಪ್ರಶಸ್ತಿ ತಲುಪುತ್ತದೆ. 

 ಸಂತಸ ತಡೆಯಲಾಗದೇ ಪ್ರಶಸ್ತಿಯನ್ನು ಡಾಲ್ಬಿ ಹಾಲ್‌ನ ಎಲ್ಲಾ ಮೂಲೆಗೂ ತೋರಿಸಿ ಖುಷಿಪಟ್ಟರು. ಕೊನೆಗೆ 'ನಮಸ್ತೆ' ಎಂದು ಹೇಳಿದರು. ಬಳಿಕ ಆಸ್ಕರ್ ಬ್ಯಾಕ್‌ಸ್ಟೇಜ್‌ನಲ್ಲಿ ಹಾಲಿವುಡ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. "ಕೆಲವೇ ನಿಮಿಷಗಳ ಹಿಂದೆ ನಮ್ಮ ಹಾಡು ಪ್ರಪಂಚದ ಅಗ್ರಸ್ಥಾನದಲ್ಲಿ ನಿಂತಿದ್ದು ಖುಷಿ ಆಯಿತು. ನನಗೆ ಬಹಳ ಹೆಮ್ಮೆ ಆಗುತ್ತಿದೆ. ನಮ್ಮ ದೇಶ, ನಮ್ಮ ತಂಡ, ಚಂದ್ರಬೋಸ್ ಸೇರಿದಂತೆ ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ ಇದು" ಎಂದು ಕೀರವಾಣಿ ಹೇಳಿದ್ದಾರೆ. 

ಇದನ್ನೂ ಓದಿ-Oscars 2023 : ಆಸ್ಕರ್‌ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ.. ಕಾರಣ?

ಮತ್ತೊಂದು ಕಡೆ ಗೀತ ಸಾಹಿತಿ ಚಂದ್ರಬೋಸ್ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು ವೇದಿಕೆ ಮೇಲೆ ಮಾತನಾಡಿದ ಅವರು " ತೆಲುಗು ಭಾಷೆಯಲ್ಲಿ 56 ಅಕ್ಷರಗಳಿದ್ದು, ಸಾಕಷ್ಟು ಪದಗಳ ಬಳಕೆ ಸಾಕಷ್ಟು ಭಾವಗಳು ನಮ್ಮ ಭಾಷೆಗಿದೆ. ನಮ್ಮ ಭಾಷೆ ಬಹಳ ಶ್ರೇಷ್ಠ ಭಾಷೆ. ಸಂಗೀತವನ್ನು ಒಳಗೊಂಡ ಭಾಷೆ ತೆಲುಗು ಭಾಷೆ, ಸುಮ್ಮನೆ ಒಂದು ಪದ ಬರೆದರು ಅದು ಸಂಗೀತಮಯವಾಗಿರುತ್ತದೆ. ಅದೇ ರೀತಿ RRR ಚಿತ್ರದ ಹಾಡನ್ನು ಅರ್ಥಮಾಡಿಕೊಂಡ ತೆಲುಗು ಭಾಷೆ ಬಲ್ಲವರು ಇಷ್ಟಪಡುತ್ತಾರೆ. ನಾನು ಮೊದಲು ಈ ಪ್ರಶಸ್ತಿಯನ್ನು ಭಾರತಕ್ಕೆ ಹೋಗಿ ನನ್ನ ಹೆಂಡತಿ ಹಾಗೂ ಮಕ್ಕಳಿಗೆ ತೋರಿಸಬೇಕು ಎನ್ನುವುದು ನನ್ನ ಆಸೆ"  ಎಂದು ಹೇಳಿದರು. 

ಇದನ್ನೂ ಓದಿ-Oscars 2023: ಆಸ್ಕರ್ ಪ್ರಶಸ್ತಿ ಕೈ ತಪ್ಪಿದ್ದ ಭಾರತೀಯ ಅತ್ಯುತ್ತಮ ಸಾಕ್ಷ್ಯಚಿತ್ರ ಯಾವುದು ಗೊತ್ತಾ? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News