ಆ ದಿನವೇ ʼಕಾಂತಾರ-2ʼ ಮುಹೂರ್ತ..ರಿಷಬ್‌ ಶೆಟ್ಟಿ ಬಿಚ್ಚಿಟ್ಟ ಸತ್ಯ ಏನು ಗೊತ್ತಾ..?

Kantara-2 : ರಿಷಬ್‌ ಶೆಟ್ಟಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಹೆಚ್ಚು ಸಂಭ್ರಮ ಸಡಗರ ತುಂಬಿತ್ತು. ಅದೇ ಸಮಯದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ನಟ ʼಕಾಂತಾರ 2ʼ ಸಿನಿಮಾ ಕುರಿತು ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Written by - Savita M B | Last Updated : Jul 8, 2023, 02:06 PM IST
  • ರಿಷಬ್‌ ಶೆಟ್ಟಿ ಸದ್ಯ ʼಕಾಂತಾರ-2ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
  • ಚಿತ್ರದ ಬಗ್ಗೆ ಅನೇಕ ಅಂತೆಕಂತೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
  • ರಿಷಬ್‌ ಶೆಟ್ಟಿ ಮುಂದಿನ ಸಿನಿಮಾ ಕಾಂತಾರ 2 ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ
ಆ ದಿನವೇ ʼಕಾಂತಾರ-2ʼ ಮುಹೂರ್ತ..ರಿಷಬ್‌ ಶೆಟ್ಟಿ ಬಿಚ್ಚಿಟ್ಟ ಸತ್ಯ ಏನು ಗೊತ್ತಾ..?  title=

Rishab Shetty : ನಟ, ನಿರ್ದೇಶಕ ರಿಷಬ್‌ ಶೆಟ್ಟಿ ನಂದಿ ಲಿಂಕ್ಸ್‌ ಗೌಂಡ್‌ನಲ್ಲಿ ಅಭಿಮಾನಿಗಳ ಜೊತೆ ತಮ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಾಂತಾರ ಯಶಸ್ವಿಯಾದ ಬಳಿಕ ನಟ ಇದೇ ಮೊದಲ ಬಾರಿಗೆ ಅಭಿಮಾನಿಗಳನ್ನು ಬೇಟಿ ಮಾಡಿದ್ದಾರೆ. 

ಇನ್ನು ರಿಷಬ್‌ ಶೆಟ್ಟಿ ಸದ್ಯ ʼಕಾಂತಾರ-2ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಚಿತ್ರದ ಬಗ್ಗೆ ಅನೇಕ ಅಂತೆಕಂತೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳ ಜೊತೆಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ರಿಷಬ್‌ ಶೆಟ್ಟಿ ಅವರು ಮಾದ್ಯಮಗಳೊಂದಿಗೆ ಮಾತನಾಡಿ ಮುಂದಿನ ಸಿನಿಮಾ ಕಾಂತಾರ 2 ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಇದನ್ನು ಒದಿ-ʼಕಿರಿಕ್‌ ಹುಡುಗಿʼಯ ಖಡಕ್‌ ಮೈಮಾಟ.. ಸಂಯುಕ್ತಾ ಟಾಪ್‌ಲೆಸ್‌ ವಿಡಿಯೋ ವೈರಲ್‌

"ಕಾಂತಾರ-2 ಚಿತ್ರ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈಗ ಸಂಭಾಷಣೆ ಭಾಗವನ್ನು ಪೂರ್ಣಗೊಳಿಸಿದ್ದೇವೆ. ಇನ್ನೂ ಕಲಾವಿದರ ಆಯ್ಕೆ ನಡೆಯಲಿದ್ದು, ತದನಂತರ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ ಅಧಿಕೃತವಾಗಿ ಸಿನಿಮಾ ಚಿತ್ರೀಕರಣ ಬಗ್ಗೆ ಘೋಷಣೆ ಮಾಡಲಿದೆ" ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ. 

ಕಾಂತಾರ 2 ಸಿನಿಮಾ ಇದೇ ವರ್ಷ ಘೋಷಣೆಯಾಗುತ್ತೆ, ಚಿತ್ರೀಕರಣ ಕೂಡ ನಡೆಯುತ್ತಿದೆ. ಇನ್ನು ಈ ಸಿನಿಮಾದ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಅದ್ಯಾವುದು ನಿಜವಲ್ಲ. ನಾವು ಸಿನಿಮಾ ಚಿತ್ರೀಕರಣವನ್ನು ಮಳೆಯಲ್ಲೇ ಮಾಡುತ್ತೇವೆ. ಉದ್ದ ಗಡ್ಡವನ್ನು ಬಿಡುತ್ತೇನೆ. ವಿಶೇಷ ಕಸರತ್ತುಗಳನ್ನು ಕಲಿಯುತ್ತಿದ್ದೇನೆ, ಕಾಂತಾರ-1 ಚಿತ್ರ ಮುಹೂರ್ತ ಮಾಡಿದ ಸಮಯದಲ್ಲಿಯೇ ಕಾಂತಾರ-2 ಸಿನಿಮಾದ ಮುಹೂರ್ತವೂ ನಡೆಯಲಿದೆ ಎಂದೆಲ್ಲಾ ವದಂತಿಗಳು ಹರಿದಾಡುತ್ತಿವೆ. ಇದು ಹೊಸ ಸಿನಿಮಾ ಮುಹೂರ್ತ ಬೇರೆ ಸಮಯಕ್ಕೆ ನಿಗದಿಯಾಗುತ್ತದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ನಿರ್ಧಾರ ತೆಗೆದುಕೊಳ್ಳುತ್ತದೆ." ಎಂದು ಹೇಳಿದ್ದಾರೆ. 

ಇದನ್ನು ಒದಿ-Highest Taxpayer: ಶಾರುಖ್‌, ಬಿಗ್‌ ಬಿ, ಸಲ್ಲುಗಿಂತ ಹೆಚ್ಚು Tax ಕಟ್ಟುತ್ತಾರೆ ಈ ಸ್ಟಾರ್‌ ನಟ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News