ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಕೊಡುತ್ತಿದ್ದಾರೆ ಬಿಗ್ ಸರ್ಪ್ರೈಸ್ ?

ಪುಷ್ಪ 2 ಬರುತ್ತಾ ಯಾವಾಗ ಬರುತ್ತೆ ಏನಿದೆ ಅಪ್ಡೇಟ್ಸ್ ಅಂತ ಎಲ್ಲಾ ಸಿನಿಪ್ರಿಯರು ಕೇಳುತ್ತಲೇ ಇದ್ದಾರೆ. ಇದೀಗ ಪುಷ್ಪ2 ಸಿನಿಮಾದ ಗಾಸಿಪ್ ಮ್ಯಾಟರ್ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿದೆ. 

Written by - YASHODHA POOJARI | Last Updated : Mar 1, 2023, 11:52 AM IST
  • ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ ಸದ್ದಾಗಿತ್ತು ಪುಷ್ಪ
  • ಪುಷ್ಪಾ 2 ನಿರೀಕ್ಷೆಯಲ್ಲಿ ಅಭಿಮಾನಿಗಳು
  • ಅಲ್ಲೂ ಅರ್ಜುನ್ ಜನ್ಮ ದಿನದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ
ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಕೊಡುತ್ತಿದ್ದಾರೆ ಬಿಗ್ ಸರ್ಪ್ರೈಸ್ ? title=

ಬೆಂಗಳೂರು : ಅಲ್ಲು ಅರ್ಜುನ್ ಮತ್ತು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ ಸದ್ದಾಗಿತ್ತು.ಇವತ್ತು ಕೂಡಾ ಜನ ಪುಷ್ಪ ಸಿನಿಮಾದ ಹ್ಯಾಂಗ್ ಓವರ್ ನಲ್ಲಿ ಇದ್ದಾರೆ ಅಂತ ಹೇಳಿದರೆ ತಪ್ಪಿಲ್ಲ. ಪುಷ್ಪ 2 ಬರುತ್ತಾ ಯಾವಾಗ ಬರುತ್ತೆ ಏನಿದೆ ಅಪ್ಡೇಟ್ಸ್ ಅಂತ ಎಲ್ಲಾ ಸಿನಿಪ್ರಿಯರು ಕೇಳುತ್ತಲೇ ಇದ್ದಾರೆ. ಇದೀಗ ಪುಷ್ಪ2 ಸಿನಿಮಾದ ಗಾಸಿಪ್ ಮ್ಯಾಟರ್ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿದೆ. 

ಏಪ್ರಿಲ್​ 8ರಂದು ಅಲ್ಲು ಅರ್ಜುನ್​ ಜನ್ಮದಿನ. ಆ ದಿನದಂದು ನಿರ್ದೇಶಕ ಸುಕುಮಾರ್​  ಸಿಹಿ ಸುದ್ದಿ ಕೊಡಲು ಸಜ್ಜಾಗಿದ್ದಾರೆ ಅಂತ ಹೇಳಲಾಗುತ್ತಿದೆ.  ನಟ ಅಲ್ಲು ಅರ್ಜುನ್​ ಅವರು ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ : Kiccha Sudeep : ಕನ್ನಡ ಸಿನಿಮಾ ಇಂಡಸ್ಟ್ರಿ ಕಿಚ್ಚ ಸುದೀಪ್ ಪಾಲಿಗೆ ದೇವಸ್ಥಾನ.!

ಈ ಸಿನಿಮಾದ ಅಪ್​ಡೇಟ್​ ತಿಳಿಯಲು ಅಭಿಮಾನಿಗಳು  ಬಹಳ  ದಿನಗಳಿಂದ  ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನ ಏಪ್ರಿಲ್ 8 ರಂದು ಈ ಚಿತ್ರದ ಟೀಸರ್ ಬಿಡುತ್ತಾರೆ ಅನ್ನೋ ಮಾತು ಇದೀಗ  ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೂ ಈ ಬಗ್ಗೆ ಗಾಸಿಪ್​ ಬಲವಾಗಿ ಹಬ್ಬಿದೆ. 

ಏಪ್ರಿಲ್​ 8ರಂದು ಅಲ್ಲು ಅರ್ಜುನ್​ ಜನ್ಮದಿನದಂದು ನಿರ್ದೇಶಕ ಸುಕುಮಾರ್​ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂಬುದು ಹಲವರ ನಂಬಿಕೆ. ಹಾಗಾಗಿ ಆ ದಿನಾಂಕದ ಮೇಲೆ ಇದೀಗ ಚಿತ್ರ ರಸಿಕ ಕಣ್ಣು ನೆಟ್ಟಿದೆ. ದೊಡ್ಡ ಕ್ಯಾನ್ವಾಸ್​ನಲ್ಲಿ ‘ಪುಷ್ಪ 2’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಜೊತೆಗೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದ ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ : ಹೀರೋಗಳು ಮಂಚಕ್ಕೆ ಕರೆದಾಗ ನಾನು ಹೋಗಿಲ್ಲ.ಅದಕ್ಕಾಗಿ ಎಲ್ಲಾ ನನ್ನ ಹುಚ್ಚಿ ಅಂದ್ರು -ಕಂಗನಾ ರಣಾವತ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News