ಒಲವೇ ಒಲವೇ.. ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌-Bʼ ಮೆಲೋಡಿ ಸಾಂಗ್‌ ಔಟ್..!

Sapta Sagaradaache Ello Side B: ನಟ ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಬಿ ಚಿತ್ರದ ʼಒಲವೇ ಒಲವೇʼ ಮೆಲೋಡಿ ಸಾಂಗ್‌ ರಲೀಸ್ ಆಗಿದೆ. ಇದು ಚೆಂದದ ಸಾಲುಗಳ ಈ ಹಾಡಿನ ಮೋಡಿ ಮಾಡಲು ಶುರುವಾಗಿದ್ದು, ಕೇಳ್ತಾ ಹೋದ್ರೆ ಆಹ್ಲಾದಕರ ಭಾವನೆ ಮೂಡುತ್ತದೆ.

Written by - Zee Kannada News Desk | Last Updated : Nov 1, 2023, 12:58 PM IST
  • ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಬಿ ಚಿತ್ರದ ʼಒಲವೇ ಒಲವೇʼ ಮೆಲೋಡಿ ಸಾಂಗ್‌ ರಲೀಸ್
  • ಒಲವೇ ಒಲವೇ ಹಾಡು ಮತ್ತೊಮ್ಮೆ ಮನು ಮತ್ತು ಪ್ರಿಯಾ ಪ್ರೀತಿಯ ಪಯಣಕ್ಕೆ ಕರೆದುಕೊಂಡು ಹೋಗುತ್ತದೆಯೆಂದು ಅನಿಸುತ್ತದೆ
  • ನವೆಂಬರ್-17 ರಂದು ವಿಶ್ವದಾದ್ಯಂತ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರ ಬಿಡುಗಡೆ.
ಒಲವೇ ಒಲವೇ.. ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌-Bʼ ಮೆಲೋಡಿ ಸಾಂಗ್‌ ಔಟ್..! title=

Olave Olave Song: ಬಹುನಿರೀಕ್ಷಿತ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಬಿʼ ಸಿನಿಮಾದ ʼಒಲವೇ ಒಲವೇʼ ಮೆಲೋಡಿ ಹಾಡು ರಿಲೀಸ್‌ ಆಗಿದ್ದು,  ಮತ್ತೊಮ್ಮೆ ಮನು ಮತ್ತು ಪ್ರಿಯಾ ಪ್ರೀತಿಯ ಪಯಣಕ್ಕೆ ಕರೆದುಕೊಂಡು ಹೋಗುತ್ತದೆ  ಎಂದು ಅನಿಸುತ್ತದೆ. ಈ ಹಾಡು ಆ ಒಂದು ಭಾವನೆಯನ್ನ ಮೂಡಿಸುತ್ತಿದ್ದು, ತುಂಬಾ ಸರಳ ಮತ್ತು ಸುಂದರ ಪದಗಳ ಈ ಸಾಂಗ್‌ಗೆ ಗಾಯಕಿ ಶ್ರೀಲಕ್ಷ್ಮಿ ಬೆಲ್‌ಮನ್ನು ಕಂಠಸಿರಿಯಲ್ಲಿ ಚೆನ್ನಾಗಿ ಮೂಡಿಬಂದಿದೆ.

ಒಲವೇ ಒಲವೇ ಹಾಡಿನಲ್ಲಿ ತಂಗಾಳಿಯ ಆಲಾಪವೆ ಪಿಸು ಮಾತಿನ ಶೃಂಗಾರವೇ ಅನ್ನುವ ಆರಂಭಿಕ ಸಾಲು ಖುಷಿ ಕೊಡುತ್ತದ್ದು, ಒಲವೇ ಒಲವೇ ಅನ್ನುವ ಇತರ ಸಾಲು ಮನು ಮತ್ತು ಪ್ರಿಯಾ ಪ್ರೀತಿಯ ಹೊಸ ಹೊಳಪನ್ನ ಕಟ್ಟುಕೊಡುತ್ತವೆ. ಮನು ಮತ್ತು ಪ್ರಿಯಾ ಪ್ರೀತಿಯ ಪರಿಯನ್ನ ಸೈಡ್ ಎ ಯಲ್ಲಿ ಎಲ್ಲೂ ನೋಡಿದ್ದಾರೆ.

ಇದನ್ನು ಓದಿ: ನಟಿ ಕಂಗನಾ ಅಭಿನಯದ ʼತೇಜಸ್‌ʼ ಚಿತ್ರ ವೀಕ್ಷಿಸಿ ಭಾವುಕರಾದ ಸಿಎಂ ಯೋಗಿ ಆದಿತ್ಯನಾಥ್..!‌

ಇದೀಗ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲೂ ಅದೇ ಕಥೆ ಮುಂದುವರೆದಿರೋ ಭಾವನೆ ಮೂಡುತ್ತಿದ್ದು,ಬಿ.ಆರ್.ಸುವರ್ಣ ಶರ್ಮಾ ಬರೆದ ಈ ಸಾಂಗ್‌ ನಾಯಕ ಮನು ಹಾಗೂ ನಾಯಕಿ ಪ್ರಿಯಾ ಪ್ರೀತಿಯ ಮುಂದುವರೆದ ಕಥೆಯನ್ನ ಹೇಳುತ್ತಿದ್ದು, ಡೈರೆಕ್ಟರ್ ಹೇಮಂತ್ ರಾವ್ ಈ ಒಂದು ಸಾಂಗ್‌ನ ಸೈಡ್ ಬಿ ಯಲ್ಲಿ ಹೇಗೆ ಕನೆಕ್ಟ್ ಮಾಡ್ತಾರೆ ಅನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಿಸಿದೆ. ಹಾಗೆ ಜೊತೆಗೆ ಈಗಾಗಲೇ ಸೈಡ್ ಎ ಚಿತ್ರದಲ್ಲಿ ಒಂದಿಷ್ಟು ನೆನಪುಗಳೇ ಇದ್ದು, ಸೈಡ್ ಬಿಯಲ್ಲಿ ಏನಿರುತ್ತದೆ ಅನ್ನುವ ಕ್ಯೂರಿಯೋಸಿಟಿ ಜಾಸ್ತಿ ಆಗುತ್ತಿದೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರ ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ಚಾರ್ಲಿ ಬಳಿಕ ರಕ್ಷಿತ್ ಶೆಟ್ಟಿ ಮತ್ತೊಂದು ಪ್ಯಾನ್ ಇಂಡಿಯಾ ಪಯಣ ಹೊರಟ್ಟಿದ್ದಾರೆ. ನವೆಂಬರ್-17 ರಂದು ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News