Bigg Boss OTT : ಹಿಂದಿ 'ಬಿಗ್ ಬಾಸ್' ಸೀಸನ್-15 ಅನ್ನು ನಿರೂಪಣೆ ಮಾಡಲ್ಲ ಸಲ್ಮಾನ್ ಖಾನ್!

ಬಾಲಿವುಡ್ ಬ್ಯಾಡ ಬಾಯ್ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋ 'ಬಿಗ್ ಬಾಸ್ ಒಟಿಟಿ' ಯನ್ನು ಈ ಬಾರಿ ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಮಾಡಲು ಸಜ್ಜಾಗಿದ್ದಾರೆ. ಹೌದು ಈ ಭಾರಿಯ ಬಿಗ್ ಬಾಸ್ ರಿಯಾಲಿಟಿ ಶೋವನ್ನ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿಲ್ಲ.

Written by - Channabasava A Kashinakunti | Last Updated : Jul 24, 2021, 02:25 PM IST
  • ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋ 'ಬಿಗ್ ಬಾಸ್ ಒಟಿಟಿ'
  • ಈ ಬಾರಿ ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್
  • ನಾನು ಮತ್ತೆ ನನ್ನ ತಾಯಿ ಇಬ್ಬರು 'ಬಿಗ್ ಬಾಸ್' ಶೋನ ಬಿಗ್ ಫ್ಯಾನ್ಸ್
Bigg Boss OTT : ಹಿಂದಿ 'ಬಿಗ್ ಬಾಸ್' ಸೀಸನ್-15 ಅನ್ನು ನಿರೂಪಣೆ ಮಾಡಲ್ಲ ಸಲ್ಮಾನ್ ಖಾನ್! title=

ಮುಂಬೈ: ಬಾಲಿವುಡ್ ಬ್ಯಾಡ ಬಾಯ್ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋ 'ಬಿಗ್ ಬಾಸ್ ಒಟಿಟಿ' ಯನ್ನು ಈ ಬಾರಿ ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಮಾಡಲು ಸಜ್ಜಾಗಿದ್ದಾರೆ. ಹೌದು ಈ ಭಾರಿಯ ಬಿಗ್ ಬಾಸ್ ರಿಯಾಲಿಟಿ ಶೋವನ್ನ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿಲ್ಲ.

ಈ ಕುರಿತು ಮಾತನಾಡಿರುವ ಕರಣ್ ಜೋಹರ್(Karan Johar), ನಾನು ಮತ್ತೆ ನನ್ನ ತಾಯಿ ಇಬ್ಬರು 'ಬಿಗ್ ಬಾಸ್' ಶೋನ ಬಿಗ್ ಫ್ಯಾನ್ಸ್. ಇಷ್ಟು ದಿನ ಅದನ್ನ ತಪ್ಪದಷ್ಟೇ ದಿವು ನೋಡುತ್ತಿದ್ದೆವು. ಈ ಬಾರಿ ನಾನೇ ಶೋ ನಿರೂಪಣೆ ಮಾಡುತ್ತಿರುವುದರಿಂದ ಒಂದು ದಿನವೂ ಶೋ ನೋಡುವುದನ್ನ ತಪ್ಪಿಸಿಕೊಳ್ಳುವುದಿಲ್ಲ. ನಾನು ವೀಕ್ಷಕನಾಗಿ ಹೇಳುವುದಾದರೆ, ಈ ಬಿಗ್ ಬಾಸ್ ಮನೆಯಲ್ಲಿ ಮನೆಯಲ್ಲಿ ಬರುವ ಪ್ರತೋಯೊಬ್ಬರು ನಾಟಕದ ಗೊಂಬೆಗಳ ಹಾಗೆ ನನಗೆ ಭಾರಿ ಮನರಂಜನೆ ನೀಡುತ್ತಾರೆ. ನಾನು ಯಾವಾಗಲೂ ಯಾವುದೇ ಕಾರ್ಯಕ್ರಮ ಅಥವಾ ರಿಯಾಲಿಟಿ ಶೋಗಳನ್ನ ಹೋಸ್ಟ್ ಮಾಡುವುದನ್ನ  ಆನಂದಿಸುತ್ತೇನೆ. ಈಗ ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಸಿನಿಮಾ ಹೀರೋ ಆಗಬೇಕ್ಕೆನ್ನುವುದು ನನ್ನ ತಾಯಿಯ ಸೆ ಈಗ ಆ ಕನಸು ನನಸಾಗುತ್ತಿದೆ ಎಂದು ಜೋಹರ್ ಹೇಳಿದ್ದಾರೆ.

ಇದನ್ನೂ ಓದಿ : TV Show On Mobile: ಇನ್ಮುಂದೆ Internet ಸಹಾಯವಿಲ್ಲದೆ ಮೊಬೈಲ್ ಮೇಲೆ ನಿಮ್ಮ ನೆಚ್ಚಿನ TV Show ವಿಕ್ಷೀಸಬಹುದು

'ಬಿಗ್ ಬಾಸ್ ಒಟಿಟಿ'(Bigg Boss OTT) ಹೆಚ್ಚು ಮನರಂಜನಾತ್ಮಕ ಮತ್ತು ಡ್ರಾಮಾಟಿಕ್ (ವಿಷಯವನ್ನು) ಹೊಂದಿರುತ್ತದೆ. ಪ್ರೇಕ್ಷಕರ ಮತ್ತು ನನ್ನ ಸ್ನೇಹಿತರ ನಿರೀಕ್ಷೆಗೆ ತಕ್ಕಂತೆ ನಾನು ಈ ಕಾರ್ಯಕ್ರಮವನ್ನ ಹೋಸ್ಟ್ ಮಾಡಬಲ್ಲೆ ಎಂದು ನಾನು ಭಾವಿಸುತ್ತೇನೆ, ವೀಕೆಂಡ್ ಕಾ ವಾರ್ ಅನ್ನು ಸ್ಪರ್ಧಿಗಳೊಂದಿಗೆ ನನ್ನದೇ ಶೈಲಿಯಲ್ಲಿ ಮತ್ತು ಆನಂದದಾಯಕ ಕ್ಷಣಗಳ ಜೊತೆ ಬರುವೆ, ಮನರಂಜನೆಗಾಗಿ ಕಾಯಿರಿ ಎಂದು ಹೇಳಿದ್ದಾರೆ.

ಆಗಸ್ಟ್ 8 ರಂದು ವೂಟ್‌(Voot)ನಲ್ಲಿ ಪ್ರಥಮ ಎಪಿಸೋಡ್ 'ಬಿಗ್ ಬಾಸ್ ಒಟಿಟಿ' ಯ ಆರನೇ ವಾರವನ್ನ ಕರಣ್ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ : Pornography Video Case: Raj Kundra ಕರೆದುಕೊಂಡು Shilpa Shetty ನಿವಾಸಕ್ಕೆ ತಲುಪಿದ Crime Branch ತಂಡ, ನೇರಾ-ನೇರ ವಿಚಾರಣೆ ಸಾಧ್ಯತೆ

ಡಿಜಿಟಲ್ ಎಕ್ಸ್‌ಕ್ಲೂಸಿವ್ ಪೂರ್ಣಗೊಂಡ ನಂತರ, ಪ್ರದರ್ಶನವು 'ಬಿಗ್ ಬಾಸ್' ನ ಸೀಸನ್ 15(Bigg Boss 15) ಅನ್ನು ಪ್ರಾರಂಭಿಸುವುದರೊಂದಿಗೆ ಕಲರ್ ಫುಲ್ ಮನರಂಜನೆಯ ಜೊತೆಗೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News