‘ಕೆಜಿಎಫ್-2’ ದಾಖಲೆ ಯಾರೂ ಮುರಿಯಲು ಆಗಲ್ಲ: ಆಮೀರ್ ಖಾನ್ ಸಿನಿಮಾ ಸೋತಿದ್ದು ಎಲ್ಲಿ..?

'ಕೆಜಿಎಫ್-ಚಾಪ್ಟರ್‌ 2’ ರಿಲೀಸ್‌ ಆದ ದಿನವೇ 'ಲಾಲ್ ಸಿಂಗ್ ಚಡ್ಡಾ' ಕೂಡ ರಿಲೀಸ್‌ ಆಗಬೇಕಿತ್ತು. ಆದರೆ 'ಕೆಜಿಎಫ್-2' ಮಾಡಿದ ಸೌಂಡ್‌ ನೋಡಿ ಆಮೀರ್‌ ಖಾನ್‌ ತಣ್ಣಗಾಗಿದ್ದರು.

Written by - Malathesha M | Edited by - Puttaraj K Alur | Last Updated : Aug 24, 2022, 07:46 PM IST
  • ಬಾಕ್ಸ್ ಆಫೀಸ್‍ನಲ್ಲಿ ಮಕಾಡೆ ಮಲಗಿದ ‘ಲಾಲ್ ಸಿಂಗ್ ಚಡ್ಡಾ’
  • ಬಾಲಿವುಡ್ ನಟ ಆಮೀರ್ ಖಾನ್ ಸಿನಿಮಾ ಸೋಲಿಗೆ ಕಾರಣವೇನು?
  • ಸಖತ್ ಹವಾ ಕ್ರಿಯೇಟ್ ಮಾಡಿದ ಯಶ್ ಅಭಿನಯದ ‘ಕೆಜಿಎಫ್-2’
‘ಕೆಜಿಎಫ್-2’ ದಾಖಲೆ ಯಾರೂ ಮುರಿಯಲು ಆಗಲ್ಲ: ಆಮೀರ್ ಖಾನ್ ಸಿನಿಮಾ ಸೋತಿದ್ದು ಎಲ್ಲಿ..?  title=
ಮಕಾಡೆ ಮಲಗಿದ ‘ಲಾಲ್ ಸಿಂಗ್ ಚಡ್ಡಾ’

ಬೆಂಗಳೂರು: ಅದೊಂದು ಕಾಲವಿತ್ತು ಆಮೀರ್‌ ಖಾನ್‌ ಸಿನಿಮಾಗಳು ರಿಲೀಸ್‌ ಆಗುತ್ತವೆ ಅಂದ್ರೆ, ದಕ್ಷಿಣ ಭಾರತದ ಸಿನಿಮಾಗಳು ಬಿಡುಗಡೆಗೆ ಹಿಂದೆ-ಮುಂದೆ ನೋಡುವ ಪರಿಸ್ಥಿತಿ ಇತ್ತು. ಅದರಲ್ಲೂ ಕನ್ನಡದ ಸಿನಿಮಾಗಳು ಬಾಲಿವುಡ್‌ ಸ್ಟಾರ್‌ಗಳ ಅಬ್ಬರಕ್ಕೆ ನಲುಗಿದ್ದವು. ಆದ್ರೆ ಈಗ ಟೈಂ ಚೇಂಜ್‌ ಆಗಿದೆ. ಕನ್ನಡ ಸಿನಿಮಾಗಳ ಎದುರು ಬಾಲಿವುಡ್‌ ಮೂವಿಗಳು ಮಕಾಡೆ ಮಲಗುತ್ತಿವೆ. ಇದೀಗ ‘ಲಾಲ್‌ ಸಿಂಗ್‌ ಚಡ್ಡಾ’ ಕೂಡ ಅದೇ ಪಟ್ಟಿ ಸೇರಿದೆ. ‘ಕೆಜಿಎಫ್-2’ ಎದುರು ರಿಲೀಸ್‌ ಆಗಬೇಕಿದ್ದ ಸಿನಿಮಾ ಲೇಟ್‌ ಆಗಿ ರಿಲೀಸ್‌ ಆದ್ರೂ ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ.‌ ‘ಕೆಜಿಎಫ್-2’ ದಾಖಲೆ ಯಾರೂ ಅಳಿಸಲಾಗದು ಎಂಬ ಸಂದೇಶ ಈ ಮೂಲಕ ಬಾಲಿವುಡ್‌ಗೆ ಸಿಕ್ಕಿದೆ.

ಕನ್ನಡಿಗರ ‘ಕೆಜಿಎಫ್’ ಕಂಡರೆ ಬಾಲಿವುಡ್‌ ಸ್ಟಾರ್‌ಗಳಿಗೆ ಅದೇನೋ ಭಯ. ಅದರಲ್ಲೂ ‘ಕೆಜಿಎಫ್- ಚಾಪ್ಟರ್‌ 2’ ರಿಲೀಸ್‌ ಸಂದರ್ಭದಲ್ಲಿ ಬಾಲಿವುಡ್‌ ಬಿಗ್‌ ಸ್ಟಾರ್‌ ಒಬ್ಬರು ಕಠಿಣ ನಿರ್ಧಾರ ಕೈಗೊಂಡು, ತಮ್ಮ ಸಿನಿಮಾ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಿದ್ದರು. ಹೀಗೆ ‘ಕೆಜಿಎಫ್‌-2’ ಎಂಬ ಬಿರುಗಾಳಿಯಿಂದ ಬಚಾವ್‌ ಆದರೂ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದು, ಸೋಲಿನಿಂದ ಕಂಗೆಟ್ಟಿದ್ದಾರೆ ಬಾಲಿವುಡ್‌ನ ಆ ಸ್ಟಾರ್‌ ನಟ.

ಇದನ್ನೂ ಓದಿ: ಹೊಸ ಲುಕ್‌ನಲ್ಲಿ ‘ಅವತಾರ್-1’ ಜಗತ್ತಿನಾದ್ಯಂತ ಗ್ರ್ಯಾಂಡ್ ರೀ ಎಂಟ್ರಿ: ಕಾರಣ ಗೊತ್ತಾ..?

‌ಹೀನಾಯ ಸೋಲು

ಒಂದಾನೊಂದು ಕಾಲದಲ್ಲಿ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಅಂತಾ ಕರೆಸಿಕೊಳ್ಳುತ್ತಿದ್ದ ಆಮಿರ್ ಖಾನ್ ಈಗ ಕನ್ನಡ ಸಿನಿಮಾಗಳನ್ನು ನೋಡುತ್ತಾ ಬೆಚ್ಚಿಬಿದ್ದಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಕನ್ನಡಿಗರ ‘ಕೆಜಿಎಫ್‌’ ಸಿನಿಮಾ ಬಗ್ಗೆ ಆಮಿರ್ ಖಾನ್ ಪದೇ ಪದೆ ನೀಡುತ್ತಿರುವ ಹೇಳಿಕೆ ಈ ಡೌಟ್‌ ಕ್ರಿಯೇಟ್‌ ಮಾಡಿದೆ. ಇನ್ನು ಆಮೀರ್‌ ಹೇಳಿಕೆಗೆ ಪುಷ್ಟಿ ನೀಡುವಂತೆ  'ಲಾಲ್ ಸಿಂಗ್ ಚಡ್ಡಾ' ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದ್ದು, ಕನ್ನಡಿಗರ ಸಿನಿಮಾ ತನ್ನ ದಾಖಲೆಗಳನ್ನು ಹಾಗೇ ಉಳಿಸಿದೆ.

ಬಿಗ್‌ ಲಾಸ್..?

ಅಷ್ಟಕ್ಕೂ 'ಕೆಜಿಎಫ್-ಚಾಪ್ಟರ್‌ 2’ ರಿಲೀಸ್‌ ಆದ ದಿನ 'ಲಾಲ್ ಸಿಂಗ್ ಚಡ್ಡಾ' ಕೂಡ ರಿಲೀಸ್‌ ಆಗಬೇಕಿತ್ತು. ಆದರೆ 'ಕೆಜಿಎಫ್-2' ಮಾಡಿದ ಸೌಂಡ್‌ ನೋಡಿ ಆಮೀರ್‌ ಖಾನ್‌ ತಣ್ಣಗಾಗಿದ್ದರು. ಇದಾದ ಬಳಿಕ ಆಗಸ್ಟ್‌ 11ರಂದು ಸಿನಿಮಾ ರಿಲೀಸ್‌ ಮಾಡಿದ್ದರೂ 'ಲಾಲ್ ಸಿಂಗ್ ಚಡ್ಡಾ' ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭೀಕರ ಸೋಲು ಕಂಡಿದೆ. ಹಾಕಿದ ಬಂಡವಾಳ ಕೂಡ ವಾಪಸ್‌ ಬಂದಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಸುಮಾರು 180 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿದ್ದ  'ಲಾಲ್ ಸಿಂಗ್ ಚಡ್ಡಾ' ಸದ್ದು ಮಾಡದೆ ಸಪ್ಪೆ ಸಪ್ಪೆ ರಿಯಾಕ್ಷನ್‌ ಪಡೆಯುತ್ತಿದೆ. ಆದ್ರೆ ‘ಕೆಜಿಎಫ್‌-2’ ಜಗತ್ತಿನಾದ್ಯಂತ 1300 ಕೋಟಿ ರೂ. ಗಳಿಸಿತ್ತು. ಜೊತೆಗೆ ಬಾಲಿವುಡ್‌ ಪ್ರಾಬಲ್ಯ ಇದ್ದ ಪ್ರದೇಶದಲ್ಲೇ  450 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್‌ ಮಾಡಿತ್ತು.

ಇದನ್ನೂ ಓದಿ: Taapsee Pannu : ತಾಪ್ಸಿ ಪನ್ನುಗೆ ಇದು ಬೇಕಿತ್ತಾ : ಪ್ರೇಕ್ಷಕರಿಗೆ ಚಾಲೆಂಜ್‌ ಹಾಕಿದಕ್ಕೆ ಸಿನಿಮಾ ತೋಪು!

‌ಕನ್ನಡಿಗರ ತಾಕತ್ತು!

'ಕೆಜಿಎಫ್‌- ಚಾಪ್ಟರ್‌ 2’ ಜಗತ್ತಿನಾದ್ಯಂತ ತನ್ನ ತಾಕತ್‌ ಏನು ಅನ್ನೋ ವಿಚಾರವನ್ನು ಈಗಾಗಲೇ ಸಾಬೀತು ಮಾಡಿದೆ. 'ಕೆಜಿಎಫ್‌- ಚಾಪ್ಟರ್‌ 2’ ಹವಾ ಏನು ಅನ್ನೋದನ್ನು ಜಗತ್ತೇ ಕಣ್ತುಂಬಿಕೊಂಡಿದೆ. ಅದರಲ್ಲೂ ಕನ್ನಡ ಸಿನಿಮಾಗಳ ಹವಾ ಎಂತಹದ್ದು ಅಂತಾ ಪರಭಾಷೆ ಸಿನಿಮಾ ಇಂಡಸ್ಟ್ರಿಗೂ ಗೊತ್ತಾಗಿದೆ. ಹೀಗೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿರುವ 'ಕೆಜಿಎಫ್‌- ಚಾಪ್ಟರ್‌ 2’ ತನ್ನ ತಾಕತ್ತು ಏನು ಅಂತಾ ಬಾಲಿವುಡ್‌ ಸ್ಟಾರ್‌ಗಳಿಗೂ ಮನವರಿಕೆ ಮಾಡಿದೆ. ಇದೇ ರೀತಿ ನೋಡ್ತಾ ಬರೋದಾದ್ರೆ, ಇನ್ನೂ ಹತ್ತಾರು ವರ್ಷ ಉರುಳಿದರೂ 'ಕೆಜಿಎಫ್‌- ಚಾಪ್ಟರ್‌ 2- ನಿರ್ಮಿಸಿರುವ ಬಾಕ್ಸ್‌ ಆಫೀಸ್‌ ದಾಖಲೆಗಳನ್ನು ಯಾರೂ ಮೀರಿಸಲು ಆಗಲ್ಲ.

ಒಟ್ಟಾರೆ ‘ಕೆಜಿಎಫ್‌' ಸ್ಯಾಂಡಲ್‌ವುಡ್‌ ಪಾಲಿಗೆ ರಿಯಲ್‌ ಗೋಲ್ಡ್.‌ ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದ್ರೆ ‘ಕೆಜಿಎಫ್- 2’ ವಿಶ್ವದಾದ್ಯಂತ 1,300 ಕೋಟಿ ರೂ.ಗೂ ಹೆಚ್ಚು ಹಣ ಬಾಚಿದ್ದು‌, ಹಿಂದಿ ಬೆಲ್ಟ್ ನಲ್ಲಿ 450 ಕೋಟಿ ರೂ. ಗಳಿಸಿದೆ. ಈ ಮೂಲಕ ಹಲವು ದಾಖಲೆಗಳನ್ನು ‘ಕೆಜಿಎಫ್‌ ಚಾಪ್ಟರ್‌ 2’ ತನ್ನ ಹೆಸರಿಗೆ ಬರೆದುಕೊಂಡಿದ್ದು, ಈ ದಾಖಲೆಗಳನ್ನು ಮುರಿಯಲು ‘ಕೆಜಿಎಫ್‌ ಚಾಪ್ಟರ್‌ 3’ ಬರಬೇಕಿದೆ. ಹೀಗೆ ಯಶ್‌ ಅವರೇ ತಮ್ಮ ದಾಖಲೆಯನ್ನು ಮುರಿಯಲು ಸಾಧ್ಯ. ಇದನ್ನ ಬಿಟ್ಟು ‘ಕೆಜಿಎಫ್‌ ಚಾಪ್ಟರ್‌ 2’ ಸೃಷ್ಟಿಸಿದ್ದ ದಾಖಲೆಗಳನ್ನು ಬೇರಾರೂ ಮುರಿಯಲು ಆಗಲ್ಲವೆಂಬ ಚರ್ಚೆ ಅಭಿಮಾನಿಗಳ ಮಧ್ಯೆ ಶುರುವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News